ನೆರೆಯ ಕುತಂತ್ರಿಗೆ ಭಾರಿ ಹೊಡೆತ ; ಡಾಲರ್‌ ಎದುರು ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದ ಪಾಕ್‌ನ ರೂಪಾಯಿ

author img

By

Published : Sep 15, 2021, 7:49 PM IST

Pakistani rupee depreciates to all-time low at Rs 169.6 to US dollar

ಜಾಗತಿಕ ಮಾರುಕಟ್ಟೆಯಲ್ಲಿ ನೆರೆಯ ಪಾಕಿಸ್ತಾನಕ್ಕೆ ಭಾರಿ ಮುಖಭಂಗವಾಗಿದೆ. ಡಾಲರ್‌ ಎದುರು ಪಾಕ್‌ನ ರೂಪಾಯಿ 169.9ಕ್ಕೆ ಕುಸಿದಿದೆ. ಇದು ಹಿಂದೆಂದಿಗಿಂತಲೂ ಕಡಿಮೆ ಮೌಲ್ಯವಾಗಿದೆ..

ಕರಾಚಿ(ಪಾಕಿಸ್ತಾನ): ಅಫ್ಘಾನಿಸ್ತಾನವನ್ನು ತಾಲಿಬಾನ್‌ಗಳು ವಶಕ್ಕೆ ಪಡೆಯಲು ಪರೋಕ್ಷ ಬೆಂಬಲ ನೀಡಿ, ಉಗ್ರರರಿಗೆ ಬೇಕಿದ್ದ ಎಲ್ಲಾ ಸಹಾಯವನ್ನು ಮಾಡಿದ್ದ ಪಾಕಿಸ್ತಾನಕ್ಕೆ ಭಾರಿ ಹೊಡೆದ ಬಿದ್ದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಪಾಕ್‌ನ ರೂಪಾಯಿ ಮೌಲ್ಯ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇಂದು ಒಂದು ಡಾಲರ್‌ ಎದುರು 1 ರೂಪಾಯಿ ಕುಸಿತದೊಂದಿಗೆ ಪಾಕ್‌ ರೂಪಾಯಿ 169.9ಕ್ಕೆ ತಲುಪಿದೆ. ಇದು ಈವರೆಗೆ ಅತ್ಯಂತ ಕಡಿಮೆ ಮೌಲ್ಯವಾಗಿದೆ.

ಎಕ್ಸ್‌ಚೇಂಜ್ ಕಂಪನಿಗಳ ಅಸೋಸಿಯೇಶನ್‌ನ ಅಧ್ಯಕ್ಷ ಮಲಿಕ್ ಬೋಸ್ತಾನ್ ಈ ಬಗ್ಗೆ ಮಾಹಿತಿ ನೀಡಿದ್ದು, ಆಮದುದಾರರು ಮುಂಚಿತವಾಗಿ ಡಾಲರ್‌ಗಳನ್ನು ಕಾಯ್ದಿರಿಸುತ್ತಿರುವುದರಿಂದ ಇಂಟರ್‌ಬ್ಯಾಂಕ್ ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಯುಎಸ್ ಕರೆನ್ಸಿಯ ಬೆಲೆ ಏರಿಕೆಯಾಗುತ್ತಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಸ್ಟೇಟ್ ಬ್ಯಾಂಕ್ ಈವರೆಗೆ ಸ್ಥಳೀಯ ಕರೆನ್ಸಿಯನ್ನು ಸ್ಥಿರಗೊಳಿಸಲು ಮಧ್ಯಪ್ರವೇಶಿಸಿಲ್ಲ. ಇದನ್ನು ನಿಯಂತ್ರಿಸದಿದ್ದರೆ ಯುಎಸ್ ಡಾಲರ್ ತನ್ನ ಏರಿಕೆಯನ್ನು ಮುಂದುವರಿಸುತ್ತದೆ. ಸ್ಥಳೀಯ ಕರೆನ್ಸಿಯ ಮೌಲ್ಯ ಇನ್ನೂ ಕುಸಿಯುತ್ತದೆ ಎಂದು ಬೋಸ್ಟನ್ ಎಚ್ಚರಿಸಿದ್ದಾರೆ.

ಅಮೆರಿಕದ ಡಾಲರ್‌ ಎದುರು ಪಾಕಿಸ್ತಾನದ ರೂಪಾಯಿ 46 ಪೈಸೆ ಕುಸಿತ ನಂತರ ಜಾಗತಿಕ ಮಾರುಕಟ್ಟೆಯಲ್ಲಿ 169.50 ವಹಿವಾಟು ನಡೆಸಿದೆ ಎಂದು ಮೆಟ್ಟಿಸ್ ಗ್ಲೋಬಲ್, ವೆಬ್ ಆಧಾರಿತ ಹಣಕಾಸು ದತ್ತಾಂಶ ಮತ್ತು ವಿಶ್ಲೇಷಣೆ ಪೋರ್ಟಲ್ ವರದಿ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.