ಸುಂದರ ಸೋಜಿಗ ಸಪ್ತಮಿ; ಮನಸೆಳೆದ 'ಲೀಲಾ'ಳ ಅಮೋಘ ಸೌಂದರ್ಯ
Sapthami Gowda photos: 'ಕಾಂತಾರ' ಖ್ಯಾತಿಯ ನಟಿ ಸಪ್ತಮಿ ಗೌಡ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸೀರೆಯುಟ್ಟು ಸಾಂಪ್ರದಾಯಿಕ ಲುಕ್ನಲ್ಲಿ ಮಿಂಚಿದ್ದಾರೆ. 'ಲೀಲಾ'ಳ ಅಮೋಘ ಸೌಂದರ್ಯಕ್ಕೆ ಅಭಿಮಾನಿಗಳು ಲೈಕ್ಸ್ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. (ಫೋಟೋ ಕೃಪೆ: ನಟಿ ಸಪ್ತಮಿ ಗೌಡ ಅಧಿಕೃತ ಇನ್ಸ್ಟಾಗ್ರಾಮ್ ಖಾತೆ)

1/ 17
'ಸಪ್ತಮಿ ಗೌಡ..' ಈ ಚೆಲುವೆಯ ಬಗ್ಗೆ ಹೆಚ್ಚಿನ ಪರಿಚಯದ ಅಗತ್ಯವಿಲ್ಲ. 'ಕಾಂತಾರ' ಹೆಸರೊಂದೇ ಸಾಕು. ಲೀಲಾ ಪಾತ್ರಧಾರಿಯಾಗಿ ಮಿಂಚಿ, ಕನ್ನಡಿಗರ ಮನೆ ಮಗಳಾಗಿ ಸ್ಥಾನ ಪಡೆದುಕೊಂಡಿದ್ದಾರೆ. ಈ ಸಿನಿಮಾದ ನಂತರ ಕೈ ತುಂಬಾ ಆಫರ್ ಗಿಟ್ಟಿಸಿಕೊಂಡಿರುವ ಬೆಡಗಿಗೆ ಫೋಟೋಶೂಟ್ನಲ್ಲೂ ಸಖತ್ ಕ್ರೇಜ್ ಇದೆ. ಸ್ಟೈಲಿಶ್ ಲುಕ್ನಲ್ಲಿ ಕ್ಯಾಮರಾ ಮುಂದೆ ನಿಂತು ಮೈ ಬಳುಕಿಸೋದು ಅಂದ್ರೆ ಎಲ್ಲಿಲ್ಲದ ಖುಷಿ. ಇವರ ಇನ್ಸ್ಟಾ ಓಪನ್ ಮಾಡಿದರೆ ಸಾಕು, ಬಗೆ ಬಗೆಯ ಫೋಟೋಗಳನ್ನು ಕಾಣಬಹುದು. ತಮ್ಮ ಅಮೋಘ ಫ್ಯಾಷನ್ ಸೆನ್ಸ್ ಅನ್ನು ಫೋಟೋಶೂಟ್ ಮೂಲಕವೇ ರಿವೀಲ್ ಮಾಡುತ್ತಾರೆ. ಇತ್ತೀಚೆಗೆ ನೇರಳೆ ಬಣ್ಣದ ಸೀರೆಯುಟ್ಟು ಅಂದ ಪ್ರದರ್ಶಿಸಿದ್ದಾರೆ. ಅದಕ್ಕೆ ತಕ್ಕಂತೆ ಆಭರಣ ಧರಿಸಿ, ಕೂದಲನ್ನು ಹಾರಲು ಬಿಟ್ಟು, ಲೈಟ್ ಮೇಕಪ್ ಜೊತೆಗೆ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಬಗೆ ಬಗೆಯ ಭಂಗಿಯಲ್ಲಿ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಸಪ್ತಮಿ ಮುದ್ದಾದ ಸೌಂದರ್ಯ ನೋಡುಗರನ್ನು ಆಕರ್ಷಿಸಿದೆ. ಅಭಿಮಾನಿಗಳು ನಟಿಯ ಅಂದವನ್ನು ಕಮೆಂಟ್ ಮೂಲಕ ಹಾಡಿ ಹೊಗಳುತ್ತಿದ್ದಾರೆ. ಈ ಫೋಟೋಗಳು 40 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. (ಫೋಟೋ ಕೃಪೆ: ನಟಿ ಸಪ್ತಮಿ ಗೌಡ ಅಧಿಕೃತ ಇನ್ಸ್ಟಾಗ್ರಾಮ್ ಖಾತೆ)
Loading...
Loading...
Loading...