ವಿಂಡೋಸ್​ 11ರಲ್ಲಿ ನೋಟ್​ಪ್ಯಾಡ್​ ಟ್ಯಾಬ್​ ಪರೀಕ್ಷೆ ಆರಂಭಿಸಿದ ಮೈಕ್ರೋಸಾಫ್ಟ್​​

author img

By

Published : Jan 20, 2023, 5:29 PM IST

Updated : Jan 21, 2023, 2:15 PM IST

ವಿಂಡೋಸ್​ 11ರಲ್ಲಿ ನೋಟ್​ಪ್ಯಾಡ್​ ಟ್ಯಾಬ್​ ಪರೀಕ್ಷೆ ಆರಂಭಿಸಿದ ಮೃಕ್ರೋಸಾಫ್ಟ್​​

ವಿಂಡೋಸ್​ 11 ರಲ್ಲಿ ನೋಟ್​ಪ್ಯಾಡ್​ ಆ್ಯಪ್​ನ ಟ್ಯಾಬ್​​​ ವೈಶಿಷ್ಟ್ಯ- ಒಂದೇ ವಿಂಡೋ ಮೂಲಕ ಹಲವು ವೆಬ್​ಸೈಟ್​​ ಬಳಕೆ - ಕಳೆದ ವರ್ಷ ಫೈಲ್ ಎಕ್ಸ್‌ಪ್ಲೋರರ್‌ಗೆ ಟ್ಯಾಬ್‌ ಸೇರ್ಪಡೆ

ವಾಷಿಂಗ್ಟನ್​: ವಿಂಡೋಸ್​ 11 ರಲ್ಲಿ ನೋಟ್​ಪ್ಯಾಡ್​ ಅ್ಯಪ್​ನ ಟ್ಯಾಬ್​​​ ವೈಶಿಷ್ಟ್ಯಗಳನ್ನು ಮೈಕ್ರೋಸಾಫ್ಟ್​​ ಉದ್ಯೋಗಿಗಳು ಅನಿರೀಕ್ಷಿತವಾಗಿ ಕಳೆದ ಡಿಸೆಂಬರ್​ನಲ್ಲಿ ಪ್ರಕಟಿಸಿದ್ದರು. ನೋಟ್​ ಪ್ಯಾಡ್​ ಇಂಟರ್ನಲ್​ ವರ್ಷನ್​ ಆನ್​ಲೈನ್​ ಸ್ಕ್ರೀನ್​ಶಾಟ್ ಅನ್ನು ಅವರು ಹಂಚಿಕೊಳ್ಳುವ ಮೂಲಕ ಆ್ಯಪ್​ ಹೊಸ ಟ್ಯಾಬ್​ ಮೇಲ್ಮೈ ಲಕ್ಷಣವನ್ನು ತಿಳಿಸಿದ್ದರು.

ಒಂದಕ್ಕಿಂತ ಹೆಚ್ಚಿನ ಟ್ಯಾಬ್​ಗಳೊಂದಿಗಿನ ಬೆಂಬಲವನ್ನು ಈ ಅಪ್ಡೇಟ್​ ಪರಿಚಯಿಸಿದೆ ಎಂದು ಕಂಪನಿ ತಿಳಿಸಿದೆ. ಸಿಂಗಲ್​ ನೋಟ್​ಪ್ಯಾಡ್​ ವಿಂಡೋದಲ್ಲಿ ಬಳಕೆದಾರರು ಒಂದಕ್ಕಿಂತ ಹೆಚ್ಚು ಫೈಲ್​ಗಳನ್ನು ಸೃಷ್ಟಿಸಲು, ನಿರ್ವಹಿಸಲು ಮತ್ತು ಸಂಘಟಿಸಲು ಸಾಧ್ಯವಾಗಲಿದೆ.

ಏನಿದರ ವೈಶಿಷ್ಟತೆ: ಮೇಲಾಗಿ, ಬಳಕೆದಾರರು ತಮ್ಮ ಸ್ವಂತ ವಿಂಡೋವನ್ನು ಡ್ರಾಗ್​ ಮಾಡುವ ಮೂಲಕ ಬಳಕೆದಾರರು ತಮ್ಮ ಫೈಲ್​ಗಳೊಂದಿಗೆ ಮಲ್ಟಿಪಲ್​ ವಿಂಡೋ ಮೂಲಕ ಕೆಲಸ ಮಾಡಬಹುದಾಗಿದೆ. ಈ ಹೊಸ ಆ್ಯಪ್​ ಹೊಸ ಟ್ಯಾಬ್​ನಲ್ಲಿ ವಿಂಡೋ ತೆರೆಯಲು ಕಸ್ಟಮೈಸ್​ ಮಾಡುವ ವ್ಯವಸ್ಥೆ ಹೊಂದಿದೆ. ಅಪ್ಡೇಟ್​​​​ ಜೊತೆಯಲ್ಲಿ ಸೇವ್​ ಆಗಿರದ ಫೈಲ್​ಗಳ ನಿರ್ವಹಣೆಯಲ್ಲಿ ಅಭಿವೃದ್ಧಿ ಜೊತೆ ಜೊತೆಗೆ ಟ್ಯಾಬ್​ ಬೆಂಬಲಿತ ನಿರ್ವಹಣೆಗೆ ಶಾರ್ಟ್​ಕಟ್​ನೊಂದಿಗೆ ಹೊಸ ಕೀಬೋರ್ಡ್​ ಅನ್ನು ಬಳಕೆದಾರರು ಪಡೆಯಬಹುದಾಗಿದೆ. ಬಳಕೆದಾರರು ಇದರನ್ನು ಬಳಸುವಾಗ ಕೆಲವು ಸಮಸ್ಯೆಗಳನ್ನು ಅನುಭವಿಸುವ ಸಾಧ್ಯತೆ ಇರುವ ಬಗ್ಗೆ ಕೂಡ ಅರಿವು ಹೊಂದಿರುವುದಾಗಿ ಮೈಕ್ರೊಸಾಫ್ಟ್​​​ ತಿಳಿಸಿದೆ.

ಕೆಲವು ಬಳಕೆದಾರರು ಕೆಲವು ಕೀಬೋರ್ಡ್​ ಶಾರ್ಟ್​ಗಳ ಜೊತೆ ಈ ಸಮಸ್ಯೆಯನ್ನು ಎದುರಿಸಬಹುದು. ಉನ್ನತ ಮಟ್ಟದ ಪ್ರದರ್ಶನ, ವಿಶ್ವಾಸರ್ಹತೆಯನ್ನು ಮುಟ್ಟುವಲ್ಲಿ ಈ ಹೊಸ ನೋಟ್​ಪ್ಯಾಡ್​ ಕಾರ್ಯ ನಿರ್ವಹಿಸಲಿದೆ ಎಂಬ ಭರವಸೆ ನೀಡುತ್ತೇವೆ ಎಂದು ಮೈಕ್ರೋಸಾಫ್ಟ್​​ ತಿಳಿಸಿದೆ. ಮೈಕ್ರೋಸಾಫ್ಟ್ ಕಳೆದ ವರ್ಷ ಫೈಲ್ ಎಕ್ಸ್‌ಪ್ಲೋರರ್‌ಗೆ ಟ್ಯಾಬ್‌ಗಳನ್ನು ಸೇರಿಸಿದ ನಂತರ, ಟ್ಯಾಬ್ಡ್ ಇಂಟರ್ಫೇಸ್ ಅನ್ನು ಪಡೆಯುವ ಮೊದಲ ಅಂತರ್​​​​ ನಿರ್ಮಿತ ಅಪ್ಲಿಕೇಶನ್ ನೋಟ್‌ಪ್ಯಾಡ್ ಆಗಿದೆ. ಕಂಪನಿಯು ಸುಮಾರು ಐದು ವರ್ಷಗಳ ಹಿಂದೆ ಹೊಸ ವೈಶಿಷ್ಟ್ಯದೊಂದಿಗೆ ವಿಂಡೋಸ್​ 10ರಲ್ಲಿ ಅಪ್ಲಿಕೇಶನ್‌ಗಳಲ್ಲಿ ಟ್ಯಾಬ್‌ಗಳನ್ನು ಮೊದಲ ಬಾರಿಗೆ ಪರೀಕ್ಷಿಸಿದೆ.

ಒಂದೇ ವಿಂಡೋದಲ್ಲಿ ಹಲವು ವೆಬ್​ಸೈಟ್​: ಇದು ನೋಟ್‌ಪ್ಯಾಡ್, ಫೈಲ್ ಎಕ್ಸ್‌ಪ್ಲೋರರ್ ಮತ್ತು ಇತರ ಹಲವು ಅಪ್ಲಿಕೇಶನ್‌ಗಳಿಗೆ ಟ್ಯಾಬ್ ಬೆಂಬಲವನ್ನು ಹೊಂದಿದ್ದು. ಆದರೆ ಮೈಕ್ರೋಸಾಫ್ಟ್ ರದ್ದುಗೊಳಿಸಿ, ಇವುಗಳನ್ನು ಎಂದಿಗೂ ವಿಂಡೋಸ್​ 10 ಬಳಕೆದಾರರಿಗೆ ಪರಿಚಯಿಸಲಿಲ್ಲ. ನೋಟ್‌ಪ್ಯಾಡ್ ಟ್ಯಾಬ್ ಬೆಂಬಲದ ವಿಂಡೋಸ್​ 11ರಲ್ಲಿ ಗ್ರಾಫಿಕ್ಸ್ ಸೆಟ್ಟಿಂಗ್‌ಗಳ ಪುಟವನ್ನು ನವೀಕರಿಸುತ್ತಿದೆ. ಟ್ಯಾಬ್​ನಲ್ಲಿನ ನೋಟ್​ಪ್ಯಾಡ್ ಮೈಕ್ರೋಸಾಫ್ಟ್​​ ಎಡ್ಜ್​ ವೆಬ್​ ಬ್ರೋಸರ್​​ ಟ್ಯಾಬ್​ನಂತೆ ಇರಲಿದೆ. ಇದು ಒಂದೇ ವಿಂಡೋದಲ್ಲಿ ಅನೇಕ ವೈಬ್​ಸೈಟ್​ಗಳನ್ನು ತೆರೆಯಲು ಬಳಕೆದಾರರಿಗೆ ಸಹಾಯ ಮಾಡುತ್ತದೆ.

ವಿಂಡೋ 11 ಅಪ್ಲಿಕೇಷನ್​ ಹೊಸ ನವೀಕರಣದೊಂದಿಗೆ ಮೊದಲಿಗಿಂತ ವೇಗವಾಗಿ ಪುಟಗಳನ್ನು ಲೋಡ್ ಮಾಡುತ್ತವೆ. ಬಳಕೆದಾರರು ಚಾಟ್ ಪಟ್ಟಿಯ ಮೂಲಕ ಸ್ಕ್ರಾಲ್ ಮಾಡಿದಾಗ ಸುಪ್ತತೆಯನ್ನು ಶೇ.11,4 ರಷ್ಟು ಸುಧಾರಿಸಲಾಗಿದೆ. ಮತ್ತೊಂದೆಡೆ, ಚಾನಲ್ ಪಟ್ಟಿಯಲ್ಲಿ ಸ್ಕ್ರೋಲಿಂಗ್ ಈಗ ಶೇ.12,1 ರಷ್ಟು ವೇಗವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮೈಕ್ರೋಸಾಫ್ಟ್​ ತಿಳಿಸಿದೆ. ವಿಂಡೋಸ್ 11 ಬಳಕೆದಾರರು ಎಪಿಕೆ ಫೈಲ್ ಇರುವವರೆಗೂ ಅಮೆಜಾನ್ ಆ್ಯಪ್ ಸ್ಟೋರ್‌ನಲ್ಲಿ ಕಂಡು ಬರುವ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ವಿಂಡೋಸ್ 11ನಿಂದಲೇ ಇನ್​​ಸ್ಟಾಲ್​ ಮಾಡಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಎರಡನೇ ಪೀಳಿಗೆಯ ಹೋಮ್​​ಪಾಡ್​ ಘೋಷಣೆ ಮಾಡಿದ ಆ್ಯಪಲ್: ಫೆಬ್ರವರಿ 3 ರಿಂದ ಮಾರುಕಟ್ಟೆಯಲ್ಲಿ ಲಭ್ಯ

Last Updated :Jan 21, 2023, 2:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.