SIIMA 2023: ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭದ ಸುಮಧುರ ಕ್ಷಣಗಳು!
Updated: Sep 16, 2023, 12:18 PM |
Published: Sep 16, 2023, 10:44 AM
Published: Sep 16, 2023, 10:44 AM
Follow Us 

ದುಬೈನ ವರ್ಲ್ಡ್ ಟ್ರೇಡ್ ಸೆಂಟರ್ನಲ್ಲಿ ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದೆ. ನಿನ್ನೆ ಸಂಜೆ ಈ ಕಾರ್ಯಕ್ರಮ ನಡೆದಿದ್ದು , ಇಂದೂ ಕೂಡ ಮುಂದುವರಿಯಲಿದೆ. ಈಗಾಗಲೇ ಹಲವರು, ನಾನಾ ವಿಭಾಗಗಳಲ್ಲಿ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ (SIIMA) ಮುಡಿಗೇರಿಸಿಕೊಂಡಿದ್ದಾರೆ. ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭದ ಸುಮಧುರ ಕ್ಷಣಗಳು ಇಲ್ಲಿವೆ ನೋಡಿ.

1/ 32
SIIMA - ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ ಶುಕ್ರವಾರ ಆರಂಭಗೊಂಡಿದೆ. 11ನೇ ಆವೃತ್ತಿಯ ಅವಾರ್ಡ್ ಕಾರ್ಯಕ್ರಮವಿದು. ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡ, ತೆಲುಗು, ತಮಿಳು, ಮಲೆಯಾಳಂನ ಚಿತ್ರರಂಗದ ಸಾಧನೆಗೆ ಸಲ್ಲುವ ಪ್ರಶಸ್ತಿ ಇದು. ದುಬೈನ ವರ್ಲ್ಡ್ ಟ್ರೇಡ್ ಸೆಂಟರ್ನಲ್ಲಿ ನಿನ್ನೆ ವರ್ಣರಂಜಿತ ಕಾರ್ಯಕ್ರಮ ಆರಂಭಗೊಂಡಿದೆ. ಇಂದೂ ಕೂಡ ಕಾರ್ಯಕ್ರಮ ಮುಂದುವರೆಯಲಿದೆ. ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ದಿಗಂತ್, ಅಚ್ಯುತ್ ಕುಮಾರ್ ಸೇರಿದಂತೆ ಕನ್ನಡದ ಹಲವರು ಈಗಾಗಲೇ ಕೆಲ ವಿಭಾಗಗಳಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಉಳಿದ ಭಾಷೆಗಳಲ್ಲಿ, ಅಡಿವಿ ಶೇಷ್ - ಲೀಡಿಂಗ್ ರೋಲ್ನಲ್ಲಿ ಅತ್ಯುತ್ತಮ ನಟ (ಕ್ರಿಟಿಕ್ಸ್) ಪ್ರಶಸ್ತಿ, ಶ್ರೀಲೀಲಾ - ಲೀಡಿಂಗ್ ರೋಲ್ನಲ್ಲಿ ಅತ್ಯುತ್ತಮ ನಟಿ (ಕ್ರಿಟಿಕ್ಸ್) ಪ್ರಶಸ್ತಿ, ಮೃಣಾಲ್ ಠಾಕುರ್ ಪ್ರಮುಖಪಾತ್ರದಲ್ಲಿ ಅತ್ಯುತ್ತಮ ನಟಿ (ಕ್ರಿಟಿಕ್ಸ್) ಪ್ರಶಸ್ತಿ, ಜೂನಿಯರ್ ಎನ್ಟಿಆರ್ - ಅತ್ಯುತ್ತಮ ನಟ ಪ್ರಶಸ್ತಿ, ಎಸ್ಎಸ್ ರಾಜಮೌಳಿ - ಅತ್ಯುತ್ತಮ ನಿರ್ದೇಶಕ ಹೀಗೆ ನಾನಾ ಭಾಷೆಗಳಲ್ಲಿ ನಾನಾ ವಿಭಾಗಗಳಲ್ಲಿ ಹಲವರು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
Loading...
Loading...
Loading...