ಭೀಕರ ಸುಂಟರಗಾಳಿಯನ್ನು ಗೆದ್ದು ಬಂದ ಪಿಕಪ್ ವಾಹನ : ವಿಡಿಯೋ ವೈರಲ್

author img

By

Published : Mar 25, 2022, 12:10 PM IST

Texas tornado and a truck video surfaced on internet

ಅಮೆರಿಕದ ಟೆಕ್ಸಾಸ್​​ನಲ್ಲಿ ಟಾರ್ನೆಡೋದ ಅಬ್ಬರಕ್ಕೆ ಮಣಿಯದ ಪಿಕಪ್ ವಾಹನವೊಂದು ಸಲೀಸಾಗಿ ಪಾರಾಗಿರುವ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ..

ನೈಸರ್ಗಿಕ ವಿಕೋಪಗಳು ಭೀಕರವಾಗಿರುತ್ತವೆ. ಸೈಕ್ಲೋನ್, ಚಂಡಮಾರುತ, ಭೂಕಂಪ, ಜಾಲ್ವಾಮುಖಿಗಳ ರೌದ್ರತೆಯನ್ನು ಅಳೆಯುವುದಕ್ಕೆ ಸಾಧ್ಯವೇ ಇರುವುದಿಲ್ಲ. ನೈಸರ್ಗಿಕ ವಿಕೋಪಗಳಿಗೆ ಸಿಲುಕಿದರೆ ಧ್ವಂಸವಾಗುವುದಂತೂ ಗ್ಯಾರಂಟಿ. ಟಾರ್ನೆಡೋಗಳ ಬಗ್ಗೆ ನೀವು ಕೇಳಿರಬಹುದು. ಟಾರ್ನೆಡೋ ಎಂದರೆ ಭೀಕರವಾದ ಸುಂಟರಗಾಳಿ.

ಟಾರ್ನೆಡೋ ಭೀಕರವಾಗಿದ್ದರೂ, ಆರ್ಭಟ ಪ್ರದರ್ಶಿಸಿದರೂ, ಪಿಕಪ್ ವಾಹನ ಒಂದು ಸಲೀಸಾಗಿ ಪಾರಾಗಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಮೆರಿಕದ ಟೆಕ್ಸಾಸ್​​ನಲ್ಲಿ ಈ ಘಟನೆ ನಡೆದಿದೆ. ಟಾರ್ನೆಡೋದ ಅಬ್ಬರಕ್ಕೆ ಪಿಕಪ್ ವಾಹನ ಕೂಡ ಗಿರಗಿರನೇ ವೃತ್ತಕಾರದಲ್ಲಿ ಸುತ್ತಿ, ಪಲ್ಟಿಯಾಗಿದ್ದು, ನಂತರ ಸಾಮಾನ್ಯ ಸ್ಥಿತಿಗೆ ಮರಳಿದೆ.

ಟಾರ್ನೆಡೋ ಮರೆಯಾದ ಬಳಿಕ ಚಾಲಕ ಸಾಮಾನ್ಯನಂತೆ ವಾಹನವನ್ನು ಅನ್ನು ಚಾಲನೆ ಮಾಡಿದ್ದಾನೆ. ರಿಲೇ ಲಿಯಾನ್ ಅವರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದೇ ಟಾರ್ನೆಡೋ ಮರಗಳನ್ನು ಉರುಳಿಸಿ, ಮನೆಗಳನ್ನು ಧ್ವಂಸ ಮಾಡಿದೆ. ಲಿಯಾನ್ ಎಂಬಾತ ಈ ಪಿಕಪ್ ವಾಹನದಲ್ಲಿದ್ದು, ನಾನು ಬದುಕಿದ್ದೇನೆ ಎಂದು ನಂಬಲು ಇನ್ನೂ ಸಾಧ್ಯವಾಗುತ್ತಿಲ್ಲ.

ದೇವರಿಗೆ ಧನ್ಯವಾದಗಳು ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಟಾರ್ನೆಡೋದಿಂದ ಸ್ವಲ್ಪಮಟ್ಟಿಗೆ ಹಾನಿಗೆ ಒಳಗಾದ ಕಾರನ್ನು ವಿಮಾ ಕಂಪನಿಗೆ ತೆಗೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ. ಟಾರ್ನೆಡೋದಲ್ಲಿ ಪಿಕಪ್ ವಾಹನ ಸಿಲುಕಿದಾಗ ಏನು ಮಾಡಬೇಕೆಂದು ಗೊತ್ತಾಗಲಿಲ್ಲ.

ಸ್ಟೀರಿಂಗ್ ಹಿಡಿಯಬೇಕೋ ಅಥವಾ ದೇವರಲ್ಲಿ ಪ್ರಾರ್ಥಿಸಬೇಕೋ ಎಂದು ತಿಳಿಯಲಿಲ್ಲ. ವಿಡಿಯೋದಲ್ಲಿ ನಾನು ಕಾರನ್ನು ಚಾಲನೆ ಮಾಡಿದಂತೆ ಕಾಣುತ್ತಿದೆ. ಆದರೆ, ವಾಸ್ತವವಾಗಿ ಕಾರನ್ನು ಚಾಲನೆ ಮಾಡಲು ಸಾಧ್ಯವಾಗಲಿಲ್ಲ ಎಂದು ಲಿಯಾನ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ರಷ್ಯಾ ಉಕ್ರೇನ್​ ನಾಗರಿಕರನ್ನು ಅಪಹರಣ ಮಾಡುತ್ತಿದೆ: ಗಂಭೀರ ಆರೋಪ ಮಾಡಿದ ಕೀವ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.