ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ ಬ್ಯಾಟ್ನಿಂದ ಬರಬೇಕಾದ ದಾಖಲೆಗಳಿವು...
ಏಕದಿನ ಕ್ರಿಕೆಟ್ ಮಾದರಿಯಲ್ಲಿ ಈಗಾಗಲೇ 50 ಶತಕ ಸಿಡಿಸಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆ ಭಗ್ನಗೊಳಿಸಿರುವ ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ, ಭವಿಷ್ಯದಲ್ಲಿ ಮಾಡಬೇಕಾಗಿರುವ ದಾಖಲೆಗಳು ಯಾವುವು ಗೊತ್ತಾ? ವಿಶ್ವದ ಅತ್ಯದ್ಭುತ ಕ್ರಿಕೆಟ್ ಪಟು ಆಗಲು ಇನ್ನೆಷ್ಟು ಹೆಜ್ಜೆ ಬೇಕು? ಹೀಗೆ ಬ್ಯಾಟ್ ಬೀಸಿದರೆ ಬಹಳ ದಿನ ಕಾಯಬೇಕಿಲ್ಲ ಎನ್ನುತ್ತಾರೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ.

1/ 16
ಏಕದಿನ ಕ್ರಿಕೆಟ್ ಮಾದರಿಯಲ್ಲಿ ಈಗಾಗಲೇ 50 ಶತಕ ಸಿಡಿಸಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಭಗ್ನಗೊಳಿಸಿರುವ ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ, ಭವಿಷ್ಯದಲ್ಲಿ ಮಾಡಬೇಕಾಗಿರುವ ದಾಖಲೆಗಳು ಯಾವವು ಗೊತ್ತಾ? ವಿಶ್ವದ ಅತ್ಯದ್ಭುತ ಕ್ರಿಕೆಟ್ ಪಟು ಆಗಲು ಇನ್ನೆಷ್ಟು ಹೆಜ್ಜೆ ಬೇಕು? ಹೀಗೆ ಬ್ಯಾಟ್ ಬೀಸಿದರೆ ಬಹಳ ದಿನ ಕಾಯಬೇಕಿಲ್ಲ ಎನ್ನುತ್ತಾರೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ. ಟೆಸ್ಟ್ ಹಾಗೂ ಏಕದಿನ ಮಾದರಿಯಲ್ಲಿ 100 ಶತಕಗಳನ್ನು ಸಿಡಿಸಿ ಅಗ್ರಸ್ಥಾನದಲ್ಲಿರುವ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿಯುವುದು ಕೊಹ್ಲಿ ಮುಂದಿರುವ ಗುರಿ. ಹೀಗೆ ಬ್ಯಾಟ್ ಬೀಸಿದರೆ ಸದ್ಯದಲ್ಲೇ ಸಚಿನ್ ಹೆಸರಿನಲ್ಲಿರುವ ಈ ದಾಖಲೆಗಳನ್ನು ಹಿಂದಿಕ್ಕುವ ಸಾಧ್ಯತೆಗಳಿವೆ. ಏಕದಿನ ಕ್ರಿಕೆಟ್ ಮಾದರಿಯಲ್ಲಿ 49 ಹಾಗೂ ಟೆಸ್ಟ್ನಲ್ಲಿ 51 ಶತಕಗಳನ್ನು ಸಿಡಿಸಿರುವ ಸಚಿನ್ ವೃತ್ತಿ ಬದುಕಿನ ಟಾಪ್ ಆಟಗಾರರಾಗಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 50 ಶತತಕಗಳ ಜೊತೆ ಟೆಸ್ಟ್ ಕ್ರಿಕೆಟ್ನಲ್ಲೂ 29 ಹಾಗೂ T20ಯಲ್ಲಿ1 ಶತಕ ಸಿಡಿಸಿರುವ ವಿರಾಟ್ ಕೊಹ್ಲಿ, ಒಟ್ಟು 80 ಅಂತಾರಾಷ್ಟ್ರೀಯ ಶತಕಗಳನ್ನು ಸಿಡಿಸಿದ್ದಾರೆ. ಉತ್ತಮ ಫಾರ್ಮ್ನಲ್ಲಿರುವ ಈ ಸ್ಟಾರ್ ಪಟು ಮುಂದಿನ 10 ಇನ್ನಿಂಗ್ಸ್ನಲ್ಲಿ ಬಹುಶಃ ನೀವು ಐದು ಶತಕಗಳನ್ನು ನೋಡಬಹುದು. 3-4 ವರ್ಷ ಅವರ ಲಯ ಇದೇ ರೀತಿ ಇರಬಹುದು. ಬಹು ಬೇಗನೆ ಶತಕಗಳನ್ನು ಬರೆಯಬಹುದು ಎನ್ನುತ್ತಾರೆ ರವಿಶಾಸ್ತ್ರಿ.
Loading...
Loading...
Loading...