ವರುಣ್ ಧವನ್ - ನತಾಶಾ ದಲಾಲ್ 2ನೇ ವರ್ಷದ ವಿವಾಹ ವಾರ್ಷಿಕೋತ್ಸವ: ಪಾರ್ಟಿಯಲ್ಲಿ ಕಾಣಿಸಿಕೊಂಡ ತಾರಾ ಮೆರಗು
Updated: Jan 25, 2023, 12:32 PM |
Published: Jan 25, 2023, 12:32 PM
Published: Jan 25, 2023, 12:32 PM

ಬಾಲಿವುಡ್ ತಾರೆಯರಾದ ವರುಣ್ ಧವನ್ ಮತ್ತು ನತಾಶಾ ದಲಾಲ್ ಇಂದು ತಮ್ಮ ಎರಡನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. 2021ರಲ್ಲಿ ತನ್ನ ಗೆಳತಿ ನತಾಶಾ ದಲಾಲ್ ಅವರೊಂದಿಗೆ ಮದುವೆಯಾಗುವ ಮೂಲಕ ವರುಣ್ ಧವನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದಿನಗಳ ಲೆಕ್ಕಾಚಾರದಲ್ಲಿ ಈ ಜೋಡಿ ಇಂದಿಗೆ ಎರಡು ವರ್ಷಗಳನ್ನು ಖುಷಿ ಖುಷಿಯಾಗಿ ಪೂರ್ಣಗಳಿಸಿದ್ದಾರೆ. ಈ ವಿಶೇಷ ದಿನದಂದು ಅವರು ತಮ್ಮ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಲ್ಲದೇ ಕೆಲವು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ವಿವಾಹ ವಾರ್ಷಿಕೋತ್ಸವದ ನಿಮಿತ್ತ ಪಾರ್ಟಿ ಏರ್ಪಡಿಸಿದ್ದು. ಈ ಸಂಭ್ರಮಾಚರಣೆಯಲ್ಲಿ ಹಲವು ಸೆಲೆಬ್ರಿಟಿಗಳು ಹಾಜರಿದ್ದರು. ವರುಣ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕರಣ್ ಜೋಹರ್ ಮತ್ತು ಶಶಾಂಕ್ ಖೈತಾನ್ ಪಾರ್ಟಿಯಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದಾರೆ. ಅನಿಲ್ ಕಪೂರ್, ಸಾರಾ ಅಲಿ ಖಾನ್ ಮತ್ತು ನಿತೀಶ್ ತಿವಾರಿ, ಜಾನ್ವಿ ಕಪೂರ್, ಮನೀಶ್ ಮಲ್ಹೋತ್ರಾ, ಅಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಸೇರಿದಂತೆ ಪಾರ್ಟಿಯಲ್ಲಿ ಹಲವರಿದ್ದರು. ಪಾರ್ಟಿಯಲ್ಲಿ ವರುಣ್ ತನ್ನ ತಂದೆ ಡೇವಿಡ್ ಧವನ್ ಜೊತೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು.

1/ 16
ಎರಡನೇ ವರ್ಷದ ವಿವಾಹ ವಾರ್ಷಿಕೋತ್ಸವದಲ್ಲಿ ಬಾಲಿವುಡ್ ನಟ ವರುಣ್ ಧವನ್.

Loading...