ಹೊಸ ಬೈಕ್ ಖರೀದಿಸಬೇಕೆ? ಟಾಪ್ 10 ಸೂಪರ್ ಸ್ಟೈಲಿಶ್ ಎಲೆಕ್ಟ್ರಿಕ್ ಬೈಕ್ಗಳು ಇಲ್ಲಿವೆ
ನೀವು ಹೊಸ ಬೈಕ್ ಖರೀದಿಸಬೇಕೆ? ತುಂಬಾ ಸ್ಟೈಲಿಶ್ ಆಗಿ ಕಾಣಿಸಬೇಕೆ? ಹಾಗಾದರೆ ಚಿಂತೆ ಏಕೆ? ಟಾಪ್ 10 ಸೂಪರ್ ಸ್ಟೈಲಿಶ್ ಎಲೆಕ್ಟ್ರಿಕ್ ಬೈಕ್ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಇವುಗಳಲ್ಲಿ ನಿಮ್ಮಿಷ್ಟದ ಯಾವುದಾದರೂ ಬೈಕ್ ಖರೀದಿಸಬಹುದು. ನೋಡಲು ಅಷ್ಟೇ ಅಲ್ಲ, ಕೈಗೆಟುಕುವ ದರದಲ್ಲಿಯೂ ಲಭ್ಯ! ಮತ್ತೇಕೆ ತಡ? ಈ ಪಟ್ಟಿಯಲ್ಲಿ ನಿಮ್ಮಷ್ಟಿದ ಸೂಪರ್ ಸ್ಟೈಲಿಶ್ ಬೈಕ್ ಖರೀದಿಸಿ ಎಂಜಾಯ್ ಮಾಡಿ.

1/ 21
ಯುವಕರಲ್ಲಿ ದ್ವಿಚಕ್ರ ವಾಹನಗಳ ಕ್ರೇಜ್ ಹೆಚ್ಚಾಗುತ್ತಿದ್ದು, ಪ್ರತಿಯಾಗಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಕೂಡ ಅಧಿಕವಾಗುತ್ತಿದೆ. ವಿಭಿನ್ನ ಹಾಗೂ ಹತ್ತಾರು ವೈಶಿಷ್ಟ್ಯತೆಯುಳ್ಳ ವೇಗದ ಎಲೆಕ್ಟ್ರಿಕ್ ಬೈಕ್ಗಳು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಆಯ್ಕೆಗಳು ಅಂತ ಬಂದಾಗ ಪೆಟ್ರೋಲ್ ಬೈಕ್ಗಳು ಉತ್ತಮ. ವೇಗದಲ್ಲಿ ಕೂಡ ಖುಷಿ ನೀಡಬಲ್ಲವು. ಸೂಪರ್ ಮೈಲೇಜ್ ಮತ್ತು ಸೊಗಸಾದ ನೋಟವನ್ನು ಹೊಂದಿವೆ. ಆದ್ದರಿಂದಲೇ ಯುವಕರು ಎಲೆಕ್ಟ್ರಿಕ್ ಬೈಕ್ಗಳನ್ನು ತುಂಬಾ ಇಷ್ಟಪಡುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡೇ ಆಟೋಮೊಬೈಲ್ ಕಂಪನಿಗಳು ಇಂದು ಸೂಪರ್ ಸ್ಟೈಲಿಶ್ ಲುಕ್ನ ಎಲೆಕ್ಟ್ರಿಕ್ ಬೈಕ್ಗಳನ್ನು ತಯಾರಿಸುತ್ತಿವೆ. Revolt RV400, Ultraviolette F77, Oben Rorr, Torque Kratos R, Komaki Ranger, Joy E-Bike Beast, Matter Era, Odyssey Electric Evokes, Automobile Atumvader, Srivaru Motors Prana ಇತ್ಯಾದಿ ಸೂಪರ್ ಸ್ಟೈಲಿಶ್ ಬೈಕ್ಗಳು ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಇವೆಲ್ಲವೂ ಸರಿಸುಮಾರು ಒಂದೇ ಚಾರ್ಜ್ನಲ್ಲಿ 150 ಕಿಮೀ ದೂರವನ್ನು ಕ್ರಮಿಸುವ ಸಾಮರ್ಥ್ಯ ಹೊಂದಿವೆ. ಆದರೆ, ಅಲ್ಟ್ರಾವೈಲೆಟ್ ಎಫ್77 ಬೈಕ್ ಒಂದು ಬಾರಿ ಫುಲ್ ಚಾರ್ಜ್ ಮಾಡಿದರೆ 377 ಕಿ.ಮೀ ಕ್ರಮಿಸಬಹುದೆಂದು ಕಂಪನಿ ಹೇಳಿಕೊಂಡಿದೆ. ಸಾಮಾನ್ಯ ಎಲೆಕ್ಟ್ರಿಕ್ ಬೈಕ್ಗಳಿಗೆ ಹೋಲಿಸಿದರೆ ಅವುಗಳ ಬೆಲೆ ಸ್ವಲ್ಪ ಹೆಚ್ಚು. ಆದರೆ, ನೋಡಲು ಸ್ಟೈಲಿಶ್ ಆಗಿ ಕಾಣುವ ಬೈಕ್ಗಳು ಪರಿಸರ ಸ್ನೇಹಿ ಕೂಡ ಹೌದು. ಮತ್ತೇಕೆ ತಡ? ನಿಮ್ಮಿಷ್ಟದ ಬೈಕ್ ಇಂದೇ ಬುಕ್ ಮಾಡಿ.
Loading...
Loading...
Loading...