ಭುವನ ಸುಂದರಿ ಸ್ಪರ್ಧೆ 2023: ಭಾರತ ಪ್ರತಿನಿಧಿಸುತ್ತಿರುವ ಶ್ವೇತಾ ಶಾರ್ದಾ ಆಕರ್ಷಕ ಫೋಟೋಗಳಿಲ್ಲಿವೆ
Miss Universe 2023: 'ಭುವನ ಸುಂದರಿ ಸ್ಪರ್ಧೆ 2023' ಎಲ್ ಸಾಲ್ವಡಾರ್ನಲ್ಲಿ ನಡೆಯುತ್ತಿದೆ. ಜಾಗತಿಕ ಸೌಂದರ್ಯ ಸ್ಪರ್ಧೆಯಲ್ಲಿ 90 ರಾಷ್ಟ್ರಗಳಿಂದ ರೂಪವತಿಯರು ಭಾಗಿ ಆಗಿದ್ದಾರೆ. ಭಾರತವನ್ನು ರೂಪದರ್ಶಿ ಶ್ವೇತಾ ಶಾರ್ದಾ ಪ್ರತಿನಿಧಿಸುತ್ತಿದ್ದಾರೆ. ಚೆಲುವೆಯ ಆಕರ್ಷಕ ಫೋಟೋಗಳಿಲ್ಲಿವೆ ನೋಡಿ..

1/ 14
Miss Universe contestant Shweta Sharda: 72ನೇ ಭುವನ ಸುಂದರಿ ಹೆಸರು ಇನ್ನೇನು ಕೆಲವೇ ಗಂಟೆಗಳಲ್ಲಿ ಘೋಷಣೆ ಆಗಲಿದೆ. ಈ ಹೆಸರಿಗಾಗಿ ಇಡೀ ವಿಶ್ವವೇ ಎದುರು ನೋಡುತ್ತಿದೆ. ಬ್ಯೂಟಿ ವಿತ್ ಬ್ರೈನ್ ಯಾರೆಂಬುದನ್ನು ತಿಳಿಯಲು ಸಾಕಷ್ಟು ಮಂದಿ ಕಾತರರಾಗಿದ್ದಾರೆ. ವಿಶ್ವದ 90 ರಾಷ್ಟ್ರಗಳು ಭುವನ ಸುಂದರಿ 2023 ಸ್ಪರ್ಧೆಯಲ್ಲಿ ಭಾಗಿ ಆಗಿವೆ. ಭಾರತವನ್ನು ರೂಪದರ್ಶಿ ಶ್ವೇತಾ ಶಾರ್ದಾ ಪ್ರತಿನಿಧಿಸುತ್ತಿದ್ದಾರೆ. 23ರ ಹರೆಯದ ಶ್ವೇತಾ ರೂಪದರ್ಶಿ, ನರ್ತಕಿಯಾಗಿ ಜನಮನ್ನಣೆ ಗಳಿಸಿದ್ದಾರೆ. ಆಗಸ್ಟ್ನಲ್ಲಿ ಮುಂಬೈನಲ್ಲಿ ನಡೆದ ಮಿಸ್ ದಿವಾ ಯೂನಿವರ್ಸ್ 2023 ಸ್ಪರ್ಧೆಯಲ್ಲಿ ಗೆದ್ದಿರುವ ಶ್ವೇತಾ ಸದ್ಯ ಗ್ಲೋಬಲ್ ಬ್ಯೂಟಿ ಕಾಂಪಿಟೇಶನ್ನಲ್ಲಿ ಭಾಗಿಯಾಗಿ ಗಮನ ಸೆಳೆದಿದ್ದಾರೆ. ಮಿಸ್ ದಿವಾ ಯೂನಿವರ್ಸ್ 2023 ರಲ್ಲಿ ವಿಜೇತರಾಗುವ ಮೂಲಕ ಮಿಸ್ ಯೂನಿವರ್ಸ್ 2023 ಸ್ಪರ್ಧೆಯಲ್ಲಿ ಭಾಗಹಿಸುವ ಅವಕಾಶ ಪಡೆದಿದ್ದಾರೆ. ಮೂಲತಃ ಚಂಡೀಗಢದವರಾದ ಶ್ವೇತಾ ಶಾರ್ದಾ ತಮ್ಮ 16ನೇ ವಯಸ್ಸಿಗೆ ಮುಂಬೈಗೆ ಆಗಮಿಸಿದರು. ಇಂದಿರಾಗಾಧಿ ನ್ಯಾಷನಲ್ ಓಪನ್ ಯೂನಿವರ್ಸಿಟಿಯಲ್ಲಿ ಶಿಕ್ಷಣ ಪಡೆದಿದ್ದಾರೆ. ಮಾಡೆಲಿಂಗ್, ಡ್ಯಾನ್ಸ್ ಕ್ಷೇತ್ರದಲ್ಲಿ ಈಗಾಲೇ ಗುರುತಿಸಿಕೊಂಡಿದ್ದಾರೆ. ಪಾಪ್ಯುಲರ್ ಪ್ರೋಗ್ರಾಮ್ಗಳಾದ ಡ್ಯಾನ್ಸ್ ಪ್ಲಸ್, ಡ್ಯಾನ್ಸ್ ದೀವಾನೆ, ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ನಲ್ಲಿಯೂ ಭಾಗಿಯಾಗಿದ್ದಾರೆ. ಇದೀಗ ಭುವನ ಸುಂದರಿ 2023 ವೇದಿಕೆಯಲ್ಲಿದ್ದು, ಶ್ವೇತಾ ಶಾರ್ದಾ ಗೆಲುವಿಗೆ ಭಾರತೀಯರು ಪ್ರಾರ್ಥಿಸುತ್ತಿದ್ದಾರೆ.
Loading...
Loading...
Loading...