ತೈವಾನ್ ಗಡಿ ತಲುಪಿದ ಚೀನಾ ಯುದ್ಧ ನೌಕೆಗಳು: ಆತಂಕದಲ್ಲಿ ದ್ವೀಪರಾಷ್ಟ್ರ

author img

By

Published : Aug 6, 2022, 11:16 AM IST

ತೈವಾನ್ ಗಡಿ ತಲುಪಿದ ಚೀನಾ ಯುದ್ಧ ನೌಕೆಗಳು: ಆತಂಕದಲ್ಲಿ ದ್ವೀಪರಾಷ್ಟ್ರ

ತೈವಾನ್ ವಿರುದ್ಧ ಚೀನಾ ಸೇನೆ ಮತ್ತಷ್ಟು ಉಗ್ರವಾಗಿ ಮಿಲಿಟರಿ ಡ್ರಿಲ್ ಆರಂಭಿಸಿದ್ದು, ಯಾವ ಕ್ಷಣದಲ್ಲಾದರೂ ದಾಳಿ ಮಾಡುವ ಸಾಧ್ಯತೆಗಳು ಗೋಚರಿಸುತ್ತಿವೆ. ತೈವಾನ್ ಗಡಿಯಲ್ಲಿ ಚೀನಾ ದಿನದಿಂದ ದಿನಕ್ಕೆ ತನ್ನ ಸೇನಾಪಡೆಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆ.

ತೈಪೇಯಿ: ಚೀನಾ ಸೇನೆ ತನ್ನ ಮುಖ್ಯ ದ್ವೀಪವೊಂದರ ಮೇಲೆ ದಾಳಿ ನಡೆಸುವ ಕವಾಯತುಗಳನ್ನು ನಡೆಸುತ್ತಿದೆ ಎಂದು ತೈವಾನ್ ಆರೋಪಿಸಿದೆ. ಅಮೆರಿಕ ಜನಪ್ರತಿನಿಧಿ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈವಾನ್​ಗೆ ಭೇಟಿ ನೀಡಿದ ನಂತರ ಆಕ್ರೋಶಗೊಂಡ ಚೀನಾ ತೈವಾನ್ ಸುತ್ತುವರಿದು ಮಿಲಿಟರಿ ಡ್ರಿಲ್ ನಡೆಸುತ್ತಿದೆ. ಸದ್ಯ ಈ ಡ್ರಿಲ್​ಗಳ ಮಟ್ಟವನ್ನು ಚೀನಾ ದ್ವಿಗುಣಗೊಳಿಸಿದೆ.

ಚೀನಾದ ನೆರೆಯಲ್ಲಿರುವ ತೈವಾನ್ ಸ್ವತಂತ್ರ ದೇಶವಾಗಿದೆ. ಆದರೆ ತೈವಾನ್ ತನ್ನ ದೇಶದ ಭಾಗವೆಂದು ಚೀನಾ ವಾದಿಸುತ್ತದೆ. ಈ ಮಧ್ಯೆ ಪೆಲೋಸಿ ಅವರು ತೈವಾನ್​ಗೆ ಭೇಟಿ ನೀಡಿದ್ದರಿಂದ ಎರಡೂ ರಾಷ್ಟ್ರಗಳ ಮಧ್ಯದ ವಿರಸ ಮತ್ತಷ್ಟು ಹೆಚ್ಚಾಗಿದೆ. ಚೀನಾ ಮತ್ತು ತೈವಾನ್​ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ವಿಶ್ವಸಂಸ್ಥೆ ಒತ್ತಾಯಿಸಿದೆ.

ಈ ಬಿಕ್ಕಟ್ಟಿನಿಂದ ಶುಕ್ರವಾರ ಹೊಸದೊಂದು ಸಮಸ್ಯೆ ಶುರುವಾಗಿದೆ. ಪ್ರಮುಖವಾಗಿ ಹವಾಮಾನ ಬದಲಾವಣೆ ಮತ್ತು ರಕ್ಷಣಾ ಸಹಕಾರ ವಿಷಯಗಳಲ್ಲಿ ವಾಶಿಂಗ್ಟನ್​ನೊಂದಿಗೆ ಮಾಡಿಕೊಳ್ಳಲಾದ ಸಹಕಾರ ಒಪ್ಪಂದಗಳಿಂದ ಹಿಂದೆ ಸರಿಯುವುದಾಗಿ ಹಾಗೂ ಮುಂಬರುವ ಮಾತುಕತೆಗಳ ಸರಣಿಯನ್ನು ಬಹಿಷ್ಕರಿಸುವುದಾಗಿ ಚೀನಾ ಹೇಳಿದೆ.

ಅಮೆರಿಕಕ್ಕೆ ಚೀನಾ ಎಚ್ಚರಿಕೆ, ಒಪ್ಪಂದ ಮುರಿದುಕೊಳ್ಳಲು ಡ್ರ್ಯಾಗನ್​ ಚಿಂತನೆ: ಜಗತ್ತಿನ ಅತಿ ದೊಡ್ಡ ಮಾಲಿನ್ಯಕಾರಕ ದೇಶಗಳಾದ ಚೀನಾ ಮತ್ತು ಅಮೆರಿಕ, ಈ ದಶಕದಲ್ಲಿ ಹವಾಮಾನ ಬದಲಾವಣೆ ಕಾರ್ಯಸೂಚಿಯನ್ನು ವೇಗವಾಗಿ ಜಾರಿಗೊಳಿಸುವುದು ಮತ್ತು ಸಮಸ್ಯೆಯ ಪರಿಹಾರಕ್ಕೆ ಯತ್ನಿಸುವುದಾಗಿ ವಾಗ್ದಾನ ಮಾಡಿದ್ದವು. ಆದರೆ, ಈಗ ಆ ಒಪ್ಪಂದವು ಮುರಿದು ಬೀಳುವ ಸಾಧ್ಯತೆಯಿದೆ. ತೈವಾನ್ ಸುತ್ತಮುತ್ತ ಚೀನಾ ಇತಿಹಾಸದಲ್ಲೇ ತನ್ನ ಅತಿ ದೊಡ್ಡ ಸೇನಾ ಡ್ರಿಲ್ ನಡೆಸಿದೆ. ಆರಂಭದಲ್ಲಿ ತೈವಾನ್​ಗೆ ಹೋಗುವ ಎಲ್ಲ ಮಾರ್ಗಗಳನ್ನು ಬಂದ್​ ಮಾಡುವುದು ಹಾಗೂ ಅಂತಿಮವಾಗಿ ದ್ವೀಪರಾಷ್ಟ್ರವನ್ನು ವಶಪಡಿಸಿಕೊಳ್ಳುವುದು ಚೀನಾದ ಯುದ್ಧತಂತ್ರವಾಗಿದೆ.

ಚೀನಾದ ಹಲವಾರು ವಿಮಾನ ಮತ್ತು ಹಡಗುಗಳು ತೈವಾನ್​ ಕೊಲ್ಲಿಯ ಬಳಿ ಸುಳಿದಾಡುತ್ತಿವೆ ಮತ್ತು ಸದ್ಯದಲ್ಲೇ ತನ್ನ ಮೇಲೆ ದಾಳಿ ಮಾಡಲು ಈ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತೈವಾನ್ ಹೇಳಿದೆ.

ತೈವಾನ್ ಗಡಿಗೆ ತನ್ನ ಸೇನಾಪಡೆಗಳು ಎಷ್ಟು ಹತ್ತಿರದಲ್ಲಿವೆ ಎಂಬುದನ್ನು ತೋರಿಸುವ ಸಲುವಾಗಿ ಬೀಜಿಂಗ್ ಮಧ್ಯರಾತ್ರಿ ವೀಡಿಯೊ ಒಂದನ್ನು ಬಿಡುಗಡೆ ಮಾಡಿದೆ. ಏರ್ ಫೋರ್ಸ್​ ಪೈಲಟ್ ಒಬ್ಬಾತ ತನ್ನ ಕಾಕ್​ ಪಿಟ್​ನಲ್ಲಿ ಕುಳಿತು ತೈವಾನ್​ನ ಕರಾವಳಿ ಮತ್ತು ಬೆಟ್ಟಗುಡ್ಡಗಳ ಚಿತ್ರೀಕರಣ ಮಾಡುತ್ತಿರುವುದು ಇದರಲ್ಲಿ ಕಾಣಿಸುತ್ತದೆ.

ಹಳದಿ ಸಮುದ್ರದ ದಕ್ಷಿಣ ಭಾಗದಲ್ಲಿ ಲೈವ್ ಫೈರ್ ಡ್ರಿಲ್ ಆರಂಭಿಸುವುದಾಗಿ ಮತ್ತು ಈ ಡ್ರಿಲ್ ಶನಿವಾರದಿಂದ ಆಗಸ್ಟ್​ 15ರವರೆಗೆ ನಡೆಯಲಿದೆ ಎಂದು ಚೀನಾ ತಿಳಿಸಿದೆ. ಈ ಜಾಗವು ಚೀನಾ ಮತ್ತು ಕೊರಿಯಾ ಉಪದ್ವೀಪದಲ್ಲಿದೆ.

ಇದನ್ನು ಓದಿ:ಇಸ್ರೇಲ್​ - ಗಾಜಾ ನಡುವೆ ದಾಳಿ - ಪ್ರತಿದಾಳಿ.. ಹಮಾಸ್ ಕಮಾಂಡರ್ ಸೇರಿ 10 ಜನರ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.