ಖೇರ್ಸನ್​​ ವಿಮಾನ ನಿಲ್ದಾಣದ ಮೇಲೆ ಉಕ್ರೇನಿಯನ್​ ಪಡೆಗಳ ದಾಳಿ: ಎರಡೂ ಪಡೆಗಳ ನಡುವೆ ಭೀಕರ ಕಾಳಗ

author img

By

Published : Mar 17, 2022, 7:52 AM IST

Ukraine's military says it hit Russians at Kherson airport

ರಷ್ಯಾ ಪಡೆಗಳು ವಶಪಡಿಸಿಕೊಂಡಿದ್ದ ಖೇರ್ಸನ್​ ವಿಮಾನ ನಿಲ್ದಾಣದ ಮೇಲೆ ಉಕ್ರೇನ್‌ನ ಮಿಲಿಟರಿ ಪಡೆ ದಾಳಿ ನಡೆಸಿದೆ. ಈ ನಡುವೆ ಖೇರ್ಸನ್​ ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡುತ್ತಿರುವ ಉಪಗ್ರಹ ಚಿತ್ರಗಳು ಬಿಡುಗಡೆಯಾಗಿದ್ದು, ಉಕ್ರೇನ್​ ಪಡೆಗಳ ಪ್ರತಿ ದಾಳಿಗೆ ಸಾಕ್ಷಿಯಾಗಿವೆ.

ಲಿವಿವ್​( ಉಕ್ರೇನ್​): ರಷ್ಯಾ ಯುದ್ಧ ಘೋಷಿಸಿದ ಮೊದಲ ದಿನವೇ ಖೇರ್ಸನ್​ ವಿಮಾನ ನಿಲ್ದಾಣವನ್ನು ಯಾವುದೇ ಪ್ರತಿರೋಧ ಇಲ್ಲದೇ ವಶಕ್ಕೆ ಪಡೆದಿದ್ದವು. ಇದೀಗ ಉಕ್ರೇನ್​ ರಷ್ಯನ್​ ಪಡೆಗಳ ವಶದಲ್ಲಿರುವ ವಿಮಾನ ನಿಲ್ದಾಣವನ್ನ ಮರು ವಶಪಡಿಸಿಕೊಳ್ಳಲು ಕಾರ್ಯಾಚರಣೆ ಆರಂಭಿಸಿದೆ.

ಈ ಬಗ್ಗೆ ಉಕ್ರೇನಿಯನ್ ಮಿಲಿಟರಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉಕ್ರೇನ್​​​ನ ಅನಿರೀಕ್ಷಿತ ದಾಳಿಯಿಂದ ಗಲಿಬಿಲಿಗೊಂಡಿರುವ ರಷ್ಯನ್​ ಪಡೆಗಳು ಯುದ್ಧ ಸಾಮಗ್ರಿಗಳನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿವೆ. ಉಕ್ರೇನಿಯನ್​ ಪಡೆಗಳು ಖೇರ್ಸನ್​ ವಾಯು ನೆಲೆ ಮೇಲೆ ನಡೆಸುತ್ತಿರುವ ಉಪಗ್ರಹ ಚಿತ್ರಗಳು ಬಿಡುಗಡೆಗೊಂಡಿದ್ದು, ದಾಳಿಯ ಚಿತ್ರಣವನ್ನು ವಿಶ್ವದ ಎದುರು ತೆರೆದಿಟ್ಟಿವೆ.

ಯುದ್ಧದ ಆರಂಭದಲ್ಲಿ ಯಾವುದೇ ಹೋರಾಟವಿಲ್ಲದೇ ರಷ್ಯಾ ಪಡೆಗಳು ಖೇರ್ಸನ್​ ವಿಮಾನ ನಿಲ್ದಾಣವನ್ನು ವಶಕ್ಕೆ ಪಡೆದಿದ್ದವು. ಅಷ್ಟೇ ಅಲ್ಲ ಖೇರ್ಸನ್​ ಮೇಲೆ ನಿಯಂತ್ರಣ ಸಾಧಿಸಿದ ಬಳಿಕ ಕ್ರಿಮಿಯಾಕ್ಕೆ ಇಲ್ಲಿಂದ ಸಿಹಿ ನೀರು ಪೂರೈಕೆ ಮಾಡಲು ಎಲ್ಲ ವ್ಯವಸ್ಥೆ ಮಾಡಿದೆ. ರಷ್ಯಾ 2014ರಲ್ಲೇ ಕ್ರಿಮಿಯಾವನ್ನು ವಶಕ್ಕೆ ಪಡೆದುಕೊಂಡಿತ್ತು. ಈ ವೇಳೆ ಉಕ್ರೇನ್​ ಕ್ರಿಮಿಯಾಕ್ಕೆ ನೀರು ಪೂರೈಕೆ ಮಾಡುವುದನ್ನು ಬಂದ್​ ಮಾಡಿತ್ತು.

ಈ ನಡುವೆ ರಷ್ಯಾ ಭೂಸೇನೆ ಉಕ್ರೇನ್​​ನ ವಿವಿಧ ನಗರಗಳಲ್ಲಿ ನಡೆಸುತ್ತಿದ್ದ ಭಾರಿ ದಾಳಿಯನ್ನು ಹಂತ ಹಂತವಾಗಿ ಸ್ಥಗಿತಗೊಳಿಸುತ್ತಿದೆ ಎಂದು ಉಕ್ರೇನ್​ ಪಡೆ ಅಧಿಕಾರಿಗಳು ಹೇಳಿದ್ದಾರೆ.

ರಷ್ಯಾ-ಉಕ್ರೇನ್ ಯುದ್ಧದ ಕೆಲವು ಪ್ರಮುಖ ಬೆಳವಣಿಗೆಗಳು ಹೀಗಿವೆ

  • ಉಕ್ರೇನ್- ರಷ್ಯಾ ನಡುವೆ ಮುಂದುವರಿದ ಮಾತುಕತೆ. ಆದಾಗ್ಯೂ ಉಕ್ರೇನ್​ ಮೇಲೆ ಮಿಲಿಟರಿ ದಾಳಿ ಮುಂದುವರಿದಿದೆ ಎಂದು ರಷ್ಯಾ ಹೇಳಿದೆ.
  • ರಷ್ಯಾ ದಾಳಿಯನ್ನು ಸೆಪ್ಟೆಂಬರ್ 11 ದಾಳಿಗೆ ಹೋಲಿಸಿರುವ ಉಕ್ರೇನ್​ ಅಧ್ಯಕ್ಷರು, ತಮ್ಮ ನೆರವಿಗೆ ಬರುವಂತೆ ಅಮೆರಿಕ ಸಂಸತ್​​ಗೆ ಮನವಿ ಮಾಡಿದ್ದಾರೆ.
  • ಯುಎಸ್ ಅಧ್ಯಕ್ಷ ಜೋ ಬೈಡನ್​ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು "ಯುದ್ಧ ಅಪರಾಧಿ" ಎಂದು ಕರೆದಿದ್ದಾರೆ.
  • ಉಕ್ರೇನಿಯನ್ ಬಂದರು ನಗರ ಮರಿಯುಪೋಲ್ ರಷ್ಯಾ ದಾಳಿಯಿಂದ ಇನ್ನಿಲ್ಲದಂತೆ ನೆಲಕಚ್ಚಿದೆ
  • ಸೋವಿಯತ್-ಯುಗದ S-300 ವಾಯು ರಕ್ಷಣಾ ವ್ಯವಸ್ಥೆಗಳನ್ನು ಉಕ್ರೇನ್‌ಗೆ ವರ್ಗಾಯಿಸುವ ಬಗ್ಗೆ U.S. ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಚರ್ಚಿಸುವ ನಿರೀಕ್ಷೆಯಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.