ರಣಬೀರ್ ಜೊತೆ ಶ್ರದ್ಧಾ ಲಿಪ್ ಕಿಸ್: ಹುಡುಗರ ಎದೆಬಡಿತ ಹೆಚ್ಚಿಸುವ ಹಾಟ್ ಲುಕ್ನಲ್ಲಿ ಬಿಟೌನ್ ಬೆಡಗಿ
Published on: Jan 24, 2023, 3:07 PM IST |
Updated on: Jan 24, 2023, 3:07 PM IST
Updated on: Jan 24, 2023, 3:07 PM IST

ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ನಟಿ ಶ್ರದ್ಧಾ ಕಪೂರ್ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ 'ತು ಜೂಥಿ.. ಮೈ ಮಕ್ಕರ್' ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ. ಆಕರ್ಷಕ ದೃಶ್ಯಗಳು, ನಾಯಕ ನಾಯಕಿಯರ ನಡುವಿನ ಮೋಜಿನ ಪ್ರಣಯ, ಫನ್ನಿ ಡೈಲಾಗ್ಗಳು, ಮೂರು ನಿಮಿಷಗಳ ಟ್ರೇಲರ್ ಕಣ್ಮನ ಸೆಳೆಯುವಂತಿದೆ. ನಿರ್ದೇಶಕ ಲವ್ ರಂಜನ್ ಅವರ ರೊಮ್ಯಾಂಟಿಕ್ ಕಾಮಿಡಿ ಚಿತ್ರ ಇದಾಗಿದ್ದು, ಹೋಳಿ ಹಬ್ಬದ ಪ್ರಯುಕ್ತ ಮಾರ್ಚ್ 8 ರಂದು ಬಿಡುಗಡೆಯಾಗುತ್ತಿದೆ. ಪ್ರೀತಮ್ ಎನ್ನುವವರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಪ್ರೀತಿಯ ಹೆಸರಿನಲ್ಲಿ ಯುವ ಜೋಡಿಯ ನಡುವಿನ ತೊಳಲಾಟ ಮತ್ತು ಏರಿಳಿತಗಳನ್ನು ಈ ಸಿನಿಮಾ ಮೂಲಕ ಹೇಳಲಾಗುತ್ತದೆ ಎಂದು ಚಿತ್ರತಂಡ ಈ ಮೊದಲೇ ಹೇಳಿಕೊಂಡಿದೆ. ಇನ್ನು, ಚಿತ್ರದ ಹಾಡೊಂದರಲ್ಲಿ ಶ್ರದ್ಧಾ ಕಪೂರ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ಅವರ ಹಾಟ್ ಲುಕ್ಗಳು ನೆಟ್ಟಿಗರ ಗಮನ ಸೆಳೆಯುತ್ತಿವೆ. ಟ್ರೇಲರ್ ಜೊತೆಗೆ ಅವರ ಫೋಟೋಗಳು ಸಹ ಇಂಟರ್ನೆಟ್ನಲ್ಲಿ ಟ್ರೆಂಡಿಂಗ್ ಆಗಿವೆ. ನೆಟಿಜನ್ಸ್ ತಾರೆಯ ಹಾಟ್ ಲುಕ್ಗೆ ಫಿದಾ ಆಗಿದ್ದಾರೆ. ಹಲವರು ತರಹೇವಾರಿಯಾಗಿ ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
1/ 18
Shraddha Kapoor and Ranbir Kapoor hot photos,Ranbir and Shraddha Kapoor cute picture,Shraddha Kapoor hot photos,Shraddha Kapoor Upcoming Movie,Ranbir Kapoor Upcoming Movei,ಬಾಲಿವುಡ್ ನಟ ರಣಬೀರ್ ಕಪೂರ್,ಬಾಲಿವುಡ್ ನಟಿ ಶ್ರದ್ಧಾ ಕಪೂರ್,ಶ್ರದ್ಧಾ ಕಪೂರ್ ಹಾಟ್ ಫೋಟೋ,ಶ್ರದ್ಧಾ ಕಪೂರ್ ಬೋಲ್ಡ್ ಫೋಟೋ,ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಫೋಟೋ,ರಣಬೀರ್ ಜೊತೆ ಶ್ರದ್ಧಾ ಲಿಪ್ ಕಿಸ್

Loading...