ಅಫ್ಘಾನಿಸ್ತಾನಕ್ಕೆ ಶೀಘ್ರ ಪರಿಹಾರ ಬಿಡುಗಡೆ ಮಾಡಿ: ವಿಶ್ವಸಂಸ್ಥೆ ಕರೆ

author img

By

Published : Sep 15, 2021, 11:12 AM IST

UN calls for quick release of USD 1.2 billion aid to Afghanistan

ಅಫ್ಘಾನಿಸ್ತಾನಕ್ಕೆ ಶೀಘ್ರವೇ 1.2 ಬಿಲಿಯನ್​ ಯುಎಸ್ ಡಾಲರ್ ಪರಿಹಾರ ನೀಡುವಂತೆ ದೇಶಗಳಿಗೆ ವಿಶ್ವಸಂಸ್ಥೆಯು ಮನವಿ ಮಾಡಿದೆ, ಹಣವನ್ನು ತ್ವರಿತವಾಗಿ ನೀಡುವ ಮೂಲಕ ಆಹಾರ, ಆರೋಗ್ಯ ರಕ್ಷಣೆ ಮತ್ತು ಸಂತ್ರಸ್ತರಿಗೆ ಪರಿಹಾರ ನೀಡಲು ನೆರವಾಗುವಂತೆ ಕೋರಿದೆ.

ನ್ಯೂಯಾರ್ಕ್​: ತಾಲಿಬಾನಿಯರ ಅಟ್ಟಹಾಸದಿಂದ ಸಂಕಷ್ಟಕ್ಕೆ ತುತ್ತಾಗಿರುವ ಅಫ್ಘಾನಿಸ್ತಾನಕ್ಕೆ ತ್ವರಿತವಾಗಿ 1.2 ಬಿಲಿಯನ್ ಯುಎಸ್ ಡಾಲರ್ ಪರಿಹಾರವನ್ನು ನೀಡಲು ನೆರವಾಗುವಂತೆ ಎಲ್ಲ ದೇಶಗಳಿಗೆ ವಿಶ್ವಸಂಸ್ಥೆ ಮನವಿ ಮಾಡಿದೆ.

ಹಣವನ್ನು ತ್ವರಿತವಾಗಿ ನೀಡುವ ಮೂಲಕ ಆಹಾರ, ಆರೋಗ್ಯ ರಕ್ಷಣೆ ಮತ್ತು ಸಂತ್ರಸ್ತರಿಗೆ ಪರಿಹಾರ ನೀಡಲು ನೆರವಾಗುವಂತೆ ಪರಿಹಾರ ರೂಪದಲ್ಲಿ ಹಣ ಬಿಡುಗಡೆ ಮಾಡಬೇಕಿರುವುದರಿಂದ ಆದಷ್ಟು ಬೇಗ ಪರಿಹಾರ ನೀಡುವಂತೆ ಮನವಿ ಮಾಡಿದೆ.

ಯುಎನ್ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಅವರ ವಕ್ತಾರ ಸ್ಟೀಫನ್ ಡುಜಾರಿಕ್ ಅವರು ಮಂಗಳವಾರ ಜಿನೀವಾದಲ್ಲಿ ನಡೆದ ಉನ್ನತ ಮಟ್ಟದ ಸಮಾವೇಶದಲ್ಲಿ ಘೋಷಿಸಿದ ಮಾನವೀಯ ನೆರವಿನ ವಾಗ್ದಾನಗಳಲ್ಲಿ ಇದೂ ಒಂದಾಗಿದೆ.

ವಿಶ್ವಸಂಸ್ಥೆಯ ಮಾನವೀಯ ಪಾಲುದಾರರು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒಗಳು) ಸೇರಿದಂತೆ ಸಹೃದಯಿಗಳು ಅಫ್ಘಾನ್ ಜನರ, ಮಕ್ಕಳ, ಮಹಿಳೆಯರ, ಆಹಾರ ಆರೋಗ್ಯ ಮತ್ತು ರಕ್ಷಣೆಯಾಗಿ ಕೈ ಜೋಡಿಸಬೇಕೆಂದು ಡುಜಾರಿಕ್ ಮನವಿ ಮಾಡಿದ್ದಾರೆ.

ಯುಎನ್ ಮತ್ತು ಅದರ ಪಾಲುದಾರರು ಅಫ್ಘಾನಿಸ್ತಾನದಲ್ಲಿ ಅಗತ್ಯವಿರುವ ಲಕ್ಷಾಂತರ ಜನರಿಗೆ ನೆರವು ನೀಡುವುದನ್ನು ಮುಂದುವರಿಸಿದ್ದು, ಈಗಾಗಲೇ ಹಲವಾರು ಪರಿಹಾರ ಸಾಮಗ್ರಿಗಳು ಮಜರ್-ಇ-ಶರೀಫ್‌ನಿಂದ ರಸ್ತೆಯ ಮೂಲಕ ಮೈಮನಕ್ಕೆ ಮತ್ತು ಕಾಬೂಲ್‌ನಿಂದ ಜಲಾಲಾಬಾದ್​ನ ಸಂತ್ರಸ್ತರನ್ನು ತಲುಪಿಸಿದೆ.

ಯುಎನ್ ರೆಫ್ಯೂಜಿ ಏಜೆನ್ಸಿ (ಯುಎನ್‌ಹೆಚ್‌ಸಿಆರ್) ನೆರವಿನೊಂದಿಗೆ ಬೆಂಗಾವಲು ವಾಹನವು ನಂಗರ್‌ಹಾರ್ ತಲುಪಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಆಗಸ್ಟ್ 15 ರಿಂದ ಟಾರ್ಕಮ್ ಬಾರ್ಡರ್ ಕ್ರಾಸಿಂಗ್ ಮೂಲಕ ಅಫ್ಘಾನಿಸ್ತಾನವನ್ನು ಪ್ರವೇಶಿಸಿದ ಎರಡನೇ ಪರಿಹಾರ ಸಾಮಗ್ರಿ ಹೊತ್ತ ವಾಹನ ಇದಾಗಿದೆ.

ವಿಶ್ವ ಆಹಾರ ಕಾರ್ಯಕ್ರಮದ (ಡಬ್ಲ್ಯುಎಫ್‌ಪಿ) ಭಾಗವಾಗಿ ಈ ಸೇವೆ ದುರ್ಬಲ ಕುಟುಂಬಗಳಿಗೆ ಒಂದು ತಿಂಗಳವರೆಗೆ ಆಹಾರ ಒದಗಿಸಲಿದೆ ಎಂದು ಅವರು ಹೇಳಿದ್ರು. ಪಾಕಿಸ್ತಾನ, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್‌ನಲ್ಲಿನ ಆಯಕಟ್ಟಿನ ಗಡಿ ಪ್ರದೇಶಗಳಲ್ಲಿ ಆಹಾರ ಮತ್ತು ಇತರ ದಾಸ್ತಾನುಗಳು ಡಬ್ಲ್ಯುಎಫ್‌ಪಿ ಪೂರ್ವ ಸ್ಥಾನದಲ್ಲಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಗಳ ವಕ್ತಾರರು ಹೇಳಿದ್ದಾರೆ.

ಇನ್ನು ಉರ್ಬೇಕಿಸ್ತಾನದ ಟೆರ್ಮೆಜ್ ನಲ್ಲಿ ಲಾಜಿಸ್ಟಿಕ್ಸ್ ಹಬ್ ಸ್ಥಾಪಿಸಲಾಗುತ್ತಿದೆ. ತಾಲಿಬಾನ್​ ಅಫ್ಘಾನಿಸ್ತಾನವನ್ನು ತನ್ನದಾಗಿಸಿಕೊಂಡ ಬಳಿಕ ಶೇ 90 ಕ್ಕಿಂತ ಹೆಚ್ಚು ಕುಟುಂಬಗಳು ಊಟಕ್ಕೂ ಕಷ್ಟಪಡುತ್ತಿವೆ ಎಂದು ವಕ್ತಾರರು ಹೇಳಿದ್ದಾರೆ.

ಇದನ್ನೂ ಓದಿ:ಕಾಬೂಲ್ ಏರ್​ಪೋರ್ಟ್​ನಲ್ಲಿ ವಿಮಾನಸೇವೆ ಶೀಘ್ರ ಆರಂಭ: ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.