'ಪಠಾಣ್' ಸಿನಿಮಾ ಬಿಡುಗಡೆ ದಿನವೇ ಸಲ್ಮಾನ್ ಅಭಿನಯದ 'ಕಿಸಿ ಕಾ ಬಾಯ್ ಕಿಸಿ ಕಿ ಜಾನ್' ಚಿತ್ರದ ಟೀಸರ್ ಬಿಡುಗಡೆ

'ಪಠಾಣ್' ಸಿನಿಮಾ ಬಿಡುಗಡೆ ದಿನವೇ ಸಲ್ಮಾನ್ ಅಭಿನಯದ 'ಕಿಸಿ ಕಾ ಬಾಯ್ ಕಿಸಿ ಕಿ ಜಾನ್' ಚಿತ್ರದ ಟೀಸರ್ ಬಿಡುಗಡೆ
ಶಾರುಖ್ ಖಾನ್ ಸಿನಿಮಾ ಪಠಾಣ್, ಸಲ್ಮಾನ್ ಸಿನಿಮಾದ ಟೀಸರ್ ಒಂದೇ ದಿನ ಬಿಡುಗಡೆ - ಖಾನ್ ಅಭಿಮಾನಿಗಳಿಂದ ಮೆಚ್ಚುಗೆ - ಪವರ್ ಪ್ಯಾಕ್ನಲ್ಲಿ ಬ್ಯಾಡ್ ಬಾಯ್ ಸಲ್ಮಾನ್
ಹೈದರಾಬಾದ್: ಬಾಲಿವುಡ್ ಖಾನ್ಗಳಾದ ಸಲ್ಮಾನ್ ಮತ್ತು ಶಾರುಖ್ ಖಾನ್ಗೆ ಇಂದು ಅಂದರೆ, ಜನವರಿ 25 ಬಲು ವಿಶೇಷವಾಗಿದೆ. ಕಾರಣ ನಾಲ್ಕು ವರ್ಷಗಳ ಸುದೀರ್ಘ ಅಂತರದ ಬಳಿಕ ಕಿಂಗ್ ಖಾನ್ ಅಭಿನಯದ 'ಪಠಾಣ್' ಸಿನಿಮಾ ಬಿಡುಗಡೆಯಾಗಿದೆ. ಇತ್ತ ನಟ ಸಲ್ಮಾನ್ ಖಾನ್ ಅಭಿನಯದ 'ಕಿಸಿ ಕಾ ಬಾಯ್ ಕಿಸಿ ಕಿ ಜಾನ್' ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿದೆ. ಮತ್ತೊಂದು ವಿಶೇಷ ಎಂದರೆ, ಈ ಚಿತ್ರದ ಟೀಸರ್ ಅನ್ನು ಪಠಾಣ್ ಸಿನಿಮಾದ ವೇಳೆ ಥಿಯೇಟರ್ನಲ್ಲಿ ಕಂಡು ಬಂದಿದೆ. ರೋಮ್ಯಾಂಟಿಕ್ ಆಕ್ಷನ್ ಚಿತ್ರದಲ್ಲಿ ನಟ ಸಲ್ಮಾನ್ ಖಾನ್ಗೆ ನಟಿ ಪೂಜಾ ಹೆಗ್ಡೆ ಜೊತೆಯಾಗಿದ್ದಾರೆ. 40 ಸೆಕೆಂಡ್ನ ಈ ಟೀಸರ್ನಲ್ಲಿ ನಟ ಸಲ್ಮಾನ್ ಫೈಟಿಂಗ್ ಸೀನ್ಗಳು ಇದ್ದು, ಕಟ್ಟದಿಂದ ಕಟ್ಟಡಕ್ಕೆ ಹಾರುತ್ತ, ಎದುರಾಳಿಗಳನ್ನು ಹೊಡೆಯುವ ದೃಶ್ಯ ಕಂಡು ಬಂದಿದೆ.
-
After watching #KisiKaBhaiKisiKiJaanTeaser I'm now even more sure that its going to be a huge Blockbuster!! #SalmanKhan will destroy the Boxoffice🔥🔥 Bawaal 💥pic.twitter.com/hJk3Mzj1R2
— Nᴀᴠ Kᴀɴᴅᴏʟᴀ (@SalmaniacNav) January 25, 2023
ಇನ್ನು ಈ ಟೀಸರ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಲ್ಮಾನ್ ಖಾನ್ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಮಳೆ ಸುರಿದಿದೆ. ಈ ಚಿತ್ರದಲ್ಲಿ ನಟ ಸಲ್ಮಾನ್ ಹೊಸ ಅವತಾರದಲ್ಲಿ ಕಂಡು ಬರುತ್ತಿದ್ದಾರೆ ಎಂದು ಅಭಿಮಾನಿಯೊಬ್ಬರು ತಿಳಿಸಿದ್ದಾರೆ. ಮತ್ತೊಬ್ಬ ಅಭಿಮಾನಿ, ಇದನ್ನು ನಾನು ನಿರೀಕ್ಷಿಸಿರಲಿಲ್ಲ. ಆದರೆ, ಇದು ಮಾಸ್ ಟೀಸರ್. ಚಿತ್ರ ಎಲ್ಲೆಡೆ ಬ್ಲಾಕ್ ಬಸ್ಟರ್ ಆಗಲಿದೆ ಎಂದಿದ್ದಾರೆ. ಇನ್ನು ಚಿತ್ರದಲ್ಲಿ ನಟಿ ಶೆಹನಾಜ್ ಗಿಲ್ ಕೂಡ ನಟಿಸಿದ್ದು, ದಕ್ಷಿಣ ಭಾರತದ ಲುಕ್ನಲ್ಲಿ ಮಿಂಚಿದ್ದಾರೆ.
-
Here's the official #SalmanKhan 's #KisiKaBhaiKisiKiJaanTeaser 🔥🔥#KisiKaBhaiKisiKiJaan pic.twitter.com/GBWGFT8w73
— Devil V!SHAL (@VishalRC007) January 25, 2023
ಮತ್ತೊಬ್ಬ ಅಭಿಮಾನಿ ಟೈಗರ್ ಮತ್ತು ಪಠಾಣ್ ಕಡೆಗೂ ಒಟ್ಟಿಗೆ ಎಂದು ಇಬ್ಬರ ನಟರ ಬಗ್ಗೆ ಮೆಚ್ಚುಗೆ ತಿಳಿಸಿದ್ದಾರೆ. ಈ ಚಿತ್ರ ಸಲ್ಮಾನ್ ಖಾನ್ ಅವರ ಮತ್ತೊಂದು ಬ್ಲಾಕ್ ಬಸ್ಟರ್ ಚಿತ್ರವಾಗಲಿದೆ. ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲಿದೆ ಎಂದು ಮತ್ತೊಮ್ಮ ಅಭಿಮಾನಿ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.
ಇನ್ನು ಈ ಚಿತ್ರದಲ್ಲಿ ತೆಲುಗು ನಟರ ದಂಡು ಕೂಡ ಕಾಣಬಹುದಾಗಿದೆ. ವೆಂಕಟೇಶ್ ದಗ್ಗುಬಾಟಿ, ಪೂಜಾ ಹೆಗ್ಡೆ, ಜಗಪತಿ ಬಾಬು, ಭೂಮಿಕಾ ಚಾವ್ಲಾ, ವಿರೇಂದ್ರ ಸಿಂಗ್, ಅಭಿಮಾನ್ಯು ಸಿಂಗ್, ರಾಘವ್ ಜುಯಲ್ ಪ್ರಮುಖ ಪಾತ್ರದಲ್ಲಿದ್ದಾರೆ. ಜೊತೆಗೆ ಹಿಂದಿ ಕಿರುತೆರೆಯ ಪ್ರಖ್ಯಾತ ನಟಿಯಾಗಿ ಗುರುತಿಸಿಕೊಂಡಿರುವ ಶ್ವೇತಾ ತಿವಾರಿ ಮಗಳು ಪಾಲಕ್ ತಿವಾರಿ ಮತ್ತು ಶೇಹನಾಜ್ ಗಿಲ್ ಇದೇ ಮೊದಲ ಬಾರಿಗೆ ಬೆಳ್ಳಿ ಪರದೆ ಮೇಲೆ ಮಿಂಚಲಿದ್ದಾರೆ.
-
Honest Confession : I didn't expected.. but it is mass teaser 🙌🔥🔥 . Blockbuster written every where. The BG sound.. Goosebumps.
— Mukul Hinoniya ✨ (@iMukulhinoniya) January 25, 2023
And our #ShehnaazGill with #SalmanKhan on Big screen. that too in South Indian look 😭😭😭#KisiKaBhaiKisiKiJaanTeaser #KisiKaBhaiKisiKiJaan pic.twitter.com/xanVeCDjQh
ಈ ಚಿತ್ರದ ಟೈಟಲ್ ಅನ್ನು ಈ ಮೊದಲು ಹಲವು ಬಾರಿ ಬದಲಾಯಿಸಾಗಿದೆ. ಈ ಕುರಿತು ಮಾತನಾಡಿರುವ ಸಲ್ಮಾನ್, ಸೋದರ ಮಾವ ಅಯುಷ್ ಶರ್ಮಾ, ಕಿಯಾತ್ಮಕ ಭಿನ್ನತೆ ಇರಬೇಕು ಎಂಬ ಕಾರಣಕ್ಕೆ ಶಿರ್ಷಿಕೆ ಬದಲಾಯಿಸಲಾಗಿದೆ. ಇನ್ನು ಈ ಚಿತ್ರ ಇದೇ ವರ್ಷ ಈದ್ಗೆ ಬಿಡುಗಡೆಯಾಗಲಿದೆ.
-
Eid is coming so is Salman 🥵🔥🔥🔥#KisiKaBhaiKisiKiJaanTeaser pic.twitter.com/CUGgEC2UFC
— THE SALMAN KHAN’s S E N A (@ThatSalmansSena) January 25, 2023
'ಕಿಸಿ ಕಾ ಬಾಯ್ ಕಿಸಿ ಕಿ ಜಾನ್' ಚಿತ್ರವನ್ನು ಫರ್ಹದ್ ಸಮ್ಜಿ ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ ಸಲ್ಮಾನ್ ಖಾನ್ ಫಿಲ್ಮ್ ಹಣ ಹೂಡಿದೆ. ಈ ಚಿತ್ರ ಸಾಹಸ, ಕಾಮಿಡಿ, ಡ್ರಾಮಾ, ರೋಮ್ಯಾನ್ಸ್ ಮತ್ತು ಎಮೋಷನಲ್ಗಳ ಸಂಗಮವಾಗಿದೆ ಎಂದು ಚಿತ್ರತಂಡ ತಿಳಿಸಿದೆ.
ಇದನ್ನೂ ಓದಿ: ಆ್ಯಕ್ಷನ್ ಅವತಾರದಲ್ಲಿ ಕಿಂಗ್ ಖಾನ್.. ಅಭಿಮಾನಿಗಳು ಏನಂದ್ರು ಗೊತ್ತಾ?
