ಅದ್ಧೂರಿಯಾಗಿ ಗಣೇಶ ಹಬ್ಬ ಆಚರಿಸಿದ ಸ್ಯಾಂಡಲ್ವುಡ್ ತಾರೆಯರು; ಫೋಟೋಸ್ ನೋಡಿ
ರಾಜ್ಯಾದ್ಯಂತ ಗಣೇಶ ಚತುರ್ಥಿ ಸಂಭ್ರಮ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ಎಲ್ಲರೂ ಚೌತಿಯನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಸ್ಯಾಂಡಲ್ವುಡ್ನಲ್ಲೂ ಹಬ್ಬ ಜೋರಾಗಿದೆ. ಯಾವ್ಯಾವ ತಾರೆಯರು ಯಾವ ರೀತಿಯಾಗಿ ಗಣೇಶ ಚತುರ್ಥಿಯನ್ನು ಸೆಲೆಬ್ರೇಟ್ ಮಾಡಿದ್ದಾರೆ ಅನ್ನೋದನ್ನು ಫೋಟೋಗಳಲ್ಲಿ ನೋಡಿ..

1/ 17
ರಾಜ್ಯಾದ್ಯಂತ ಗಣೇಶ ಚತುರ್ಥಿ ಸಂಭ್ರಮ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ಎಲ್ಲರೂ ಚೌತಿಯನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಸ್ಯಾಂಡಲ್ವುಡ್ನಲ್ಲೂ ಹಬ್ಬ ಜೋರಾಗಿದೆ. ನಿರ್ದೇಶಕ ಜೋಗಿ ಪ್ರೇಮ್ ತಮ್ಮ ತೋಟದಲ್ಲಿ ಬಹಳ ಸಂಭ್ರಮದಿಂದ ಗಣೇಶನನ್ನು ಕೂರಿಸಿ ಪೂಜೆ ಮಾಡಿಸಿದ್ದಾರೆ. ಮದ್ದೂರು ಬಳಿಯಿರುವ ಬೆಸಗರಹಳ್ಳಿಯಲ್ಲಿ ಅಮ್ಮನ ನೆನಪಿನಲ್ಲಿ ಖರೀದಿಸುವ ತೋಟದಲ್ಲಿ ರಕ್ಷಿತಾ ಪ್ರೇಮ್ ಸಿನಿಮಾ ತಂಡದವರ ಜೊತೆ ಗಣೇಶ ಮೂರ್ತಿಯನ್ನು ಕೂರಿಸಿದ್ದಾರೆ. ಬಳಿಕ ಎತ್ತಿನ ಗಾಡಿಯಲ್ಲಿ ವಿನಾಯಕನನ್ನು ಕೂರಿಸಿ ತಮಟೆ ಬೀಟ್ಗೆ ಪ್ರೇಮ್ ಮಸ್ತ್ ಸ್ಟೆಪ್ ಹಾಕಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವು ಉಪೇಂದ್ರ ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ ಜೋರಾಗಿತ್ತು. ಮನೆಯಲ್ಲೇ ಗಣಪತಿಯನ್ನು ಕೂರಿಸಿ ಅದ್ಧೂರಿಯಾಗಿ ಹಬ್ಬ ಆಚರಿಸಿದ್ದಾರೆ. ನಟ ಯಶ್ ಹಾಗೂ ರಾಧಿಕಾ ಪಂಡಿತ್ ಮನೆಯಲ್ಲೂ ಗಣೇಶ ಹಬ್ಬದ ಸಡಗರ ಮನೆ ಮಾಡಿತ್ತು. ರಾಧಿಕಾ ಪಂಡಿತ್ ಇಬ್ಬರು ಮಕ್ಕಳಾದ ಐರಾ ಹಾಗೂ ಯಥರ್ವ್ ಕೈಯಲ್ಲಿ ಗಣೇಶ ಮೂರ್ತಿಯನ್ನ ಇರಿಸಿ ವಿನಾಯಕನ ಜಪ ಮಾಡಿದ್ದಾರೆ. ಇನ್ನು ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಮೊದಲ ಗೌರಿ ಗಣೇಶ ಹಬ್ಬ. ಹೀಗಾಗಿ ಬೆಂಗಳೂರಿನ ವಸಿಷ್ಠ ಸಿಂಹ ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಮುತ್ತೈದೆಯರಿಗೆ ಬಾಗಿನ ಕೊಡುವ ಮೂಲಕ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಿದ್ದರು.ಇದರ ಜೊತೆಗೆ ಮಾಸ್ಟರ್ ಪೀಸ್ ಬೆಡಗಿ ಶಾನ್ವಿ ಶ್ರೀವಾತ್ಸವ್ ಹಾಗೂ ರಾಬರ್ಟ್ ಸಿನಿಮಾದ ನಟಿ ಆಶಾ ಭಟ್ ಮನೆಯಲ್ಲಿಯೂ ಗಣೇಶ ಹಬ್ಬದ ಖುಷಿ ಮನೆ ಮಾಡಿತ್ತು. ಆಶಾ ಭಟ್ ಮನೆಮುಂದೆ ರಂಗೋಲಿ ಹಾಕಿ ಸಂಭ್ರಮಿಸಿದ್ರೆ, ಶಾನ್ವಿ ಕೈಯಲ್ಲಿ ಗಣೇಶ ಮೂರ್ತಿ ಜೊತೆಗೆ ಅವನಿಗೆ ಇಷ್ಟವಾದ ತಿನಿಸುಗಳನ್ನು ಹಿಡಿದು ಏಕದಂತನ ಪೂಜೆ ಮಾಡಿದರು. ಇನ್ನು ನಟ ಅನಿರುದ್ಧ್ ಮನೆಯಲ್ಲೂ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಹೀಗೆ ಕನ್ನಡ ಚಿತ್ರರಂಗದ ತಾರೆಯರ ಮನೆಯಲ್ಲಿ ಗಣೇಶನ ವೈಭವ ಮನೆ ಮಾಡಿತ್ತು.
Loading...
Loading...
Loading...