ಜರ್ಮನಿಯಲ್ಲಿ ವಿಶ್ವದ ಮೊದಲ ಚಾಲಕರಹಿತ ರೈಲು ಅನಾವರಣ

author img

By

Published : Oct 12, 2021, 9:14 AM IST

driverless train

ಜರ್ಮನಿಯನಲ್ಲಿ ವಿಶ್ವದ ಮೊದಲ ಸ್ವಯಂಚಾಲಿತ ರೈಲು ಅನಾವರಣಗೊಂಡಿದೆ. ಡಿಸೆಂಬರ್​ನಿಂದ ಪ್ರಯಾಣಿಕರ ಸಂಚಾರ ಆರಂಭವಾಗಲಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಫ್ರಾಂಕ್‌ಫರ್ಟ್ (ಜರ್ಮನಿ): ಹ್ಯಾಂಬರ್ಗ್ ನಗರದಲ್ಲಿ ಜರ್ಮನ್ ರೈಲು ಆಪರೇಟರ್​​ ಡಾಯ್ಚ್ ಬಾನ್(Deutsche Bahn) ಮತ್ತು ಸೀಮೆನ್ಸ್ (Siemens)​ ಕಂಪನಿ​ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ವಿಶ್ವದ ಮೊದಲ ಸ್ವಯಂಚಾಲಿತ (ಚಾಲಕರಹಿತ) ರೈಲು ಅನಾವರಣಗೊಂಡಿದೆ.

ಇದು ಸಾಂಪ್ರದಾಯಿಕ ರೈಲುಗಳಿಗಿಂತ ಹೆಚ್ಚು ಸಮಯಪಾಲನೆ ಮತ್ತು ಇಂಧನ ದಕ್ಷತೆ ಹೊಂದಿದೆ. ಇಂಥ ನಾಲ್ಕು ಚಾಲಕರಹಿತ ರೈಲುಗಳು ಉತ್ತರ ನಗರದ ಎಸ್​-ಬಹನ್​ನಲ್ಲಿ ಸೇರಲಿವೆ. ಅಸ್ತಿತ್ವದಲ್ಲಿರುವ ರೈಲು ಮೂಲ ಸೌಕರ್ಯವನ್ನು ಬಳಸಿಕೊಂಡು ಡಿಸೆಂಬರ್​ನಿಂದ ಪ್ರಯಾಣಿಕರನ್ನು ಸಾಗಿಲು ಪ್ರಾರಂಭಿಸುತ್ತವೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಾಯ್ಚ್​ ಬಾನ್​​ ಸಿಇಒ ರಿಚರ್ಡ್​ ಲುಟ್ಜ್​, 'ಇದು 60 ಮಿಲಿಯನ್ ಡಾಲರ್(70 ಮಿಲಿಯನ್ ಡಾಲರ್​​)​ ವೆಚ್ಚದ ಯೋಜನೆ. ಈ ರೈಲುಗಳು ಪ್ರಯಾಣಿಕರಿಗೆ ವಿಶ್ವಾಸಾರ್ಹ ಸೇವೆ ನೀಡಲಿವೆ' ಎಂದು ಹೇಳಿದರು.

'ಸ್ವಯಂಚಾಲಿತ ರೈಲುಗಳು ಶೇಕಡಾ 30ರಷ್ಟು ಹೆಚ್ಚು ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿವೆ. ಸಮಯವನ್ನೂ ನಿಧಾನವಾಗಿ ಸುಧಾರಿಸಬಹುದು. ಶೇಕಡಾ 30ಕ್ಕಿಂತ ಹೆಚ್ಚಿನ ಶಕ್ತಿಯನ್ನೂ ಉಳಿಸಬಹುದು' ಎಂದು ಸೀಮೆನ್ಸ್​ ಸಿಇಒ ರೋಲ್ಯಾಂಡ್ ಬುಷ್ ಹೇಳಿದ್ದಾರೆ.

ಇದನ್ನೂ ಓದಿ: ಕೋವಿಡ್ ನಿರ್ಬಂಧಗಳ ಸಡಿಲಿಕೆ.. ರೈಲ್ವೆ ಪ್ರಯಾಣಿಕರ ಸಂಖ್ಯೆ ಶೇ. 113 ರಷ್ಟು ಹೆಚ್ಚಳ:RTI

ರೈಲನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ನಿಯಂತ್ರಿಸಲಾಗಿದ್ದರೂ ಮತ್ತು ಸಂಪೂರ್ಣ ಸ್ವಯಂಚಾಲಿತವಾಗಿದ್ದರೂ ರೈಲಲ್ಲಿ ಓರ್ವ ಚಾಲಕನೂ ಇರುತ್ತಾನೆ ಎಂದು ಕಂಪನಿಗಳು ಹೇಳಿಕೆಯಲ್ಲಿ ತಿಳಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.