ವಿಶೇಷ ಅಧಿವೇಶನ: ರಾಜ್ಯಸಭೆ ಕಲಾಪದ ನೇರಪ್ರಸಾರ
Published: Sep 18, 2023, 11:11 AM

ಐದು ದಿನಗಳ ಕಾಲ ನಡೆಯುವ ಸಂಸತ್ತಿನ ಉಭಯ ಸದನಗಳ ವಿಶೇಷ ಅಧಿವೇಶನ ಇಂದಿನಿಂದ ಪ್ರಾರಂಭವಾಗಿದೆ. ರಾಜ್ಯಸಭಾ ಕಲಾಪದ ನೇರಪ್ರಸಾರವನ್ನು ಇಲ್ಲಿ ನೋಡಬಹುದು. ಭಾನುವಾರ ಬೆಳಗ್ಗೆ ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರು ಹೊಸ ಸಂಸತ್ ಕಟ್ಟಡದ ಎದುರಿನ ಗಜ ದ್ವಾರದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿದ್ದರು. ಇಂದು ಹಳೇ ಕಟ್ಟಡದಲ್ಲೇ ಉಭಯ ಸದನಗಳ ಕಲಾಪಗಳು ಪ್ರಾರಂಭಗೊಂಡಿದ್ದು, ನಾಳೆಯಿಂದ ನೂತನ ಕಟ್ಟಡದಲ್ಲಿ ಮುಂದುವರಿಯಲಿದೆ.
ಲೋಕಸಭಾ ಕಲಾಪದಲ್ಲಿ ಸಂಸತ್ತಿನ 75 ವರ್ಷಗಳ ಪಯಣ-ಸಾಧನೆಗಳು, ಅನುಭವಗಳು ಮತ್ತು ನೆನಪುಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದು, ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಮಾತನಾಡುವರು. ಇದೇ ಮೊದಲ ಬಾರಿಗೆ ನೂತನ ಸಂಸತ್ ಭವನದಲ್ಲಿ ಉಭಯ ಸದನಗಳ ಕಲಾಪಗಳು ನಡೆಯಲಿವೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಜೆಂಡಾ ಬಹಿರಂಗಪಡಿಸದೆ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿರುವುದು ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾಗಿದೆ. ಇನ್ನೊಂದೆಡೆ, ಐದು ರಾಜ್ಯಗಳು ಮುಂಬರುವ ವಿಧಾನಸಭಾ ಚುನಾವಣೆಗೆ ಅಣಿಯಾಗುತ್ತಿರುವುದರಿಂದ ರಾಜಕೀಯ ವಲಯದಲ್ಲಿ ಕೇಂದ್ರದ ನಡೆ ಅಚ್ಚರಿ ಮೂಡಿಸಿದೆ. ಆಡಳಿತ ಸರ್ಕಾರದ ಪ್ರತಿ ನಡೆಯನ್ನೂ ಪ್ರಶ್ನಿಸಲು ವಿರೋಧ ಪಕ್ಷಗಳು ತಯಾರಾಗಿವೆ.