ಜಾಹೀರಾತುಗಳು ಬಳಕೆದಾರರನ್ನು ಹೇಗೆ ಗುರಿಪಡಿಸುತ್ತವೆ ಎಂಬುದನ್ನು ಬಹಿರಂಗಪಡಿಸಲಿವೆ Facebook, Instagram

author img

By

Published : May 24, 2022, 6:59 PM IST

ಫೇಸ್‌ಬುಕ್‌ನ ಮೂಲ ಕಂಪನಿ ಮೆಟಾ

ಯುಎಸ್ ಮಧ್ಯಂತರ ಚುನಾವಣೆ ಮುಂಚಿತವಾಗಿ ಜಾಹೀರಾತುದಾರರು ರಾಜಕೀಯ ಜಾಹೀರಾತುಗಳೊಂದಿಗೆ ಜನರನ್ನು ಹೇಗೆ ಗುರಿಯಾಗಿಸುತ್ತಾರೆ ಎಂಬುದನ್ನು ಸಾರ್ವಜನಿಕವಾಗಿ ವಿವರಿಸುವುದಾಗಿ ಫೇಸ್‌ಬುಕ್‌ನ ಮೂಲ ಕಂಪನಿ ಮೆಟಾ ಹೇಳಿದೆ. 2020 ರಲ್ಲಿ, ಮೆಟಾ ಜಾಹೀರಾತಿನ ಮೂಲಕ 86 ಬಿಲಿಯನ್ ಯುಎಸ್ ಡಾಲರ್ ಗಳಿಸಿದೆ.

ವಾಷಿಂಗ್ಟನ್: ಫೇಸ್‌ಬುಕ್‌ನ ಮಾತೃಸಂಸ್ಥೆಯಾದ ಮೆಟಾ ಯುಎಸ್ ಮಧ್ಯಂತರ ಚುನಾವಣೆಗೆ ಕೆಲವು ತಿಂಗಳುಗಳು ಬಾಕಿ ಇರುವ ಮೊದಲೇ ಜಾಹೀರಾತುದಾರರು ರಾಜಕೀಯ ಜಾಹೀರಾತುಗಳನ್ನು ನೀಡುವ ಮೂಲಕ ಜನರನ್ನು ಹೇಗೆ ಆಕರ್ಷಿಸುತ್ತಾರೆ ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದಾಗಿ ಹೇಳಿದೆ.

ಇನ್‌ಸ್ಟಾಗ್ರಾಮ್‌ ಅನ್ನು ಸಹ ಹೊಂದಿರುವ ಮೆಟಾ, ತನ್ನ ಎರಡು ಸಾಮಾಜಿಕ ನೆಟ್‌ವರ್ಕ್‌ಗಳಲ್ಲಿ ಬರುವ ಜಾಹೀರಾತುಗಳ ಬಗ್ಗೆ ಪ್ರೇಕ್ಷಕರ ಆಸಕ್ತಿಗಳ ಕುರಿತು ಜುಲೈನಲ್ಲಿ ವಿವರಗಳನ್ನು ನೀಡುವುದಾಗಿ ಹೇಳಿದೆ. ನಿರ್ದಿಷ್ಟ ರಾಜ್ಯಗಳಲ್ಲಿನ ಜನರನ್ನು ಗುರಿಯಾಗಿಸುವ ಪ್ರಯತ್ನದಲ್ಲಿ ಜಾಹೀರಾತುದಾರರು ಎಷ್ಟು ಖರ್ಚು ಮಾಡುತ್ತಾರೆ ಎಂಬ ವಿಷಯವನ್ನು ಕಂಪನಿ ಹಂಚಿಕೊಳ್ಳಲಿದೆ.

ಸಾಮಾಜಿಕ ಸಮಸ್ಯೆಗಳು, ಚುನಾವಣೆಗಳು ಮತ್ತು ರಾಜಕೀಯ ಕುರಿತ ಜಾಹೀರಾತುಗಳ ವಿಶ್ಲೇಷಣೆ ಮತ್ತು ವರದಿಗಾಗಿ ಜಾಹೀರಾತುದಾರರನ್ನು ಗುರಿಪಡಿಸುವ ಮಾನದಂಡಗಳನ್ನು ಒದಗಿಸುವ ಮೂಲಕ, ನಮ್ಮ ತಂತ್ರಜ್ಞಾನದಲ್ಲಿ ಸಂಭಾವ್ಯ ಮತದಾರರನ್ನು ತಲುಪಲು ನಾವು ಜನರಿಗೆ ಸಹಾಯ ಮಾಡುತ್ತಿದ್ದೇವೆ ಎಂದು ಜೆಫ್ ಕಿಂಗ್ ಮೆಟಾದ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಡಿಜಿಲಾಕರ್ ಸೇವೆ ಇನ್ನು‌ ಮುಂದೆ ವಾಟ್ಸ್​ಆ್ಯಪ್​ ಮೂಲಕವೂ ಲಭ್ಯ

ಕೆಲವು ಗುಂಪುಗಳಲ್ಲಿ ರಾಜಕಾರಣಿಗಳು ಹೇಗೆ ತಪ್ಪು ದಾರಿಗೆಳೆಯುವ ಅಥವಾ ವಿವಾದಾತ್ಮಕ ರಾಜಕೀಯ ಸಂದೇಶಗಳನ್ನು ಹರಡುತ್ತಾರೆ ಎಂಬುದರ ಕುರಿತು ಹೊಸ ವಿವರಗಳು ಹೆಚ್ಚು ಬೆಳಕು ಚೆಲ್ಲುತ್ತವೆ. ಫೇಸ್‌ಬುಕ್ ಜಾಹೀರಾತು ಲೈಬ್ರರಿಯಲ್ಲಿ ಈ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ. ಇದರಲ್ಲಿ ಜಾಹೀರಾತನ್ನು ನೀಡಲು ಎಷ್ಟು ಖರ್ಚು ಮಾಡಿದ್ದಾರೆ ಎಂಬುದನ್ನು ತಿಳಿಯಬಹುದಾಗಿದೆ ಎಂದು ಮೆಟಾ ಹೇಳಿಕೆಯಲ್ಲಿ ತಿಳಿಸಿದೆ. ಮೆಟಾ 2020 ರಲ್ಲಿ $86 ಶತಕೋಟಿ ಆದಾಯವನ್ನು ಸಂಗ್ರಹಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.