ಅಬ್ಬಬ್ಬಾ..! 13 ಲಕ್ಷದ ಗೌನ್ ಧರಿಸಿ ಅಂದ ಪ್ರದರ್ಶಿಸಿದ ನಟಿ ಶನಾಯಾ ಕಪೂರ್
Published on: Jan 22, 2023, 10:52 PM IST |
Updated on: Jan 22, 2023, 10:52 PM IST
Updated on: Jan 22, 2023, 10:52 PM IST

ಬಾಲಿವುಡ್ ನಟ ಸಂಜಯ್ ಕಪೂರ್ ಹಾಗು ಡಿಸೈನರ್ ಮಹೀಪ್ ಕಪೂರ್ ದಂಪತಿ ಪುತ್ರಿ ಶನಾಯಾ ಕಪೂರ್ ಅವರು ಬಾಲಿವುಡ್ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಾಣದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬೇಧಡಕ್ ಶೀರ್ಷಿಕೆಯ ಚಿತ್ರದ ಮೂಲಕ ಸಿನಿಮಾ ಲೋಕದಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಲಿದ್ದಾರೆ ಶನಾಯಾ ಕಪೂರ್. ತಮ್ಮ ಸಿನಿಮಾ ಘೋಷಣೆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಫೋಟೋ ಸೇರಿದಂತೆ ಅವರ ಪ್ರತೀ ವಿಷಯವೂ ಕೂಡ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಡುವ ಮನ್ನ 80 ಲಕ್ಷ ರೂಪಾಯಿ ಮೌಲ್ಯದ ಆಡಿ ಕ್ಯೂ7 ಅನ್ನು ಶನಾಯಾ ಕಪೂರ್ ಖರೀದಿಸಿದ್ದು ಮಾತ್ರ ದೊಡ್ಡ ಸುದ್ದಿ ಮಾಡಿತ್ತು. ಇನ್ನೂ ಶನಾಯಾ ಕಪೂರ್ ಬೇಧಡಕ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಶಾಂಕ್ ಖೈತಾನ್ ನಿರ್ದೇಶನದ ಈ ಸಿನಿಮಾದಲ್ಲಿ ಶನಾಯಾ ಜೊತೆಗೆ ಲಕ್ಷ್ಯ ಮತ್ತು ಗುರ್ಫತೆ ಪಿರ್ಜಾದಾ ಎಂಬ ಇನ್ನಿಬ್ಬರು ನಟರು ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ತ್ರಿಕೋನ ಪ್ರೇಮಕಥೆ ಹೊಂದಿದೆ ಎಂದು ಹೇಳಲಾಗುತ್ತಿದೆ. ಬಾಲಿವುಡ್ ಫ್ಯಾಷನಿಸ್ಟ್ ಎಂದು ಖ್ಯಾತರಾಗಿರುವ ಸೋನಂ ಕಪೂರ್ ಅವರ ಸೋದರಸಂಬಂಧಿಯಾಗಿರುವ ಶನಾಯಾ ಯಾವ ನಟಿಯರಿಗಿಂತಲೂ ಕಮ್ಮಿ ಇಲ್ಲ. ಅವರು ಈಗಾಗಲೇ ಶೇರ್ ಮಾಡಿರುವ ಫೋಟೋಗಳು ನೆಟಿಜೆನ್ಸ್ ಮನ ಗಿದ್ದಿದೆ. ಫಿಲ್ಮಿ ಪಾರ್ಟಿಗಳಿಗೆ ಹಾಜರಾಗುವುದಿರಲಿ ಅಥವಾ ಸ್ನೇಹಿತರೊಂದಿಗೆ ಸುತ್ತಾಡುವುದಾಗಲಿ ಶನಾಯಾ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಾರೆ. ಇದೀಗ 13 ಲಕ್ಷ ಮೌಲ್ಯದ ಗೌನ್ ಧರಿಸಿ ಸೋಶಿಯಲ್ ಮೀಡಿಯಾದ ಬಿಸಿ ಏರಿಸಿದ್ದಾರೆ. ಇವರ ಹೊಸ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.
1/ 12
ನಟಿ ಶನಾಯಾ ಕಪೂರ್

Loading...