ರಣಭೀಕರ ಪ್ರವಾಹಕ್ಕೆ ಚೀನಾ ತತ್ತರ: ನದಿಗೆ ಉರುಳಿದ ಬಸ್​.. 1,20,000 ಜನರ ಸ್ಥಳಾಂತರ

author img

By

Published : Oct 11, 2021, 3:47 PM IST

Updated : Oct 11, 2021, 4:18 PM IST

Flc

ಭೀಕರ ಪ್ರವಾಹಕ್ಕೆ ಚೀನಾ ತತ್ತರಿಸಿದೆ. ನೆರೆಯಲ್ಲಿ ಸಿಲುಕಿದ್ದ 1,20,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಬೀಜಿಂಗ್(ಚೀನಾ): ಉತ್ತರ ಚೀನಾದಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಉಂಟಾಗಿದೆ. ಬಸ್ಸೊಂದು ನದಿಗೆ ಉರುಳಿ ಬಿದ್ದಿದ್ದು, ಕನಿಷ್ಠ ಇಬ್ಬರು ಮೃತಪಟ್ಟಿದ್ದು, 12 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಧಾರಾಕಾರ ಮಳೆಯಿಂದಾಗಿ ಬೀಜಿಂಗ್​ನಿಂದ 265 ಕಿಲೋ ಮೀಟರ್ ದೂರದಲ್ಲಿರುವ ಶಿಜಿಯಾಸುಹಾಂಗ್​​​ ನಗರದ ಸೇತುವೆ ಮುಳುಗಡೆಯಾಗಿದೆ. ಇದೇ ಮಾರ್ಗವಾಗಿ ಬಂದ ಬಸ್​​​ ನೀರಿನ ರಭಸಕ್ಕೆ ಸಿಲುಕಿ ನದಿಗೆ ಉರುಳಿದೆ. ಬಸ್​ ಮುಳುಗುತ್ತಿದ್ದ ವೇಳೆ ಪ್ರಯಾಣಿಕರು ಜೀವ ಉಳಿಸಿಕೊಳ್ಳುವುದಕ್ಕೆ ಪರದಾಡುತ್ತಿದ್ದಾರೆ. ಹೆಬೈ ಪ್ರಾಂತ್ಯದ ಅಧಿಕಾರಿಗಳು ಬಸ್ಸಿನಲ್ಲಿದ್ದ 51 ಜನರ ಪೈಕಿ 37 ಜನರನ್ನು ರಕ್ಷಿಸಲಾಗಿದೆ ಎಂದು ಹೇಳಿದ್ದಾರೆ.

ಭೀಕರ ಪ್ರವಾಹಕ್ಕೆ ಚೀನಾ ತತ್ತರ

ಪ್ರವಾಹದಿಂದಾಗಿ ನೆರೆಯ ಶಾಂಕ್ಸಿ ಪ್ರಾಂತ್ಯದಲ್ಲಿ 1,20,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಸಾವಿರಾರು ಮನೆಗಳು ಕುಸಿದಿವೆ ಮತ್ತು 190,000 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಅಧಿಕೃತ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಮತ್ತೆ ಗುಡುಗು ಸಹಿತ ಭಾರಿ ಮಳೆ: ಜನಜೀವನ ಅಸ್ತವ್ಯಸ್ತ

ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಐತಿಹಾಸಿಕ ಪಟ್ಟಣವಾದ ಪಿಂಗ್ಯಾವೋದಲ್ಲಿ ಭಾರಿ ಮಳೆಯಾಗಿದ್ದು ಗೋಡೆಯ 25 ಮೀಟರ್ ವರೆಗೆ ಹಾನಿಯಾಗಿದೆ ಎಂದು ಕ್ಸಿನ್ಹುವಾ ಹೇಳಿದೆ. ನಿರಂತರ ಮಳೆಯು ನಗರದ ಪುರಾತನ ಮಣ್ಣಿನ ರಚನೆಗಳು ಸಹ ಹಾಳಾಗಿವೆ ಎಂದು ಸುದ್ದಿ ಸಂಸ್ಥೆ ಹೇಳಿದೆ.

Last Updated :Oct 11, 2021, 4:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.