ಸ್ಟೈಲಿಶ್ ದಿರಿಸಿನಲ್ಲಿ ಕ್ಯಾಮರಾ ಮುಂದೆ ಮಿಂಚಿದ ರಾಶಿ ಖನ್ನಾ, ಅಲಯಾ ಎಫ್
Updated: Nov 18, 2023, 10:54 PM |
Published: Nov 18, 2023, 10:54 PM
Published: Nov 18, 2023, 10:54 PM
Follow Us 

Raashii Khanna and Alaya F Photos: ಭಾರತೀಯ ಚಿತ್ರರಂಗದ ಬ್ಯೂಟಿಫುಲ್ ನಟಿಯರಾದ ರಾಶಿ ಖನ್ನಾ ಮತ್ತು ಅಲಯಾ ಎಫ್ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಬಗೆ ಬಗೆಯ ಭಂಗಿಯಲ್ಲಿ ನಿಂತು ಅಂದ ಪ್ರದರ್ಶಿಸಿದ್ದಾರೆ. ಈ ಚೆಲುವೆಯರ ಚಿತ್ತಾರಗಳು ಅಭಿಮಾನಿಗಳ ಮೆಚ್ಚುಗೆ ಪಡೆದುಕೊಂಡಿವೆ.

1/ 11
ಭಾರತೀಯ ಚಿತ್ರರಂಗದ ಬ್ಯೂಟಿಫುಲ್ ನಟಿಯರಾದ ರಾಶಿ ಖನ್ನಾ ಮತ್ತು ಅಲಯಾ ಎಫ್ ತಮ್ಮ ಫ್ಯಾಷನ್ ಸೆನ್ಸ್ ಅನ್ನು ಫೋಟೋಶೂಟ್ ಮೂಲಕವೇ ರಿವೀಲ್ ಮಾಡುತ್ತಿರುತ್ತಾರೆ. ದೇಶ ಮಾತ್ರವಲ್ಲದೇ ವಿದೇಶದಲ್ಲೂ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಈ ನಟಿಯರು ಆಗಾಗ ಹೊಸ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇವರ ಚೆಲುವಿನ ಚಿತ್ತಾರಗಳಿಗಾಗಿ ಅಭಿಮಾನಿಗಳು ಕೂಡ ತುದಿಗಾಲಿನಲ್ಲಿ ಕಾಯುತ್ತಿರುತ್ತಾರೆ. ಮಾರ್ಡನ್, ಟ್ರೆಡಿಷನಲ್ ಯಾವುದಾದರೂ ಸರಿ, ಇವರ ಸೌಂದರ್ಯಕ್ಕೆ ಇವರೇ ಸರಿಸಾಟಿ. ಸಿನಿಮಾದ ಜೊತೆಗೆ ಫೋಟೋಶೂಟ್ನಲ್ಲೂ ಕ್ರೇಜ್ ಹೆಚ್ಚಿಸಿಕೊಂಡಿರುವ ಈ ಬ್ಯೂಟಿಸ್ ಹಂಚಿಕೊಂಡಿರುವ ಹೊಸ ಫೋಟೋಗಳು ಇಂಟರ್ನೆಟ್ನಲ್ಲಿ ಸದ್ದು ಮಾಡುತ್ತಿವೆ. ರಾಶಿ ಖನ್ನಾ ಗ್ರೀನ್ ಸ್ಟೈಲಿಶ್ ಬಾಡಿಕಾನ್ ಡ್ರೆಸ್ನಲ್ಲಿ ಮಿಂಚಿದ್ದಾರೆ. ಎಲ್ಲೆ ಲಿಸ್ಟ್ ಅವಾರ್ಡ್ಸ್ 2023 ಕಾರ್ಯಕ್ರಮಕ್ಕಾಗಿ ಈ ದಿರಿಸನ್ನು ನಟಿ ಆರಿಸಿಕೊಂಡಿದ್ದರು. ಮತ್ತೊಂದೆಡೆ, ಅಲಯಾ ಎಫ್ ಬ್ಲ್ಯಾಕ್ ಪ್ಯಾಂಟ್ಗೆ ವೈಟ್ ಸ್ಟ್ರಾಪ್ಲೆಸ್ ಟಾಪ್ ಧರಿಸಿ ಅಂದ ಪ್ರದರ್ಶಿಸಿದ್ದಾರೆ. ಬಗೆ ಬಗೆಯ ಭಂಗಿಯಲ್ಲಿ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಇವರ ಹೊಸ ಚಿತ್ತಾರಗಳನ್ನು ನೋಡಿದ ಫ್ಯಾನ್ಸ್ ಮತ್ತಷ್ಟು ಖುಷಿಯಾಗಿದ್ದಾರೆ. ನೀವು ಕೂಡ ಈ ಚೆಲುವೆಯರ ಫೋಟೋಸ್ ನೋಡಿ, ಕಣ್ತುಂಬಿಕೊಳ್ಳಿ..
Loading...
Loading...
Loading...