ಕನ್ನಡ ಬಿಗ್ ಬಾಸ್ ಓಟಿಟಿ ಮನೆಗೆ ಎಂಟ್ರಿ ಕೊಟ್ಟ ಮೊದಲ ಹಾಗು ಎರಡನೇ ಸ್ಪರ್ಧಿ ಇವ್ರೇ!

author img

By

Published : Aug 6, 2022, 7:11 PM IST

kannada

ಬಿಗ್​ ಬಾಸ್​ ಮನೆಗೆ ಎಂಟ್ರಿ ಕೊಡುವ ಮೊದಲ ಮೂರು ಅಭ್ಯರ್ಥಿ ಪರಿಚಯ ತೆರೆಗೆ ಬಂದಿದ್ದು ಸಂಭಾವ್ಯರ ಪಟ್ಟಿಯ ಆರ್ಯವರ್ಧನ್ ಗುರೂಜಿ, ಸೋನು ಶ್ರೀನಿವಾಸ ಗೌಡ ಮತ್ತು ರೂಪೇಶ್​ ಶೆಟ್ಟಿ ಎಂಟ್ರಿ ಪಡೆದುಕೊಂಡಿದ್ದಾರೆ.

ಕನ್ನಡ ಓಟಿಟಿ ಬಿಗ್ ಬಾಸ್ ಸೀಸನ್ 1 ರಿಯಾಲಿಟಿ ಶೋ ಸ್ಟಾರ್ಟ್ ಆಗಿದೆ. ಈಗಾಗಲೇ ಕಿಚ್ಚ ಸುದೀಪ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ಈ ದೊಡ್ಮನೆಯಲ್ಲಿ ಇರೋದಿಕ್ಕೆ ಯಾರೆಲ್ಲ ಕಂಟೆಸ್ಟೆಂಟ್​ಗಳು ಬರ್ತಾ ಇದ್ದಾರೆ ಅನ್ನೋದು ಸಹಜವಾಗಿ ಕ್ಯೂರಿ್ಯಾಸಿಟಿ ಹುಟ್ಟಿಸಿದೆ.

ಸದ್ಯ ಜಿಂಗಲಕಾ ಲಕಾ ಲಕಾ ಅಂತಾ ವಾಹಿನಿ ಹಾಗು ಸೋಷಿಯಲ್ ಮೀಡಿಯಾದಲ್ಲಿ, ಖ್ಯಾತಿ ಹೊಂದಿರುವ ಆರ್ಯವರ್ಧನ್ ಗುರೂಜಿ, ಬಿಗ್ ಬಾಸ್ ಮೊದಲ ಸ್ಪರ್ಧಿಯಾಗಿ ದೊಡ್ಮನೆ ಸೇರಿದ್ದಾರೆ. ಆರ್ಯವರ್ಧನ್ ಅವರು ಸದಾ ಟ್ರೋಲ್ ಆಗುವ ಮೂಲಕವೇ ಹೆಚ್ಚು ಸುದ್ದಿ ಆಗಿದ್ದಾರೆ. ಅವರು ಜ್ಯೋತಿಷ್ಯ ಶಾಸ್ತ್ರವನ್ನೂ ಹೇಳುತ್ತಾರೆ. ಐಪಿಎಲ್ ಸಂದರ್ಭದಲ್ಲಿ ಅವರು ನೀಡುತ್ತಿದ್ದ ಪ್ರಿಡಿಕ್ಷನ್ ಸಾಕಷ್ಟು ಸುದ್ದಿ ಆಗುತ್ತಿತ್ತು. ಈ ವಿಚಾರದಲ್ಲಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಆಗಿದ್ದರು.

ಮೊದಲ ಸ್ಪರ್ಧಿಯಾಗಿ ಪ್ರಖ್ಯಾತಿ ಹೊಂದಿರುವ ಆರ್ಯವರ್ಧನ್ ಗುರೂಜಿ ಎಂಟ್ರಿ

ಎರಡನೇ ಸ್ಪರ್ಧಿ‌ ಟಿಕ್ ಟಾಕ್ ಹಾಗು ಸೋಷಿಯಲ್ ಮೀಡಿಯಾದಲ್ಲಿ ತಮ್ಮ‌ ವೈಯಕ್ತಿಕ ವಿಡಿಯೋದಿಂದ ಹೆಚ್ಚು ಸುದ್ದಿಯಲ್ಲಿದ್ದ ಸೋನು ಶ್ರೀನಿವಾಸ ಗೌಡ ಬಿಗ್ ಬಾಸ್ ಒಟಿಟಿಗೆ ಎಂಟ್ರಿ ನೀಡಿದ್ದಾರೆ. ಈಗ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡುವ ಮೂಲಕ ಸಾಕಷ್ಟು ಚರ್ಚೆ ಹುಟ್ಟು ಹಾಕಿದ್ದಾರೆ.

ಎರಡನೇ ಸ್ವರ್ಧಿಯಾಗಿ ಆಗಮಿಸಿದ ಸೋನು ಶ್ರೀನಿವಾಸ ಗೌಡ

ಹೀಗೆ ಬೇರೆ ಬೇರೆ ಕ್ಷೇತ್ರದ ಸಾಕಷ್ಟು ಸ್ಪರ್ಧಿಗಳು ಬಿಗ್ ಬಾಸ್ ಮನೆ ಸೇರಲಿದ್ದಾರೆ. ಆದರೆ ಈ ಬಾರಿ ಬಿಗ್ ಬಾಸ್​ನ್ನು ಒಟಿಟಿಯಲ್ಲಿ ಮಾತ್ರ ನೋಡಬಹುದು. ವೂಟ್ ಆ್ಯಪ್​​ನ ಚಂದಾದಾರರಾದರೆ ಮಾತ್ರ ಬಿಗ್ ಬಾಸ್ ಒಟಿಟಿ ವೀಕ್ಷಣೆ ಸಾಧ್ಯ. ಇಲ್ಲವಾದರೆ, ನೀವು ಬಿಗ್ ಬಾಸ್ ನೋಡಲು ಆಗುವುದಿಲ್ಲ. ದಿನದ 24 ಗಂಟೆ ವೂಟ್ ಆ್ಯಪ್​ನಲ್ಲಿ ಲೈವ್ ನೋಡಬಹುದಾಗಿದೆ.

ಇದನ್ನೂ ಓದಿ : ಬಿಗ್ ಬಾಸ್​​​ ಒಟಿಟಿ ಮೊದಲ ಸೀಸನ್ ಆರಂಭ; ದೊಡ್ಮನೆ ಪ್ರವೇಶ ಮಾಡಲಿರುವ ಸ್ಪರ್ಧಿಗಳು?!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.