ಸ್ಮಾರ್ಟ್​ವಾಚ್​ ಮಾರುಕಟ್ಟೆಗೆ ನಾರ್ಡ್​ ಎಂಟ್ರಿ.. ಶೀಘ್ರ ಭಾರತದಲ್ಲಿ ವಾಚ್​ ಬಿಡುಗಡೆ

author img

By

Published : Sep 19, 2022, 3:34 PM IST

nord-forays-into-wearable-market

ಸ್ಮಾರ್ಟ್​ಫೋನ್​ ದೈತ್ಯ ಒನ್​ಪ್ಲಸ್​ ನಾರ್ಡ್​ ಸ್ಮಾರ್ಟ್​ವಾಚ್​ ಮಾರುಕಟ್ಟೆಗೂ ಲಗ್ಗೆ ಇಡುವುದಾಗಿ ಘೋಷಿಸಿದೆ. ಭಾರತದಲ್ಲೂ ತನ್ನ ಬ್ರ್ಯಾಂಡ್​ ಅನ್ನು ಪರಿಚಯಿಸುವುದಾಗಿ ತಿಳಿಸಿದೆ.

ಬೆಂಗಳೂರು: ಸ್ಮಾರ್ಟ್​ಫೋನ್​ಗಳಂತೆ ಈಗ ಸ್ಮಾರ್ಟ್​ವಾಚ್​ಗಳಿಗೆ ಬಹುಬೇಡಿಕೆ ಇದೆ. ಒನ್​ಪ್ಲಸ್​ ನಾರ್ಡ್​ ಮೊಬೈಲ್​ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಇನ್ನು ಮುಂದೆ ಆ ಕಂಪನಿಯ ಸ್ಮಾರ್ಟ್​ವಾಚ್​ಗಳು ಕೂಡ ಜನರ ಕೈ ಸೇರಲಿವೆ.

ವಿಶ್ವದ ಸ್ಮಾರ್ಟ್‌ಫೋನ್ ಬ್ರಾಂಡ್ ಆದ ಒನ್​ಪ್ಲಸ್​ ನಾರ್ಡ್ ಸ್ಮಾರ್ಟ್‌ವಾಚ್ ಮಾರುಕಟ್ಟೆಗೂ ಪ್ರವೇಶಿಸುವುದಾಗಿ ಸೋಮವಾರ ಘೋಷಿಸಿದೆ. ಶೀಘ್ರದಲ್ಲೇ ಭಾರತದಲ್ಲಿ ತನ್ನ ಮೊದಲ ವಾಚ್​​ ಅನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ. ಒಂದು ಅಂದಾಜಿನ ಪ್ರಕಾರ ಅಕ್ಟೋಬರ್ ಮೊದಲ ವಾರದಲ್ಲಿ ನಾರ್ಡ್ ಸ್ಮಾರ್ಟ್ ವಾಚ್ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ನಾರ್ಡ್ ಸ್ಮಾರ್ಟ್​ವಾಚ್​ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಲು ಬಯಸುತ್ತದೆ. ಅತ್ಯುತ್ತಮವಾದ ತಂತ್ರಜ್ಞಾನವನ್ನು ವಿಶ್ವದ ಎಲ್ಲ ರೀತಿಯ ಬಳಕೆದಾರರಿಗೆ ಸಿಗುವಂತೆ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

ಗ್ರಾಹಕರಿಗಾಗಿ ನಾರ್ಡ್ ಬಡ್ಸ್, ನಾರ್ಡ್ ಬಡ್ಸ್ ಸಿಇ ಮತ್ತು ನಾರ್ಡ್ ವೈಯರ್​ ಇಯರ್‌ಫೋನ್‌ಗಳನ್ನು ಪರಿಚಯಿಸಿದೆ. ಇದು 6.3 ಮಿಲಿಯನ್ ಗ್ರಾಹಕರನ್ನು ಹೊಂದಿದೆ. ಇದರಲ್ಲಿ ಭಾರತದ ಗ್ರಾಹಕರೇ ಶೇ.15 ರಷ್ಟು ಇದ್ದಾರೆ. ಇದು ನಾರ್ಡ್​ ಕಂಪನಿಯ ಇದುವರೆಗಿನ ಅತ್ಯಧಿಕ ಸಂಖ್ಯೆಯ ಗ್ರಾಹಕರಾಗಿದ್ದಾರೆ. ಹೀಗಾಗಿ ಈ ಎಲ್ಲ ಗ್ರಾಹಕರನ್ನು ಸ್ಮಾರ್ಟ್​ ವಾಚ್​ ಮಾರುಕಟ್ಟೆಗೆ ಸೆಳೆಯಲು ಕಂಪನಿ ಮುಂದಾಗಿದೆ.

ಮಾರುಕಟ್ಟೆ ಸಂಶೋಧನಾ ಸಂಸ್ಥೆಯಾದ ಕ್ಯಾನಲಿಸ್ ಪ್ರಕಾರ, ವಾಚ್​ ಧರಿಸುವ ಗ್ರಾಹಕರಲ್ಲಿ ಭಾರತವು ಚೀನಾ ಮತ್ತು ಅಮೆರಿಕದ ಬಳಿಕ ಮೂರನೇ ಸ್ಥಾನದಲ್ಲಿದೆ. ಮೊದಲ ತ್ರೈಮಾಸಿಕದಲ್ಲಿ ಶೇಕಡಾ 15 ರಷ್ಟು ಗ್ರಾಹಕರು ವಾಚ್​ ಖರೀದಿ ಮಾಡಿದ್ದರು. ಬಳಿಕ ಇದು ಶೇಕಡಾ 30ಕ್ಕೆ ಹೆಚ್ಚಿತು. ಸ್ಥಳೀಯ ಉತ್ಪಾದನಾ ಕಂಪನಿಗಳು ಕಡಿಮೆ ದರದಲ್ಲಿ ವಾಚ್​ ಮಾರುಕಟ್ಟೆಗೆ ತಂದ ಬಳಿಕ ಇದರ ಅಂತರ ತುಸು ಕಡಿಮೆಯಾಯಿತು ಎಂದು ಸಂಸ್ಥೆ ತಿಳಿಸಿದೆ.

ಓದಿ: ಚಿತ್ರರಂಗಕ್ಕೆ ವಾಟ್ಸ್​​​ಆ್ಯಪ್ ಎಂಟ್ರಿ: ಸೆ.21 ರಂದು ಶಾರ್ಟ್​ಫಿಲ್ಮ್​ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.