ಐಫೋನ್ 14 ಪ್ರೊ ಹಿಂದಿನ ಮಾದರಿಗಿಂತ ಹೆಚ್ಚು ಜನಪ್ರಿಯ: ಏನೆಲ್ಲ ಹೊಸತನ?

author img

By

Published : Sep 22, 2022, 5:59 PM IST

Updated : Sep 22, 2022, 6:21 PM IST

ಆಪಲ್​ ಐಫೋನ್ 14 ಪ್ರೊ

ಹೊಸ ಮಾದರಿಯ ಆಪಲ್​ ಐಫೋನ್ 14 ಪ್ರೊ ಇದೀಗ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಹೀಗಾಗಿ ಟೆಕ್ ದೈತ್ಯ ಆಪಲ್​ ಕಂಪನಿ ತನ್ನ ಪೂರೈಕೆದಾರರಿಗೆ ವೆನಿಲ್ಲಾ ಐಫೋನ್ 14 ಮಾದರಿ ಬದಲಾಗಿ, ಐಫೋನ್ 14 ಪ್ರೊ ಆವೃತ್ತಿಯ ಮೊಬೈಲ್​ಗಳನ್ನು ಹೆಚ್ಚು ಉತ್ಪಾದಿಸುವಂತೆ ಸೂಚಿಸಿದೆ.

ಸ್ಯಾನ್ ಫ್ರಾನ್ಸಿಸ್ಕೋ: ಆಪಲ್​ ಐಫೋನ್ 14 ಪ್ರೊನ ಹೊಸ ಮಾದರಿಯು ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗಿವೆ. ಹಳೆಯ ಐಫೋನ್ 14 ಗೆ ಹೋಲಿಸಿದರೆ, ಇದು ಹೆಚ್ಚು ಹೆಸರುವಾಸಿಯಾಗಿದೆ ಎಂದು ಹೊಸ ವರದಿಯೊಂದು ಹೇಳಿದೆ.

ವಿಶ್ಲೇಷಕ ಮಿಂಗ್-ಚಿ ಕುವೊ ಪ್ರಕಾರ, ಟೆಕ್ ದೈತ್ಯ ಆಪಲ್​ ಕಂಪನಿ ತನ್ನ ಪೂರೈಕೆದಾರರಿಗೆ ವೆನಿಲ್ಲಾ ಐಫೋನ್ 14 ಮಾದರಿ ಬದಲಾಗಿ, ಐಫೋನ್ 14 ಪ್ರೊ ಆವೃತ್ತಿಯ ಮೊಬೈಲ್​ಗಳನ್ನು ಹೆಚ್ಚು ಉತ್ಪಾದಿಸುವಂತೆ ಸೂಚಿಸಿದೆ ಎಂದು ಗಿಜ್ಮೊ ಚೀನಾ ವರದಿ ಮಾಡಿದೆ. ಹೆಚ್ಚಿನ ಬೇಡಿಕೆ ಇರುವುದರಿಂದ ಉತ್ಪಾದನೆಯನ್ನು ಹೆಚ್ಚಿಸುವುದು ಈ ವರ್ಷದ ನಾಲ್ಕನೇ ಮತ್ತು ಅಂತಿಮ ತ್ರೈಮಾಸಿಕದಲ್ಲಿ ಮಾರಾಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಆ್ಯಪಲ್​ ಐಫೋನ್​ 14 ಕ್ಯಾಮೆರಾದಲ್ಲಿ ದೋಷ.. ಶೀಘ್ರವೇ ಸಮಸ್ಯೆಗೆ ಪರಿಹಾರ: ಕಂಪನಿ

ಪ್ರಸ್ತುತ, ಆಪಲ್ ತನ್ನ ಇತ್ತೀಚಿನ ಐಫೋನ್ ಶ್ರೇಣಿಯ ASP (ಸರಾಸರಿ ಮಾರಾಟದ ಬೆಲೆ) ಹೆಚ್ಚಿಸಲು ಮತ್ತು iPhone 14 Pro ಸರಣಿಯ ಉತ್ಪಾದನೆಯನ್ನು ಹೆಚ್ಚಿಸಲು ಫಾಕ್ಸ್‌ಕಾನ್‌ಗೆ ತಿಳಿಸಿದೆ. ಹೆಚ್ಚಿದ ಬೇಡಿಕೆ ಮತ್ತು ಮಾರಾಟದ ಹಿನ್ನೆಲೆ ಐಫೋನ್​ನ ಬೆಲೆಯನ್ನು ಸುಮಾರು 10 ಪ್ರತಿಶತದಷ್ಟು ಹೆಚ್ಚಿಸಲು ವಿಶ್ಲೇಷಕರು ನಿರೀಕ್ಷಿಸುತ್ತಿದ್ದಾರೆ ಎಂದು ವರದಿ ಹೇಳಿದೆ. ಈ ಹೊಸ ಮಾದರಿಯ ಫೋನ್​ iPhone 13 ಗಿಂತ ಹೆಚ್ಚು ಸುಧಾರಣೆಗಳನ್ನು ಒಳಗೊಂಡಿವೆ.

ಈ ಸರಣಿಯು ಹೊಸ ಐಫೋನ್ 14 ಪ್ಲಸ್ ಅನ್ನು ಒಳಗೊಂಡಿದೆ. ಇದು ಮಿನಿ ಮಾದರಿಯನ್ನು ಬದಲಾಯಿಸಿದೆ. ಆದರೆ ಪ್ರೊ ರೂಪಾಂತರಗಳು ಮುಂಭಾಗದ ವಿನ್ಯಾಸದಲ್ಲಿ ಪ್ರಮುಖ ಬದಲಾವಣೆಯನ್ನು ತಂದವು. ಅಷ್ಟೇ ಅಲ್ಲದೇ ಕ್ಯಾಮರಾದಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ.


Last Updated :Sep 22, 2022, 6:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.