ಕಟೌಟ್ ಡ್ರೆಸ್ನಲ್ಲಿ ದಿಶಾ ಪಟಾನಿ: ಹೊಸ ಫೋಟೋ ಕಂಡು ಹುಬ್ಬೇರಿಸಿದ ನೆಟ್ಟಿಗರು
Disha Patani Latest Pictures: ಪಡ್ಡೆ ಹುಡುಗರೆದೆಗೆ ಬಿಂಕಿ ಇಡುವಂತಹ ಫೋಟೋಗಳನ್ನು ಹಂಚಿಕೊಳ್ಳುವವರ ಪೈಕಿ ಬಹುಭಾಷಾ ನಟಿ ದಿಶಾ ಪಟಾನಿ ಪ್ರಮುಖರು. ಸದಾ ಬೋಲ್ಡ್ ಫೋಟೋಶೂಟ್ ಮೂಲಕವೇ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುವ ಈ ಬಾಲಿವುಡ್ ನಟಿಮಣಿ ಇಂದು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. (ಫೋಟೋ ಕೃಪೆ: ದಿಶಾ ಪಟಾನಿ ಅಧಿಕೃತ ಇನ್ಸ್ಟಾಗ್ರಾಮ್ ಖಾತೆ).

1/ 16
Actress Disha Patani: ಬಹುಭಾಷಾ ಸಿನಿಮಾಗಳಲ್ಲಿ ನಟಿಸಿ ಅತಿ ಹೆಚ್ಚು ಜನರನ್ನು ತಲುಪಿರುವ ನಟಿ ದಿಶಾ ಪಟಾನಿ. ಫಿಟ್ನೆಸ್ ಐಕಾನ್ ಎಂದೇ ಹೆಸರುವಾಸಿ. ತಮ್ಮ ಅಭಿಮಾನಿಗಳಿಗೆ ಆರೋಗ್ಯಕರ, ಫಿಟ್, ಸುಂದರ ದೇಹ ಹೊಂದಲು ಪ್ರೇರೇಪಿಸುತ್ತಾರೆ. ಸಿನಿಮಾ ಮಾತ್ರವಲ್ಲದೇ ಸೋಷಿಯಲ್ ಮೀಡಿಯಾ ಮೂಲಕವೂ ಸಖತ್ ಸದ್ದು ಮಾಡುತ್ತಾರೆ. ಪಾಪ್ಯುಲರ್ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಇನ್ಸ್ಟಾಗ್ರಾಮ್ ಖಾತೆ ಒಂದರಲ್ಲೇ 60.1 ಮಿಲಿಯನ್ ಫಾಲೋವರ್ಸ್ ಸಂಪಾದಿಸಿದ್ದಾರೆ. ಅಲ್ಲಿಗೆ ಊಹಿಸಿ ಇವರ ಅಭಿಮಾನಿಗಳ ಕ್ರೇಜ್ ಹೇಗಿರಬಹುದು ಎಂದು. ಪೋಸ್ಟ್ಗಳ ಸಂಖ್ಯೆ ಕೂಡ ಕಡಿಮೆ ಏಲ್ಲ. ಈವರೆಗೆ ಶೇರ್ ಮಾಡಿರುವ ಪೋಸ್ಟ್ಗಳ ಸಂಖ್ಯೆ 2,116. ಹಂಚಿಕೊಂಡ ಪ್ರತೀ ಪೋಸ್ಟ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತೆ. ಅದೆಷ್ಟೋ ಅಭಿಮಾನಿಗಳ ನಿದ್ದೆಗೆಡುತ್ತೆ. ಇದೀಗ ಕಟೌಟ್ ಡ್ರೆಸ್ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಬಿಳಿ ಕಟೌಟ್ ಡ್ರೆಸ್ಗೆ ಹೊಳೆಯುವ ನೆಕ್ಲೇಸ್, ಕಿವಿಯೋಲೆ, ಉಂಗುರ ಧರಿಸಿ ಬನ್ ಹೇರ್ ಸ್ಟೈಲ್ನೊಂದಿಗೆ ತಮ್ಮ ನೋಟ ಪೂರ್ಣಗೊಳಿಸಿದ್ದಾರೆ. ಎಂದಿನಂತೆ ಬೋಲ್ಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ಹೊಸ ಫೋಟೋಗಳನ್ನು ನೋಡಿದ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಚೆಲುವೆಯ ಚೆಲುವಿನ ಚಿತ್ತಾರಗಳು ಆನ್ನಲೈನ್ನಲ್ಲಿ ವೈರಲ್ ಆಗುತ್ತಿವೆ. ಅಭಿಮಾನಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
Loading...
Loading...
Loading...