ಇನ್​ಸ್ಟಾಗ್ರಾಮ್​ನಿಂದ ಬಳಕೆದಾರರಿಗೆ ಸಿಗಲಿದೆ ಗಿಫ್ಟ್.. ಇದೇನು ಗೊತ್ತಾ?

author img

By

Published : Sep 14, 2022, 3:15 PM IST

instagram-is-internally-testing

ಸಾಮಾಜಿಕ ಮಾಧ್ಯಮವಾದ ಇನ್​ಸ್ಟಾಗ್ರಾಮ್​ ತನ್ನ ಬಳಕೆದಾರರಿಗಾಗಿ ಹೊಸ ಫೀಚರ್​ಗಳನ್ನು ನೀಡುವ ಪ್ರಕ್ರಿಯೆಯಲ್ಲಿದೆ. ಶೀಘ್ರವೇ ಗಿಫ್ಟ್​ ಅನ್ನು ನೀಡಲು ಪ್ರಯೋಗಗಳು ನಡೆಯುತ್ತಿವೆ.

ಸ್ಯಾನ್ ಫ್ರಾನ್ಸಿಸ್ಕೋ: ಮೆಟಾ ಒಡೆತನದ ಇನ್​ಸ್ಟಾಗ್ರಾಮ್​ ತನ್ನ ಬಳಕೆದಾರರಿಗಾಗಿ ಹೊಸ ಫೀಚರ್​ ಪರಿಚಯಿಸುವ ಕಾರ್ಯ ಪ್ರಗತಿಯಲ್ಲಿದ್ದು, ಟೆಸ್ಟಿಂಗ್​ ನಡೆಸಲಾಗುತ್ತಿದೆ. "ಗಿಫ್ಟ್" ಹೆಸರಿನ ಫೀಚರ್​ ಅನ್ನು ಬಳಕೆದಾರರಿಗೆ ಲಭ್ಯವಾಗುವಂತೆ ರೂಪಿಸಲಾಗುತ್ತಿದೆ. ಇದರ ಮೂಲಕ ರೀಲ್ಸ್​ ಮಾಡಿ ಹಣವನ್ನು ಸಂಪಾದನೆ ಕೂಡ ಮಾಡಬಹುದಾಗಿದೆ.

ಈ ಹೊಸ ಮಾದರಿಯ ಫೀಚರ್​ ಅನ್ನು ಆಂತರಿಕವಾಗಿ ಪ್ರಯೋಗ ನಡೆಸಲಾಗುತ್ತಿದೆ. ಇದನ್ನು ಮೊದಲ ಬಾರಿಗೆ ಅಪ್ಲಿಕೇಶನ್ ಸಂಶೋಧಕ ಅಲೆಸ್ಸಾಂಡ್ರೊ ಪಲುಜ್ಜಿ ಅವರು ಜುಲೈನಲ್ಲಿ ಗುರುತಿಸಿದರು. ಇದನ್ನು ಇನ್​​ಸ್ಟಾಗ್ರಾಮ್​ನಲ್ಲಿ ಅಳವಡಿಸುವ ಬಗ್ಗೆ ಚರ್ಚೆ ನಡೆದು, ಆಂತರಿಕ ಪ್ರಯೋಗ ನಡೆಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

ಇದಲ್ಲದೇ ಕಂಟೆಂಟ್​ ಅಪ್ರಿಶಿಯೇಷನ್​(ವಿಷಯ ಮೆಚ್ಚುಗೆ) ಆಯ್ಕೆಯನ್ನೂ ನೀಡುವ ಗುರಿ ಇದೆ. ಹೊಸ ಫೀಚರ್​ ಆದ ಗಿಫ್ಟ್​ ಮೂಲಕ ಪೋಸ್ಟ್​ ಮಾಡುವವರು ತಮ್ಮ ಅಭಿಮಾನಿಗಳಿಗೆ ನೇರವಾಗಿ ಇದನ್ನು ತಲುಪಿಸಬಹುದು. ಈ ಆಯ್ಕೆಯನ್ನು ಶೀಘ್ರವೇ ಬಳಕೆದಾರರಿಗೆ ಸಿಗಲಿದೆ ಎಂದು ತಿಳಿಸಿದೆ.

ಆಂತರಿಕ ಸೆಟ್ಟಿಂಗ್​ನಲ್ಲಿ ಗಿಫ್ಟ್​ ಅನ್ನು ಅಳವಡಿಸಲುವ ಕುರಿತಾಗಿ ಪ್ರಯೋಗ ನಡೆಸಲಾಗುತ್ತಿದೆ. ರೀಲ್‌ಗಳ ಕೆಳಭಾಗದಲ್ಲಿ ಇರುವ ಬಟನ್ ಮೂಲಕ ಬಳಕೆದಾರರು ಉಡುಗೊರೆಗಳನ್ನು ತಮ್ಮವರಿಗೆ ಕಳುಹಿಸಲು ಸಾಧ್ಯವಾಗುತ್ತದೆ.

2 ವರ್ಷಗಳ ಹಿಂದೆ ಸಾಮಾಜಿಕ ಮಾಧ್ಯಮ ಇನ್​ಸ್ಟಾಗ್ರಾಮ್​ ಬ್ಯಾಡ್ಜ್‌ಗಳನ್ನು ಪ್ರಾರಂಭಿಸಿತು. ಇದು ಲೈವ್ ವಿಡಿಯೋದ ಸಮಯದಲ್ಲಿ ವಿಡಿಯೋ ಮಾಡುವವರಿಗೆ ಬೆಂಬಲವನ್ನು ನೀಡಲು ಬಳಕೆದಾರರು ಇದನ್ನು ಬಳಸಿ ಬೆಂಬಲ ಸೂಚಿಸ ಬಹುದಾಗಿದೆ.

ಓದಿ: ಕಮ್ಯುನಿಟಿ ಚಾಟ್ಸ್​: ಫೇಸ್​ಬುಕ್, ಮೆಸೆಂಜರ್​ನಲ್ಲಿ ಬರಲಿದೆ ರಿಯಲ್ ಟೈಮ್ ಮೆಸೇಜಿಂಗ್

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.