ಸಲ್ಮಾನ್ ಖಾನ್ ಸೊಸೆ ಸ್ಟನ್ನಿಂಗ್ ಲುಕ್ಗೆ ಫ್ಯಾನ್ಸ್ ಫಿದಾ.. ಚೊಚ್ಚಲ ಸಿನಿಮಾ ಪ್ರಚಾರದಲ್ಲಿ ಅಲಿಜೆ ಬ್ಯುಸಿ
ಸದ್ಯದಲ್ಲೇ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಸೋದರ ಸೊಸೆ ಅಲಿಜೆ ಅಗ್ನಿಹೋತ್ರಿ ಸಿನಿಕ್ಷೇತ್ರಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಚೊಚ್ಚಲ ಸಿನಿಮಾ ಫಾರೆ ಸಿನಿಮಾ ಚೀತ್ರೀಕರಣ ಮುಗಿಸಿ, ಚಿತ್ರದ ಪ್ರಚಾರ ಕಾರ್ಯದಲ್ಲಿ ನಟಿ ಅಲಿಜೆ ಬ್ಯುಸಿಯಾಗುತ್ತಿದ್ದಾರೆ. ಸೌಮೇಂದ್ರ ಪಾಧಿ ನಿರ್ದೇಶನದ ಥ್ರಿಲ್ಲರ್ ಡ್ರಾಮಾ ಫಾರೆ ನವೆಂಬರ್ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅಲಿಜೆ ಜೊತೆಗೆ ಜೇನ್ ಶಾ, ಪ್ರಸನ್ನ ಬಿಶ್ತ್, ಸಾಹಿಲ್ ಮೆಹ್ತಾ, ರೋನಿತ್ ಬೋಸ್ ರಾಯ್ ಹಾಗೂ ಜೂಹಿ ಬಬ್ಬರ್ ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

1/ 10
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಸೋದರ ಸೊಸೆ ಅಲಿಜೆ ಅಗ್ನಿಹೋತ್ರಿ ಸಿನಿಮಾ ಜಗತ್ತಿಗೆ ಪದಾರ್ಪಣೆ ಮಾಡಲು ಸಿದ್ಧವಾಗಿದ್ದು, ಅವರ ಮುಂಬರುವ ಚಿತ್ರ ಫಾರೆ ಬಿಡುಗಡೆಗೆ ಸಿದ್ಧವಾಗಿದೆ. ಈ ಹಿಂದಿನಿಂದಲೇ ಅಲಿಜೆ ಅಗ್ನಿಹೋತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿರುವ ಉದಯೋನ್ಮುಖ ತಾರೆ. ಇದಿಗ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಅಲಿಜೆ ತಮ್ಮ ಚೊಚ್ಚಲ ಚಿತ್ರದ ಪ್ರಚಾರ ಕಾರ್ಯಕ್ಕಾಗಿ ಸಜ್ಜಾಗುತ್ತಿದ್ದಾರೆ. ಹಾಗಾಗಿ ತಮ್ಮ ಇತ್ತೀಚಿನ ಕೆಲವು ಸ್ಟನ್ನಿಂಗ್ ಫೋಟೋಗಳನ್ನು ಅಲಿಜೆ ಹಂಚಿಕೊಂಡಿದ್ದಾರೆ. ಕ್ಯಾಶುವಲ್ ಡ್ರೆಸ್ ಅಥವಾ ಸೀರೆ ಯಾವುದೇ ಆಗಿರಲಿ, ಮಾಡರ್ನ್ ಹಾಗೂ ಸಾಂಪ್ರದಾಯಿಕ ಎರಡೂ ಉಡುಗೆ ಶೈಲಿಗೆ ಹೊಂದಿಕೊಳ್ಳುವ ಅಲಿಜೆ. ಫ್ಯಾಶನ್ ಇಂಪ್ರೆಶನ್ ಆಗಿ ಅಭಿಮಾನಿಗಳ ಹೃದಯ ಗೆದ್ದಿರುವ ಚೆಲುವೆ. ಅಲಿಜೆ ಚೊಚ್ಚಲ ಸಿನಿಮಾ ಫಾರೆ ಇದೇ ನವೆಂಬರ್ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸೌಮೇಂದ್ರ ಪಾಧಿ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾಗೆ ಅಲ್ವಿರಾ ಅಗ್ನಿಹೋತ್ರಿ ಜೊತೆಗೆ ಅತುಲ್ ಅಗ್ನಿಹೋತ್ರಿ, ನಿಖಿಲ್ ನಮಿತ್, ಸುನಿಲ್ ಖೇತರ್ಪಾಲ್ ಬಂಡವಾಳ ಹೂಡಿದ್ದಾರೆ. ಆಕರ್ಷಕ ಫೋಟೋಗಳನ್ನು ಅಭಿಮಾನಿಗಳ ಜೊತೆ ಅಲಿಜೆ ಹಂಚಿಕೊಳ್ಳುತ್ತಿದ್ದು, ಇತ್ತೀಚಿನ ಫೋಟೋಗಳು ಇಲ್ಲಿವೆ.
Loading...
Loading...
Loading...