ಹ್ಯಾಪಿ ಬರ್ತ್ಡೇ ನಯನತಾರಾ: ಲೇಡಿ ಸೂಪರ್ ಸ್ಟಾರ್ ಸಿನಿಪಯಣಕ್ಕೆ ಅಭಿಮಾನಿಗಳ ಬಹುಪರಾಕ್
HBD Nayanthara: ದಕ್ಷಿಣ ಚಿತ್ರರಂಗದ ಬಹುಬೇಡಿಕೆ ನಟಿ ನಯನತಾರಾ ಜನ್ಮದಿನದ ಸಂಭ್ರಮದಲ್ಲಿದ್ದಾರೆ. 39ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಭಾರತೀಯ ಚಿತ್ರರಂಗದ ಸ್ಟಾರ್ ನಟಿಗೆ ಕುಟುಂಬ ಸದಸ್ಯರು, ಸ್ನೇಹಿತರು, ಚಿತ್ರರಂಗದವರೂ ಸೇರಿದಂತೆ ಅಭಿಮಾನಿಗಳು ಶುಭಾಶಯಗಳ ಮಹಾಪೂರ ಹರಿಸುತ್ತಿದ್ದಾರೆ.
1/ 27
Actress Nayanthara: ಹ್ಯಾಪಿ ಬರ್ತ್ ಡೇ ನಯನತಾರಾ. ಸೌತ್ ಸಿನಿಮಾದ ಲೇಡಿ ಸೂಪರ್ ಸ್ಟಾರ್ ಎಂದೇ ಜನಪ್ರಿಯ. 1984ರ ನವೆಂಬರ್ 18ರಂದು ಬೆಂಗಳೂರಿನಲ್ಲಿ ಜನನ. ಕರ್ನಾಟಕದಲ್ಲಿ ಹುಟ್ಟಿ ಬೆಳೆದ ನಯನತಾರಾ ಬೆಂಗಳೂರು, ದೆಹಲಿ, ಗುಜರಾತ್ನಂತಹ ವಿವಿಧ ಮಹಾ ನಗರಗಳಲ್ಲಿ ಪಯಣಿಸಿದ್ದಾರೆ. ಸದ್ಯ ಕೇರಳದ ತಿರುವಲ್ಲಾದಲ್ಲಿ ನೆಲೆಸಿದ್ದಾರೆ. ಆ್ಯಂಕರ್, ಮಾಡೆಲ್ ಆಗಿ ವೃತ್ತಿಜೀವನ ಆರಂಭಿಸಿದ ಈ ಚೆಲುವೆ ಸದ್ಯ ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟಿ. ಸಿನಿಮಾವೊಂದಕ್ಕೆ ಅತಿದೊಡ್ಡ ಸಂಭಾವನೆ ಪಡೆಯುವ ಈ ನಟಿಮಣಿ ಹಲವು ಬ್ರ್ಯಾಂಡ್ಗಳ ಪ್ರಚಾರಕಿಯೂ ಹೌದು. 39 ಆದರೂ ಯುವತಿಯರೂ ನಾಚುವಂತಹ ಅದ್ಭುತ ಸೌಂದರ್ಯ ಈ ನಟಿಮಣಿಯದ್ದು. ಬಹುಕೋಟಿ ಮೌಲ್ಯದ ಆಸ್ತಿಯ ಒಡತಿಯೂ ಹೌದು. ಎರಡು ದಶಕಗಳ ಹಿಂದೆ ಸತ್ಯನ್ ಅಂತಿಕಾಡ್ ನಿರ್ದೇಶನದ ಮನಸಿನಕ್ಕರೆ ಸಿನಿಮಾ ಮೂಲಕ ವೃತ್ತಿಜೀವನ ಆರಂಭಿಸಿದರು. ಬಳಿಕ ಗಜಿನಿ, ಚಂದ್ರಮುಖಿ, ರಪ್ಪಕಾಲ್, ನಾನುಂ ರೌಡಿಧಾನ ಆರಾಮ್ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡರು. ಈಗಾಗಲೇ ದಕ್ಷಿಣದ ಎಲ್ಲಾ ಭಾಷೆಗಳಲ್ಲಿಯೂ ಛಾಪು ಮೂಡಿಸಿರುವ ನಯನತಾರಾ ಇತ್ತೀಚೆಗಷ್ಟೇ ಬಾಲಿವುಡ್ಗೂ ಎಂಟ್ರಿ ಕೊಟ್ಟು ಸಖತ್ ಸದ್ದು ಮಾಡಿದ್ದಾರೆ. 'ಅನ್ನಪೂರಣಿ' ನಟಿಯ ಮುಂದಿನ ಸಿನಿಮಾ. ಬಹುಕಾಲದಿಂದ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಡೇಟಿಂಗ್ನಲ್ಲಿದ್ದ ನಯನತಾರಾ, 2022ರ ಜೂನ್ 9ರಂದು ದಾಂಪತ್ಯ ಜೀವನ ಆರಂಭಿಸಿದರು. ಈ ಸ್ಟಾರ್ ಜೋಡಿ ಸದ್ಯ ಉಯಿರ್ ಮತ್ತು ಉಲಗಮ್ ಎಂಬಿಬ್ಬರು ಮಕ್ಕಳ ಪೋಷಕರು. ಏಳು ವರ್ಷಗಳ ಕಾಲ ಡೇಟಿಂಗ್ ನಡೆಸಿದ್ದಾರೆಂದು ಹೇಳಲಾಗಿದೆ.
Loading...
Loading...
Loading...