ಗೂಗಲ್​ ಸರ್ಚ್​ನಲ್ಲಿ ನಿಮ್ಮ ಪರ್ಸನಲ್​ ಮಾಹಿತಿ ಅಳಿಸಬೇಕೆ?.. ಹೀಗೆ ಮಾಡಿ

author img

By

Published : Sep 22, 2022, 8:53 PM IST

people-remove-personal-info-directly-in-search

ಗೂಗಲ್​ ವೆಬ್​ ಪೇಜ್​ನಲ್ಲಿರುವ​ ವೈಯಕ್ತಿಕ ಮಾಹಿತಿ ಅಳಿಸಲು ರಿಸಲ್ಟ್​ ಅಬೌಟ್​ ಯು ಎಂಬ ಆಯ್ಕೆಯನ್ನು ಗೂಗಲ್​ ನೀಡಿದೆ. ಇದು ಬೇಡವಾದ ಮತ್ತು ಕಾಣಿಸಬಾರದ ಮಾಹಿತಿಯನ್ನು ಅಳಿಸುವ ವಿಧಾನವಾಗಿದೆ.

ನವದೆಹಲಿ: ಮೊಬೈಲ್​, ಇ-ಮೇಲ್​, ಡಿಜಿಟಲ್​ ಲಾಕರ್​, ಸಾಮಾಜಿಕ ಮಾಧ್ಯಮಗಳಿಗೆ ನೀಡಿದ ಮಾಹಿತಿಯಿಂದ ಇಂದು ಯಾವುದೂ ವೈಯಕ್ತಿಕವಾಗಿ ಉಳಿದುಕೊಂಡಿಲ್ಲ. ಇದು ನಮ್ಮ ಭದ್ರತೆಯ ಬಗ್ಗೆ ಅನುಮಾನ ಮೂಡಿಸಿದೆ. ಇದನ್ನು ಹೋಗಲಾಡಿಸಲು ಗೂಗಲ್​ ವೈಯಕ್ತಿಕ ಮಾಹಿತಿಯನ್ನು ಶಾಶ್ವತವಾಗಿ ಅಳಿಸಿ ಹಾಕುವ ಆಯ್ಕೆಯನ್ನು ನೀಡಿದೆ.

ಗೂಗಲ್​ನಲ್ಲಿ ಸೋರಿಕೆಯಾದ ಮಾಹಿತಿಯನ್ನು ಸ್ವತಃ ನಾವೇ ಅದನ್ನು ಅಳಿಸಿ ಹಾಕಬಹುದು. ಇಲ್ಲವೇ ಇಂತಹದ್ದನ್ನು ಡಿಲಿಟ್​ ಮಾಡಿ ಎಂದು ಕೋರಿಕೆ ಸಲ್ಲಿಸಬಹುದು. ರಿಸಲ್ಟ್​ ಅಬೌಟ್​ ಯು ಎಂಬ ಆಯ್ಕೆಯನ್ನು ನೀಡುವುದಾಗಿ ಗೂಗಲ್​ ತನ್ನ ವಾರ್ಷಿಕ ಡೆವಲಪರ್​ ಸಮ್ಮೇಳನದಲ್ಲಿ ಈ ಹಿಂದೆ ಘೋಷಿಸಿತ್ತು.

ಈ ವರ್ಷಾರಂಭದಲ್ಲಿ ಘೋಷಿಸಲಾದ ನಿಮ್ಮ ಬಗೆಗಿನ ಮಾಹಿತಿ ಆಯ್ಕೆಯನ್ನು ಬಳಕೆದಾರರಿಗೆ ನೀಡಲಿದೆ. ಈ ಹೊಸ ಆಯ್ಕೆಯಿಂದ ವೈಯಕ್ತಿಕ ಮಾಹಿತಿಯಾದ ಮನೆ ವಿಳಾಸ, ಇಮೇಲ್ ವಿಳಾಸ, ಫೋನ್ ಸಂಖ್ಯೆ ಅಥವಾ ಗೂಗಲ್​ನಲ್ಲಿ ನಮ್ಮ ಬಗ್ಗೆ ಹುಡುಕಾಟಕ್ಕಿರುವ ಯಾವುದೇ ಇತರ ಮಾಹಿತಿಯನ್ನು ಅಲ್ಲಿಂದ ಅಳಿಸಿ ಹಾಕಬಹುದು.

ಮಾಹಿತಿ ಅಳಿಸುವುದು ಹೇಗೆ?: ಗೂಗಲ್​ನಲ್ಲಿ ನಮ್ಮ ಬಗ್ಗೆ ಯಾವುದೇ ಮಾಹಿತಿ ಕಂಡು ಬಂದಲ್ಲಿ ಆ ಪರದೆಯ ಮೂಲೆಯಲ್ಲಿರುವ ಮೂರು ಡಾಟ್​ ಇರುವ ಓವರ್​ಫ್ಲೋ ಮೆನುವನ್ನು ಕ್ಲಿಕ್​ ಮಾಡಬೇಕು. ಆಗ ಅಲ್ಲಿ ಅಬೌಟ್​ ದಿಸ್​ ರಿಸಲ್ಟ್​ ಎಂಬ ಆಯ್ಕೆ ಬರುತ್ತದೆ. ಅದರಲ್ಲಿ "ರಿಮೂವ್​ ರಿಸಲ್ಟ್​" ಇರುತ್ತದೆ. ಅದನ್ನು ಒತ್ತಬೇಕು.

ನಮ್ಮ ಯಾವುದೇ ವೈಯಕ್ತಿಕ ಗುರುತುಳ್ಳ ಮಾಹಿತಿಯನ್ನು (ಪಿಐಐ) ಅಳಿಸಲು ಗೂಗಲ್​ ಸಪೋರ್ಟ್​ ಪೇಜ್​ಗೆ ಹೋಗಬೇಕು. ಅಲ್ಲಿ ನೀವು ತೆಗೆದುಹಾಕಲು ಬಯಸುವ URL ಅನ್ನು ಹೊಂದಿರುವ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ಅದನ್ನು ಭರ್ತಿ ಮಾಡಿ ಸಬ್​ಮಿಟ್​ ಮಾಡಿದ ಬಳಿಕ "ರಿಸಲ್ಟ್​ ಅಬೌಟ್​ ಯೂ" ಮೆನುವನ್ನು ಬಳಸಲು ಸಾಧ್ಯವಾಗುತ್ತದೆ.

ಜೊತೆಗೆ ಆಲ್​ ರಿಕ್ವೆಸ್ಟ್​ ತುಂಬಿದ ಬಳಿಕ ಇನ್​ ಪ್ರೋಗ್ರಸ್​ ಅಂಡ್​ ಅಪ್ರೋವ್ಡ್​ ಮಾಹಿತಿ ಕಾಣ ಸಿಗಲಿದೆ. ಬಳಿಕ "ಈ ಮಾಹಿತಿಯನ್ನು ಏಕೆ ತೆಗೆದುಹಾಕಲು ಬಯಸುತ್ತೀರಿ?" ಎಂಬ ಪರದೆ ತೆರೆದುಕೊಳ್ಳುತ್ತದೆ. ಮಾಹಿತಿಯನ್ನು ಅಳಿಸುವ ಕೋರಿಕೆಗಳನ್ನು ಸ್ವೀಕರಿಸಿದಾಗ ಉಳಿದ ಮಾಹಿತಿಯನ್ನು ನೋಡುಗರಿಂದ ಬಚ್ಚಿಡಲಾಗದು. ವೆಬ್​ ಪುಟದಲ್ಲಿನ ಎಲ್ಲ ಮಾಹಿತಿಗಳು ಮೌಲ್ಯಮಾಪನ ಮಾಡಿದ ಬಳಿಕ ಅವುಗಳು ಮತ್ತೆ ಎಲ್ಲರಿಗೂ ಕಾಣ ಸಿಗುತ್ತದೆ (ಉದಾಹರಣೆಗೆ ಲೇಖನಗಳಲ್ಲಿ ಪ್ರಕಟವಾದ ಮಾಹಿತಿ) ಎಂದು ಗೂಗಲ್​ ಹೇಳಿದೆ.

ಗೂಗಲ್​ ಸರ್ಚ್​ನಲ್ಲಿ ಅಳಿಸಿ ಹಾಕಲಾದ ಮಾಹಿತಿ ವೆಬ್​ ಪುಟದಿಂದಲೂ ಕೂಡ ಕಾಣೆಯಾಗದು. ಅದಕ್ಕಾಗಿ ಹೋಸ್ಟಿಂಗ್ ಸೈಟ್ ಅನ್ನು ನೇರವಾಗಿ ಸಂಪರ್ಕಿಸಬಹುದು ಎಂದು ಗೂಗಲ್ ತಿಳಿಸಿದೆ.

ಓದಿ: ನಿಮ್ಮ ಹಣಕ್ಕೆ ಬಡ್ಡಿ ಜೊತೆಗೆ ಸುರಕ್ಷತೆ ಬೇಕಾದರೆ ಎಫ್​ಡಿ ಮಾಡಿ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.