'ಸಪ್ತಮಿ' ಕೆನ್ನೆಯ ಮೇಲೆ ಬಂದು ನಾಟಿದೆ ನಾಚಿಕೆ ಮುಳ್ಳು.. ಲೀಲಾಳ ಹೊಸ ಫೋಟೋಗೆ ಫ್ಯಾನ್ಸ್ ಹೀಗಂದ್ರು
Sapthami Gowda photos: 'ಕಾಂತಾರ' ಖ್ಯಾತಿಯ ಸಪ್ತಮಿ ಗೌಡ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಶ್ವೇತ ವರ್ಣದ ಸ್ಟೈಲಿಶ್ ದಿರಿಸಿನಲ್ಲಿ ನೋಡುಗರನ್ನು ಆಕರ್ಷಿಸಿದ್ದಾರೆ. ಈ ಫೋಟೋಗಳು 50 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. (ಫೋಟೋ ಕೃಪೆ: ಸಪ್ತಮಿ ಗೌಡ ಅಧಿಕೃತ ಇನ್ಸ್ಟಾಗ್ರಾಮ್ ಖಾತೆ)

1/ 18
'ಕಾಂತಾರ'.. ಸ್ಯಾಂಡಲ್ವುಡ್ನ ಅತ್ಯದ್ಭುತ ಸಿನಿಮಾ. ಇಲ್ಲಿ ಬರುವ ಪಾತ್ರಗಳು ಹಾಗೂ ಅದಕ್ಕೆ ಬಣ್ಣ ಹಚ್ಚಿದ ಕಲಾವಿದರ ಬಗ್ಗೆ ಹೆಚ್ಚಿನ ಪರಿಚಯದ ಅಗತ್ಯವಿಲ್ಲ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಈ ಸಿನಿಮಾದಿಂದ ಸ್ಯಾಂಡಲ್ವುಡ್ಗೆ ಪರಿಚಯವಾದ ಚೆಲುವೆ ಸಪ್ತಮಿ ಗೌಡ. ಲೀಲಾ ಪಾತ್ರಧಾರಿಯಾಗಿ ಮಿಂಚಿ, ಕನ್ನಡಿಗರ ಮನೆ ಮಗಳಾಗಿ ಸ್ಥಾನ ಪಡೆದುಕೊಂಡಿದ್ದಾರೆ. 'ಕಾಂತಾರ'ದ ನಂತರ ಕೈ ತುಂಬಾ ಆಫರ್ ಗಿಟ್ಟಿಸಿಕೊಂಡಿರುವ ಬೆಡಗಿಗೆ ಫೋಟೋಶೂಟ್ನಲ್ಲೂ ಸಖತ್ ಕ್ರೇಜ್ ಇದೆ. ಸ್ಟೈಲಿಶ್ ಲುಕ್ನಲ್ಲಿ ಕ್ಯಾಮರಾ ಮುಂದೆ ನಿಂತು ಮೈ ಬಳುಕಿಸೋದು ಅಂದ್ರೆ ಎಲ್ಲಿಲ್ಲದ ಖುಷಿ. ಇವರ ಇನ್ಸ್ಟಾ ಓಪನ್ ಮಾಡಿದರೆ ಸಾಕು, ಬಗೆ ಬಗೆಯ ಫೋಟೋಗಳನ್ನು ಕಾಣಬಹುದು. ಇತ್ತೀಚೆಗೆ ಇವರು ಹಂಚಿಕೊಂಡಿರುವ ಹೊಸ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿವೆ. ಶ್ವೇತ ವರ್ಣದ ಸ್ಟೈಲಿಶ್ ದಿರಿಸಿನಲ್ಲಿ ನೋಡುಗರನ್ನು ಆಕರ್ಷಿಸಿದ್ದಾರೆ. ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ. ಅಭಿಮಾನಿಗಳು ನಟಿಯ ಅಂದವನ್ನು ಕಮೆಂಟ್ ಮೂಲಕ ಹಾಡಿ ಹೊಗಳುತ್ತಿದ್ದಾರೆ. ಈ ಫೋಟೋಗಳು 50 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. ನೀವೂ ಕೂಡ ಸಪ್ತಮಿಯ ಚೆಲುವನ್ನು ನೋಡಿ, ಕಣ್ತುಂಬಿಕೊಳ್ಳಿ.. (ಫೋಟೋ ಕೃಪೆ: ಸಪ್ತಮಿ ಗೌಡ ಅಧಿಕೃತ ಇನ್ಸ್ಟಾಗ್ರಾಮ್ ಖಾತೆ)
Loading...
Loading...
Loading...