ಅಂದುಕೊಂಡಂತೆ ಗುರಿ ತಲುಪಿದ ಆಸ್ಟ್ರೇಲಿಯಾ; ಮೌನಕ್ಕೆ ಜಾರಿದ ಟೀಂ ಇಂಡಿಯಾ ಅಭಿಮಾನಿಗಳು
Updated: Nov 19, 2023, 10:37 PM |
Published: Nov 19, 2023, 10:37 PM
Published: Nov 19, 2023, 10:37 PM
Follow Us 

2013ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ನಂತರ ಭಾರತ ಯಾವುದೇ ಐಸಿಸಿ ಟ್ರೋಫಿಯನ್ನು ಗೆಲ್ಲುವಲ್ಲಿ ಯಶಸ್ವಿ ಆಗಿಲ್ಲ. ಅಲ್ಲಿಂದ ಬಹುತೇಕ 9 ಐಸಿಸಿ ಟ್ರೋಫಿಗಳನ್ನು ಭಾರತ ಕಳೆದುಕೊಂಡಿದೆ. ಈ ಬಾರಿಯ ವಿಶ್ವಕಪ್ ಭಾತರತದಲ್ಲೇ ನಡೆಯುತ್ತಿರುವುದರಿಂದ ತಂಡದ ಮೇಲೆ ಹೆಚ್ಚಿನ ವಿಶ್ವಾಸ ಇತ್ತು. ಅಲ್ಲದೇ ಭಾರತ ತಂಡ 2023ರ ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು. ಲೀಗ್ ಹಂತದಲ್ಲಿ ಸತತ 9 ಪಂದ್ಯಗಳನ್ನು ಗೆದ್ದಿದ್ದಲ್ಲದೇ, ಸೆಮೀಸ್ನಲ್ಲಿ ಕಿವೀಸ್ ವಿರುದ್ಧವೂ ಗೆದ್ದು ಫೈನಲ್ ಪ್ರವೇಶಿಸಿತ್ತು. ಭಾರತದ ಸ್ಥಿರ ಪ್ರದರ್ಶನ ಕಂಡ ಎಲ್ಲರೂ ಟ್ರೋಫಿ ಗೆಲ್ಲುವ ಫೇವ್ರೇಟ್ ತಂಡ ಟೀಮ್ ಇಂಡಿಯಾ ಎಂದೇ ಹೇಳಲಾಗುತ್ತಿತ್ತು ಆದರೆ, ಫೈನಲ್ನಲ್ಲಿ ಭಾರತ ಎಡವಿತು.

1/ 18
10ವರ್ಷಗಳಿಂದ ಪ್ರಶಸ್ತಿ ಗೆದ್ದಿಲ್ಲ ಎಂಬ ಬರ ಈ ಆವೃತ್ತಿಯ ವಿಶ್ವಕಪ್ನಲ್ಲಿ ನೀಗುತ್ತದೆ ಎಂದು ಕೊಂಡಿದ್ದ ಭಾರತದ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿದೆ. ಮೊದಲ ಇನ್ನಿಂಗ್ಸ್ನಲ್ಲಿ ಭಾರತ ಟಾಸ್ ಸೋತು ಬ್ಯಾಟಿಂಗ್ ಬಂದು ಸಾಧಾರಣ ಪ್ರದರ್ಶನ ನೀಡಿ 240 ರನ್ ಗಳಿಸಿದಾಗಲೇ ಅಭಿಮಾನಿಗಳು ದೇವರ ಮೊರೆ ಹೋಗಿದ್ದರು. 241 ರನ್ ತಂಡ ಉಳಿಸಿಕೊಳ್ಳಲು ಆಟಗಾರರ 100 ಪಟ್ಟು ಶ್ರಮದ ಜೊತೆಗೆ ಅಭಿಮಾನಿಗಳ ಪ್ರಾರ್ಥನೆಯೂ ಸೇರಿತ್ತು. ಆದರೆ ಈ ಎರಡೂ ಕೆಲಸ ಮಾಡಲಿಲ್ಲ. ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಶನಿವಾರ ಮಾಧ್ಯಮಗೋಷ್ಟಿ ಉದ್ದೇಶಿಸಿ "ಮೈದಾನದಲ್ಲಿ ಭಾರತದ ಪರ ಅಭಿಮಾನಿಗಳ ಅಲೆ ಜೋರಾಗಿಯೇ ಇರುತ್ತದೆ. ಆದರೆ ಆ ಅಲೆಯನ್ನು ಮೌನವಾಗಿಸುವುದೇ ನಮ್ಮ ಗುರಿ" ಎಂದು ಹೇಳಿದ್ದರು. ಅದರಂತೆ ಕಮಿನ್ಸ್ ಪಡೆ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ 6 ವಿಕೆಟ್ಗಳಿಂದ ಗೆಲುವು ದಾಖಲಿಸಿತು. ಹಾಗೇ ಏಕದಿನ ವಿಶ್ವಕಪ್ನಲ್ಲಿ 6ಬಾರಿ ಗೆದ್ದು ಬೀಗಿತು. 1975ರ ನಂತರ 6 ಬಾರಿ ಫೈನಲ್ಗೇರಿದ ತಂಡ ಪ್ರತಿ ಬಾರಿಯೂ ಚಾಂಪಿಯನ್ ಆಗಿ ಹೊರಹೊಮ್ಮಿದೆ. 2013ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ನಂತರ ಭಾರತ ಯಾವುದೇ ಐಸಿಸಿ ಟ್ರೋಫಿಯನ್ನು ಗೆಲ್ಲುವಲ್ಲಿ ಯಶಸ್ವಿ ಆಗಿಲ್ಲ. ಅಲ್ಲಿಂದ ಬಹುತೇಕ 9 ಐಸಿಸಿ ಟ್ರೋಫಿಗಳನ್ನು ಭಾರತ ಕಳೆದುಕೊಂಡಿದೆ. ಈ ಬಾರಿಯ ವಿಶ್ವಕಪ್ ಭಾತರತದಲ್ಲೇ ನಡೆಯುತ್ತಿರುವುದರಿಂದ ತಂಡದ ಮೇಲೆ ಹೆಚ್ಚಿನ ವಿಶ್ವಾಸ ಇತ್ತು. ಅಲ್ಲದೇ ಭಾರತ ತಂಡ 2023ರ ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು. ಲೀಗ್ ಹಂತದಲ್ಲಿ ಸತತ 9 ಪಂದ್ಯಗಳನ್ನು ಗೆದ್ದಿದ್ದಲ್ಲದೇ, ಸೆಮೀಸ್ನಲ್ಲಿ ಕಿವೀಸ್ ವಿರುದ್ಧವೂ ಗೆದ್ದು ಫೈನಲ್ ಪ್ರವೇಶಿಸಿತ್ತು. ಭಾರತದ ಸ್ಥಿರ ಪ್ರದರ್ಶನ ಕಂಡ ಎಲ್ಲರಿಗೂ ಕೂಡ ಟ್ರೋಫಿ ಗೆಲ್ಲುವ ಫೇವ್ರೇಟ್ ತಂಡ ಟೀಮ್ ಇಂಡಿಯಾ ಆಗಿತ್ತು. ಆದರೆ, ಫೈನಲ್ನಲ್ಲಿ ಭಾರತ ಎಡವಿತು.
Loading...
Loading...
Loading...