SpaceX : ಬಾಹ್ಯಾಕಾಶ ಪ್ರವಾಸ ಮುಗಿಸಿ ಸುರಕ್ಷಿತವಾಗಿ ಹಿಂದಿರುಗಿದ ನಾಲ್ವರು

author img

By

Published : Sep 19, 2021, 7:44 AM IST

SpaceX

ಮಾನವ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಸೃಷ್ಟಿಯಾಗಿದೆ. ಬಾಹ್ಯಾಕಾಶ ಪ್ರವಾಸ ಕೈಗೊಂಡಿದ್ದ ನಾಲ್ವರು ಸುರಕ್ಷಿತವಾಗಿ ಮರಳಿದ್ದಾರೆ.

ಕೇಪ್ ಕೆನವೆರಲ್(ಅಮೆರಿಕ): ಮೂರು ದಿನಗಳ ಕಾಲ ಬಾಹ್ಯಾಕಾಶ ಪ್ರವಾಸ ಕೈಗೊಂಡಿದ್ದ ನಾಲ್ವರು ಫ್ಲೋರಿಡಾದ ಕರಾವಳಿಯಲ್ಲಿ ಶನಿವಾರ ಸಂಜೆ ಸುರಕ್ಷಿತವಾಗಿ ಬಂದಿಳಿದಿದ್ದಾರೆ.

  • #WATCH | After orbiting Earth for 3 days, four astronauts of Inspiration4 flying aboard SpaceX’s Dragon spacecraft safely splashed down in Atlantic Ocean off coast Florida, US today, marking the completion of world’s first all-civilian human spaceflight to orbit

    (Video: SpaceX) pic.twitter.com/HNeuHq3b2t

    — ANI (@ANI) September 18, 2021 " class="align-text-top noRightClick twitterSection" data=" ">

ಮೂರು ದಿನಗಳ ಹಿಂದೆ ಸ್ಪೇಸ್​ಎಕ್ಸ್​ (SpaceX) ಕಂಪನಿಯ ಖಾಸಗಿ ಫ್ಲೈಟ್ ಕೆನಡಿ ಬಾಹ್ಯಾಕಾಶ ಕೇಂದ್ರದ ಪ್ಯಾಡ್ 39A ನಿಂದ​ ನಭಕ್ಕೆ ಜಿಗಿದಿತ್ತು. ಇದರಲ್ಲಿ ಓರ್ವ ಉದ್ಯಮಿ, ಆರೋಗ್ಯ ಕಾರ್ಯಕರ್ತೆ, ಮತ್ತಿಬ್ಬರು ಬುಧವಾರ ರಾತ್ರಿ Inspiration-4 ಮೂಲಕ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ್ದರು.

ವಿಶ್ವದ ಕುತೂಹಲ ಹುಟ್ಟುಹಾಕಿದ್ದ, ಬಹುನಿರೀಕ್ಷಿತ ಯೋಜನೆ ಇದಾಗಿದ್ದು, ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ್ದವರಾರೂ, ವೃತ್ತಿಪರ ಬಾಹ್ಯಾಕಾಶಯಾನಿಗಳಾಗಿರಲಿಲ್ಲ.

ಬಿಲೇನಿಯರ್​​ ಜರೇಡ್ ಐಸಾಕ್​ಮನ್ (38), ವೇತನ ಪಾವತಿ ಪ್ರಕ್ರಿಯೆ ನಡೆಸುವ ಕಂಪನಿಯೊಂದರ ಸಂಸ್ಥಾಪಕರಾಗಿದ್ದು, ಇವರೊಂದಿಗೆ ಬಾಲ್ಯದಲ್ಲಿಯೇ ಕ್ಯಾನ್ಸರ್​​ನಿಂದ ಗುಣಮುಖರಾದ, ಆರೋಗ್ಯ ಕಾರ್ಯಕರ್ತರಾದ ಹೈಲೆ ಹರ್ಕೆನಿಕ್ಸ್ (29) ಜೊತೆಯಾಗಿದ್ದರು. ಈ ಇಬ್ಬರ ಜೊತೆಗೆ ಸ್ವೀಪ್​ಟೇಕ್ಸ್ (Sweepstakes) ಎಂಬ ಸ್ಪರ್ಧೆಯಲ್ಲಿ ಜಯಗಳಿಸಿದ್ದ ವಾಷಿಂಗ್ಟನ್​​ನಲ್ಲಿ ಡೇಟಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಕ್ರಿಸ್ ಸೆಂಬ್ರೊಸ್ಕಿ (42) ಹಾಗೂ ಅರಿಜೋನಾದ ಸಮುದಾಯ ಕಾಲೇಜೊಂದರ ಎಜುಕೇಟರ್ ಸಿಯಾನ್ ಪ್ರಾಕ್ಟರ್ (51) ಎಂಬುವವರೂ ಇದ್ದರು.

ಈ ನಾಲ್ವರು ಬಾಹ್ಯಾಕಾಶ ಪ್ರವಾಸ ಕೈಗೊಳ್ಳುವುದಕ್ಕೂ ಮುನ್ನ ಆರು ತಿಂಗಳಿಗೂ ಅಧಿಕ ಕಾಲ ತರಬೇತಿ ಪಡೆದಿದ್ದರು. ಸ್ವಯಂಚಾಲಿತ ಡ್ರ್ಯಾಗನ್ ಕ್ಯಾಪ್ಸುಲ್‌ನಲ್ಲಿ ಸಂಭವನೀಯ ತುರ್ತು ಪರಿಸ್ಥಿತಿಗಳನ್ನು ಎದುರಿಸುವುದನ್ನು ಕಲಿತಿದ್ದರು. ಇದೀಗ ಈ ನಾಲ್ವರು ಮೂರು ದಿನಗಳ ಕಾಲ ಬಾಹ್ಯಾಕಾಶ ಪ್ರವಾಸ ಕೈಗೊಂಡು ಸುರಕ್ಷಿತವಾಗಿ ಭೂಮಿಗೆ ಹಿಂದಿರುಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.