ಟಾಲಿವುಡ್ ಯುವ ನಾಯಕ ಸುಧೀರ್ ವರ್ಮಾ ಆತ್ಮಹತ್ಯೆ!: ಚಿತ್ರರಂಗದ ಗಣ್ಯರಿಂದ ಸಂತಾಪ

ಟಾಲಿವುಡ್ ಯುವ ನಾಯಕ ಸುಧೀರ್ ವರ್ಮಾ ಆತ್ಮಹತ್ಯೆ!: ಚಿತ್ರರಂಗದ ಗಣ್ಯರಿಂದ ಸಂತಾಪ
ಟಾಲಿವುಡ್ ಚಿತ್ರರಂಗದ ಉದಯೋನ್ಮುಖ ನಟ ಸುಧೀರ್ ವರ್ಮಾ ಎನ್ನುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೆಕೆಂಡ್ ಹ್ಯಾಂಡ್', 'ಕುಂದನಪು ಬೊಮ್ಮ' ಸಿನಿಮಾ ಸೇರಿದಂತೆ ಅವರು ವೆಬ್ ಸಿರೀಸ್ನಲ್ಲಿಯೂ ನಟಿಸಿದ್ದರು. ಸುಧೀರ್ ಅವರ ನಟನೆ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಹೈದರಾಬಾದ್: ಟಾಲಿವುಡ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಯುವ ನಟರೊಬ್ಬರು ದುರಂತ ಅಂತ್ಯ ಕಂಡಿದ್ದಾರೆ. ಸುಧೀರ್ ವರ್ಮಾ ನಿಧನರಾದ ಯುವ ನಟ. ಅವರ ನಿಧನಕ್ಕೆ ಟಾಲಿವುಡ್ ಚಿತ್ರರಂಗ ಗಣ್ಯರು ಕಂಬನಿ ಮಿಡಿದಿದ್ದಾರೆ. ವೈಯಕ್ತಿಕ ಕಾರಣಗಳಿಂದ ಸುಧೀರ್ ವರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ: ತಮ್ಮ ಕಾರಿನ ಮೇಲೆ ಕಲ್ಲು ತೂರಾಟ ನಡೆದಿಲ್ಲ: ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ ಗಾಯಕಿ ಮಂಗ್ಲಿ
ಇದೇ ತಿಂಗಳ 18 ರಂದು ಸುಧೀರ್ ಅವರು ಕೆಲವು ವೈಯಕ್ತಿಕ ಕಾರಣಗಳಿಂದ ಹೈದರಾಬಾದ್ನಲ್ಲಿ ವಿಷ ಸೇವಿಸಿದ್ದರು. ಕೂಡಲೇ ಅವರನ್ನು ಕೊಂಡಾಪುರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ತಿಂಗಳ 19ರವರೆಗೂ ಅಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು. ಆದರೆ, ಹೆಚ್ಚಿನ ಚಿಕಿತ್ಸೆಗಾಗಿ ಕಳೆದ ಶುಕ್ರವಾರ ಅವರನ್ನು ವಿಶಾಖ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದಿನಿಂದ ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಅವರು ಸೋಮವಾರ ಬೆಳಗ್ಗೆ ಮೃತಪಟ್ಟರುವುದಾಗಿ ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: 'ಹೇ ವತನ್ ಮೇರಾ ವತನ್' ಚಿತ್ರದ ಟೀಸರ್ ಬಿಡುಗಡೆ: ಸ್ವಾತಂತ್ರ್ಯ ಹೋರಾಟಗಾರ್ತಿ ಪಾತ್ರದಲ್ಲಿ ನಟಿ ಸಾರಾ ಅಲಿ ಖಾನ್
-
Sudheer! @sudheervarmak Such a lovely and warm guy’ It was great knowing you and working with you brother! Can’t digest the fact that you are no more! Om Shanti!🙏🙏🙏 @iChandiniC @vara_mullapudi @anil_anilbhanu pic.twitter.com/Sw7KdTRkpG
— Sudhakar Komakula (@UrsSudhakarK) January 23, 2023
2016ರಲ್ಲಿ ತೆರೆ ಕಂಡಿದ್ದ ರಾಘವೇಂದ್ರ ರಾವ್ ಪ್ರಸ್ತುತ ಪಡಿಸಿದ 'ಕುಂದನಪು ಬೊಮ್ಮ' ಚಿತ್ರದಲ್ಲಿ ಸುಧೀರ್ ಕಾಣಿಸಿಕೊಂಡಿದ್ದರು. ಅದಕ್ಕೂ ಮುನ್ನ ತೆರೆಕಂಡ 'ಸೆಕೆಂಡ್ ಹ್ಯಾಂಡ್' ಚಿತ್ರ ಸೇರಿದಂತೆ ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಸುಷ್ಮಿತಾ ನಿರ್ಮಾಣದ 'ಶೂಟೌಟ್' ಎಂಬ ವೆಬ್ ಸಿರೀಸ್ನಲ್ಲಿಯೂ ಸುಧೀರ್ ಅವರು ನಟಿಸಿದ್ದರು. ‘ಕುಂದನಪು ಬೊಮ್ಮ’ ಸಿನಿಮಾದಲ್ಲಿ ಅವರೊಂದಿಗೆ ನಟಿಸಿದ್ದ ಸುಧಾಕರ್ ಕೋಮಕುಲ ಅವರು ಸುಧೀರ್ ನಿಧನದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಸುಧೀರ್ ಸಾವು ಆಘಾತ ತಂದಿದೆ. ಈ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ: ಮುಂಬರುವ ಚುನಾವಣೆಗೆ ತಾರಾ ಮೆರುಗು ನೀಡಲು ಕಾಂಗ್ರೆಸ್ ಯತ್ನ.. ಸಿಗಲಿದೆಯಾ ಯಶಸ್ಸು?
ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಹೊತ್ತುಕೊಂಡಿದ್ದ ಸುಧೀರ್ ಅವರು 2010ರಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟರು. ಬಳಿಕ ಸಿನಿಮಾದಲ್ಲಿ ಅವಕಾಶ ಪಡೆದುಕೊಳ್ಳಲು ತುಂಬಾ ಕಷ್ಟಪಟ್ಟಿದ್ದರು. ಅಂದುಕೊಂಡಂತೆ ಕೆಲವು ಸಿನಿಮಾದಲ್ಲಿಯೂ ನಟಿಸಿದ್ದರು. ಆದರೆ, ಈ ಚಿಕ್ಕ ವಯಸ್ಸಿನಲ್ಲಿ ದುರಂತ ಅಂತ್ಯ ಕಂಡಿದ್ದಾರೆ. ಇಂದು ಸಂಜೆ ಅಥವಾ ನಾಳೆ ಸುಧೀರ್ ಅವರ ಅಂತ್ಯಕ್ರಿಯೆ ನಡೆಯಲಿದೆ. ಅವರ ಅಗಲಿಕೆಗೆ ಅನೇಕ ಟಾಲಿವುಟ್ ಸೆಲೆಬ್ರಿಟಿಗಳು, ತಂತ್ರಜ್ಞರು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ: ಕೆಎಲ್ ರಾಹುಲ್ ಅಷ್ಟೇ ಅಲ್ಲ, ಬಾಲಿವುಡ್ ನಟಿಯರನ್ನು ತಮ್ಮ ಬಾಳ ಸಂಗಾತಿಯನ್ನಾಗಿ ಮಾಡಿಕೊಂಡ ಭಾರತೀಯ ಕ್ರಿಕೆಟಿಗರು ಇವರು!
ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಕೈಕಾಲ ಸತ್ಯನಾರಾಯಣ, ಸೂಪರ್ಸ್ಟಾರ್ ಘಟ್ಟಮನೇನಿ ಕೃಷ್ಣ, ರೆಬೆಲ್ ಸ್ಟಾರ್ ಕೃಷ್ಣಂ ರಾಜು, ಚಲಪತಿ ರಾವ್, ರಮೇಶ್ ಬಾಬು, ಎಂ ಬಾಲಯ್ಯ, ನಿರ್ದೇಶಕ ಶರತ್, ರಾಮರಾವ್ ತಾತಿನೇನಿ ಅವರು 2022ರಲ್ಲಿ ನಿಧರಾಗುರುವ ಮೂಲಕ ಟಾಲಿವುಡ್ ಚಿತ್ರರಂಗಕ್ಕೆ ನೋವು ತರಿಸಿದ್ದರು. ಇದೀಗ ಉದಯೋನ್ಮುಖ ನಟ ಸುಧೀರ್ ವರ್ಮಾ ಸಾವಿನ ಸುದ್ದಿಯಿಂದ ಶೋಕಸಾಗರಲ್ಲಿ ಮುಳುಗಿದೆ.
