ಆಫ್ಘನ್ ಬಿಕ್ಕಟ್ಟು: 1.2 ಬಿಲಿಯನ್ ಡಾಲರ್ ನೆರವು ಘೋಷಿಸಿದ ವಿಶ್ವಸಂಸ್ಥೆ

author img

By

Published : Sep 14, 2021, 6:38 AM IST

ವಿಶ್ವಸಂಸ್ಥೆ

ಮಾನವೀಯ ನೆಲೆಯಲ್ಲಿ ಅಫ್ಘಾನಿಸ್ತಾನಕ್ಕೆ 1.2 ಬಿಲಿಯನ್ ಡಾಲರ್ ನೆರವು ಘೋಷಿಸಿರುವುದಾಗಿ ವಿಶ್ವಸಂಸ್ಥೆ ಹೇಳಿದೆ.

ವಿಶ್ವಸಂಸ್ಥೆ: ಆಫ್ಘನ್​ನಲ್ಲಿ ಉದ್ಭವಿಸಿರುವ ಮಾನವೀಯ ಬಿಕ್ಕಟ್ಟನ್ನು ನಿಭಾಯಿಸುವ ಸಲುವಾಗಿ 1.2 ಬಿಲಿಯನ್ ಡಾಲರ್​​ ನೆರವು ನೀಡಲು ವಿಶ್ವಸಂಸ್ಥೆ ಮುಂದಾಗಿದೆ.

ಅಧೀನ ಕಾರ್ಯದರ್ಶಿ - ಜನರಲ್ ಮಾರ್ಟಿನ್ ಗ್ರಿಫಿತ್ಸ್, ಸೋಮವಾರ ಜಿನೀವಾದಲ್ಲಿ ನಡೆದ ಉನ್ನತ ಮಟ್ಟದ ಸಚಿವರ ಸಭೆಯ ಮುಕ್ತಾಯದ ವೇಳೆ ಈ ಭರವಸೆ ನೀಡಿದರು. 2021 ರ ವರ್ಷಾಂತ್ಯದವರೆಗೆ 11 ಮಿಲಿಯನ್ ಜನರಿಗೆ ಸಹಾಯ ಮಾಡಲು 606 ಮಿಲಿಯನ್ ಯುಎಸ್ ಡಾಲರ್ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಅಫ್ಘಾನ್‌ ಬಿಕ್ಕಟ್ಟು ; ಅಮೆರಿಕದ ಏಜೆನ್ಸಿಯಿಂದ ತರಬೇತಿ ಪಡೆದಿದ್ದ 20 ಸಾವಿರ ಕಮಾಂಡೋಗಳ ಏರ್‌ಲಿಫ್ಟ್‌

ಆಹಾರ, ಆರೋಗ್ಯ ಮತ್ತು ರಕ್ಷಣಾ ಕೊರತೆಯಿರುವ ಅಫ್ಘಾನಿಸ್ತಾನಕ್ಕೆ ಈ ನೆರವು ಜೀವನಾಧಾರವಾಗುತ್ತದೆ. ಆಫ್ಘನ್​ ಜನಜೀವನ ಯಥಾಸ್ಥಿತಿಗೆ ಮರಳಲು, ಅವರ ಜೀವನ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ಈ ನಿರ್ಧಾರ ಕೈಗೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.