ಒಂದೂವರೆ ತಿಂಗಳ ಅವಧಿಯಲ್ಲಿ ಭಾರತದ 30 ಲಕ್ಷ WhatsApp ​ಖಾತೆಗಳು ಬ್ಯಾನ್​​

author img

By

Published : Sep 1, 2021, 3:57 PM IST

3mn Indian accounts banned by WhatsApp between Jun 16-Jul 31

ಫೇಸ್‌ಬುಕ್ ಒಡೆತನದ ವಾಟ್ಸಪ್(WhatsApp)​ ಬಿಡುಗಡೆ ಮಾಡಿದ ಇತ್ತೀಚಿನ ವರದಿಯಲ್ಲಿ ಬಳಕೆದಾರರ ದೂರುಗಳ ವಿವರಗಳನ್ನು ಮತ್ತು ತೆಗೆದುಕೊಂಡ ಕ್ರಮಗಳ ವಿವರಗಳನ್ನು ಒಳಗೊಂಡಿದೆ.

ನವದೆಹಲಿ: ಜೂನ್ 16ರಿಂದ ಜುಲೈ 31ರೊಳಗೆ ಸುಮಾರು 30 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಬ್ಯಾನ್ ಮಾಡಲಾಗಿದೆ ಎಂದು ವಾಟ್ಸಪ್ ಇತ್ತೀಚೆಗೆ ಬಿಡುಗಡೆ ಮಾಡಿರುವ ಅನುಸರಣಾ (compliance) ವರದಿಯಲ್ಲಿ ಮಾಹಿತಿ ನೀಡಿದೆ.

ಮಂಗಳವಾರ ವರದಿ ಬಿಡುಗಡೆ ಮಾಡಿದ್ದು, +91 ಸಂಖ್ಯೆಯಿಂದ ಆರಂಭವಾಗುವ ಸುಮಾರು 30,27,000 ಖಾತೆಗಳನ್ನು ಬ್ಯಾನ್ ಮಾಡಲಾಗಿದೆ. ಅದರ ಜೊತೆಗೆ ಇದೇ ಅವಧಿಯಲ್ಲಿ ಸುಮಾರು 594 ದೂರುಗಳು ಕುಂದುಕೊರತೆ ವಿಭಾಗಕ್ಕೆ ಬಂದಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಹಿಂದೆ, ಸ್ಪ್ಯಾಮ್ ಮೆಸೇಜ್​ಗಳನ್ನು ಮತ್ತು ಸ್ವಯಂಚಾಲಿತ ಮೆಸೇಜ್​ಗಳನ್ನು ಅನಧಿಕೃತವಾಗಿ ಬಳಸುತ್ತಿದ್ದ ಕಾರಣದಿಂದ ಶೇಕಡಾ 95ರಷ್ಟು ವಾಟ್ಸಪ್​ ಖಾತೆಗಳನ್ನು ಬ್ಯಾನ್ ಮಾಡಲಾಗಿತ್ತು ಎಂದು ವಾಟ್ಸಪ್ ಮಾಹಿತಿ ನೀಡಿತ್ತು.

ಕುಂದುಕೊರತೆ ವಿಭಾಗಕ್ಕೆ ಬಂದ ದೂರುಗಳಲ್ಲಿ ಅಥವಾ ಮನವಿಗಳಲ್ಲಿ 137 ಅಕೌಂಟ್ ಸಪೋರ್ಟ್​, 316 ಬ್ಯಾನ್​​ಗಾಗಿ ಮನವಿ, ಇತರೆ ಸಪೋರ್ಟ್​ಗಾಗಿ 45, ಪ್ರಾಡೆಕ್ಟ್ ಸಪೋರ್ಟ್​ಗಾಗಿ 64, ಸೇಫ್ಟಿಗಾಗಿ 32 ಮನವಿ ಅಥವಾ ದೂರುಗಳು ಜೂನ್ 16ರಿಂದ ಜುಲೈ 31ರೊಳಗೆ ಬಂದಿವೆ ಎಂದು ವಾಟ್ಸಪ್ ಹೇಳಿದ್ದು, 74 ಮನವಿಗಳ ಮೇಲೆ ಕ್ರಮ ಜರುಗಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಕುಂದುಕೊರತೆ ವಿಭಾಗಕ್ಕೆ ಬಂದ ಮನವಿಗಳಲ್ಲಿ ಬಳಕೆದಾರರು ತಮ್ಮ ಖಾತೆಯನ್ನು ತೆರೆಯಲು ಅಥವಾ ಹೊಸ ಫೀಚರ್​ಗಳನ್ನು ಬಳಸಲು ಅಥವಾ ಬ್ಯಾನ್ ಆಗಿರುವ ವಾಟ್ಸಪ್​ ಖಾತೆಯನ್ನು ಪುನಃಸ್ಥಾಪಿಸಲು ಮನವಿ ಮಾಡಿದ್ದಾರೆ. ಅನೇಕ ಕಾರಣಗಳಿಂದಾಗಿ ಕೆಲವೊಂದು ದೂರಗಳು ಅಥವಾ ಮನವಿಗಳ ಮೇಲೆ ಕ್ರಮ ಕೈಗೊಂಡಿಲ್ಲ.

ಫೇಸ್‌ಬುಕ್ ಒಡೆತನದ ವಾಟ್ಸಪ್​ ಬಿಡುಗಡೆ ಮಾಡಿದ ಇತ್ತೀಚಿನ ವರದಿಯಲ್ಲಿ ಬಳಕೆದಾರರ ದೂರುಗಳ ವಿವರಗಳನ್ನು ಮತ್ತು ವಾಟ್ಸಪ್ ತೆಗೆದುಕೊಂಡ ಕ್ರಮಗಳ ವಿವರಗಳನ್ನು ಒಳಗೊಂಡಿದೆ ಮತ್ತು ವಾಟ್ಸಪ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ದುರುಪಯೋಗವನ್ನು ಎದುರಿಸಲು ಈ ರೀತಿಯ ಕ್ರಮಗಳನ್ನು ಆಗಾಗ ತೆಗೆದುಕೊಳ್ಳುತ್ತಿರುತ್ತದೆ.

ಕೇಂದ್ರ ಸರ್ಕಾರ ಮೇ 26ರಿಂದ ಹೊಸ ಹೊಸ ಐಟಿ ನಿಯಮಗಳನ್ನು ಜಾರಿಗೊಳಿಸಿದ್ದು, 5 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರಿರುವ ಡಿಜಿಟಲ್ ಫ್ಲಾಟ್​​ಫಾರ್ಮ್​ಗಳು ಪ್ರತಿ ತಿಂಗಳು ವರದಿಗಳನ್ನು ಪ್ರಕಟಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ವಾಟ್ಸಪ್ ವರದಿಯನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಪೊಲೀಸ್​ ಮಾಹಿತಿದಾರನೆಂಬ ಶಂಕೆ.. ಗ್ರಾಮ ರಕ್ಷಕನನ್ನು ಮನೆಯಿಂದ ಹೊರಗೆಳೆದು ಕೊಂದ ನಕ್ಸಲರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.