'ಮಾನ್ಸುನ್ ರಾಗ'ದಲ್ಲಿ ಒಂದಾದ ಡಿಂಪಲ್ ಕ್ವೀನ್-ಡಾಲಿ ಧನಂಜಯ್: ಟ್ರೈಲರ್ ನೋಡಿದ್ರಾ?

author img

By

Published : Aug 5, 2022, 8:16 PM IST

ಡಿಂಪಲ್ ಕ್ವೀನ್ ಪರಿಶುದ್ಧ ಪ್ರೀತಿಗೆ 'ಮಾನ್ಸೂನ್' ಸೋತ ಡಾಲಿ ಧನಂಜಯ್!

ಡಾಲಿ ಧನಂಜಯ್ ಹಾಗು ರಚಿತಾ ರಾಮ್ ಒಟ್ಟಿಗೆ ಮೊದಲ ಬಾರಿಗೆ ತೆರೆ ಹಂಚಿಕೊಂಡಿರುವ ಚಿತ್ರ ಮಾನ್ಸೂನ್​ ರಾಗದ ಟ್ರೈಲರ್​ ಇಂದು ಬಿಡುಗಡೆಯಾಗಿದೆ.

'ಮಾನ್ಸೂನ್​​ ರಾಗ' ಚಂದನವನದಲ್ಲಿ ಹಾಡುಗಳಿಂದಲೇ ಕ್ರೇಜ್ ಹುಟ್ಟಿಸಿರೋ ಸಿನಿಮಾ. ಡಾಲಿ ಧನಂಜಯ್ ಹಾಗು ರಚಿತಾ ರಾಮ್ ಮೊದಲ ಬಾರಿಗೆ ತೆರೆ ಹಂಚಿಕೊಂಡಿರುವ ಚಿತ್ರವಿದು. ಈಗಾಗಲೇ ಹಾಡುಗಳಿಂದ ಸಿನಿಮಾಪ್ರಿಯರನ್ನು ಸೆಳೆಯುತ್ತಿರುವ ಸಿನಿಮಾ ಆಗಸ್ಟ್ 19ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಟ್ರೈಲರ್​ ವರಮಹಾಲಕ್ಷ್ಮೀ ಹಬ್ಬದ ಈ ದಿನ ಅನಾವರಣಗೊಂಡಿದೆ.

  • " class="align-text-top noRightClick twitterSection" data="">

ರಚಿತಾ ರಾಮ್, "ನಿನಗೆ ಒಳ್ಳೆ ಹುಡುಗೀರು ತುಂಬಾ ಜನ ಸಿಗ್ತಿದ್ರು. ನಾನು ಈ ರೀತಿ ಅಂತಾ ಗೊತ್ತಿದ್ರೂ ಯಾಕೆ ನನ್ನನ್ನೇ ಇಷ್ಟ ಪಟ್ಟೆ" ಎಂದು ಧನಂಜಯ್​​ಗೆ ಕೇಳುವ ಮಾತಿನಿಂದ ಚಿತ್ರದ ಟ್ರೈಲರ್‌ ಶುರುವಾಗುತ್ತದೆ. ರಚಿತಾ ರಾಮ್ ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಆಕೆಯನ್ನು ಪ್ರೀತಿಸುವ ಪ್ರೇಮಿಯಾಗಿ ಧನಂಜಯ್ ಅಭಿನಯಿಸಿದ್ದಾರೆ. ಅಚ್ಯುತ್ ಕುಮಾರ್, ಸುಹಾಸಿನಿ ಮತ್ತು ಯಶಾ ಶಿವಕುಮಾರ್ ಪಾತ್ರಗಳು ಒಂದೊಂದು ಕಥೆ ಹೇಳಲಿವೆ.

70-80ರ ದಶಕದಲ್ಲಿ ನಡೆಯುವ ಕಥೆ ಹೊಂದಿದ್ದು, ವೀರೆಂದ್ರನಾಥ್ ನಿರ್ದೇಶಿಸಿದ್ದಾರೆ. ಗುರುಕಶ್ಯಪ್ ಸಂಭಾಷಣೆ ಬರೆದಿದ್ದಾರೆ. ಪುಷ್ಪಕ ವಿಮಾನ ಸಿನಿಮಾ ಬಳಿಕ ಎ.ಆರ್.ವಿಖ್ಯಾತ್ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ: ಹಾಲಿವುಡ್​ ಮೂವಿ 'ಜೋಕರ್' ಸಿಕ್ವೆಲ್​ನಲ್ಲಿ ಲೇಡಿ ಗಾಗಾ.. 2024ರಲ್ಲಿ ತೆರೆಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.