'ಗೇಮ್ ಚೇಂಜರ್' ಸಿನಿಮಾದ ಹೊಸ ಹಾಡು ಲೀಕ್..; ಕೋಪಗೊಂಡ ರಾಮ್ಚರಣ್ ಫ್ಯಾನ್ಸ್

'ಗೇಮ್ ಚೇಂಜರ್' ಸಿನಿಮಾದ ಹೊಸ ಹಾಡು ಲೀಕ್..; ಕೋಪಗೊಂಡ ರಾಮ್ಚರಣ್ ಫ್ಯಾನ್ಸ್
Game Changer movie song leaked: ರಾಮ್ಚರಣ್ ನಟನೆಯ 'ಗೇಮ್ ಚೇಂಜರ್' ಚಿತ್ರದ ಹೊಸ ಹಾಡು ಲೀಕ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
'ಆರ್ಆರ್ಆರ್' ಖ್ಯಾತಿಯ ರಾಮ್ಚರಣ್ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಗೇಮ್ ಚೇಂಜರ್'. ನಿರ್ದೇಶಕ ಶಂಕರ್ ಅವರು ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಪ್ಯಾನ್ ಇಂಡಿಯಾ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿದೆ. ಈ ಸಿನಿಮಾದಿಂದ ಇಲ್ಲಿಯವರೆಗೆ ಯಾವುದೇ ಅಪ್ಡೇಟ್ ಬಂದಿಲ್ಲ. ಆದರೆ ಈ ಚಿತ್ರ ಸೆಟ್ಟೇರಿದ ದಿನದಿಂದಲೂ ಕೆಲವು ವಿಚಾರಗಳು ಸೋರಿಕೆಯಾಗುತ್ತಿವೆ. ಇದೀಗ 'ಗೇಮ್ ಚೇಂಜರ್'ನ ಹೊಸ ಹಾಡು ಲೀಕ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.
ಆದರೆ ಲೀಕ್ ಆದ ಹಾಡು ಅಂತಿಮವಲ್ಲ ಎಂಬುದು ಸ್ಪಷ್ಟವಾಗಿದೆ. ಇದು ಜಸ್ಟ್ ಟೆಸ್ಟಿಂಗ್ ಹಾಡಾಗಿತ್ತು. ಅಲ್ಲದೇ ಸ್ಟಾರ್ ಗಾಯಕರು ಈ ಹಾಡಿಗೆ ಧ್ವನಿಯಾಗಲಿದ್ದಾರೆ. ಫೈನಲ್ ಮಿಕ್ಸ್ನಲ್ಲಿ ಇನ್ನೂ ಸಾಕಷ್ಟು ಕೆಲಸಗಳಿವೆಯಂತೆ. ಸೌಂಡ್ ಮಿಕ್ಸಿಂಗ್ ನಂತರ ಈ ಹಾಡು ಮತ್ತಷ್ಟು ಚೆನ್ನಾಗಿ ಮೂಡಿಬರಲಿದೆ ಎನ್ನಲಾಗಿದೆ. ಇಲ್ಲದಿದ್ದರೆ, ಇಷ್ಟೊತ್ತಿಗಾಗಲೇ ಸಿನಿಮಾ ತಯಾರಕರು ಹಾಡು ಲೀಕ್ ಆದ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿದ್ದರು. ಏನೇ ಆಗಲಿ, ಇದು ಒರಿಜಿನಲ್ ಹಾಡು ಅಲ್ಲ ಎಂಬುದು ಸ್ಪಷ್ಟವಾಗಿದೆ.
-
The leaked song is a very basic composing version of it. Please refain from spreading it and forming opinions based on it. The singers are also basic track singers and not final. A very inferior copy of the final copy.
— .... (@ynakg2) September 15, 2023
ಕೋಪಗೊಂಡ ರಾಮ್ಚರಣ್ ಅಭಿಮಾನಿಗಳು: ಮತ್ತೊಂದೆಡೆ, 'ಗೇಮ್ ಚೇಂಜರ್' ಹಾಡು ಲೀಕ್ ಆದ ಹಿನ್ನೆಲೆ ರಾಮ್ಚರಣ್ ಅಭಿಮಾನಿಗಳು ಕೋಪಗೊಂಡಿದ್ದಾರೆ. ಕೋಟಿಗಟ್ಟಲೆ ಖರ್ಚು ಮಾಡಿ ಸಿನಿಮಾ ಮಾಡುತ್ತಿರುವಾಗ ಈ ರೀತಿ ಮಾಡುವುದು ನಿಜಕ್ಕೂ ಸರಿಯಲ್ಲ ಎನ್ನುತ್ತಿದ್ದಾರೆ. ದಯವಿಟ್ಟು ಈ ಹಾಡನ್ನು ಶೇರ್ ಮಾಡುವುದನ್ನು ನಿಲ್ಲಿಸಿ ಎಂದು ಜನರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ. ಆದರೆ ಈಗಾಗಲೇ ಈ ಹಾಡು ಸಾಕಷ್ಟು ವೈರಲ್ ಆಗುತ್ತಿದೆ.
ಲೀಕ್ ಆದ ಹಾಡಿಗೆ ನೆಗೆಟಿವ್ ಕಮೆಂಟ್ಗಳು ಬರುತ್ತಿವೆ. ಇಲ್ಲವಾದರೆ, ಶಂಕರ್ ಅವರ ಸಿನಿಮಾಗಳಲ್ಲಿ ಹಾಡುಗಳ ರೇಂಜ್ ಎಷ್ಟಿದೆ ಎಂಬುದು ನಮಗೆ ಈಗಾಗಲೇ ಗೊತ್ತಿದೆ. ಅವರು ತಮ್ಮ ಚಿತ್ರದ ಹಾಡುಗಳಿಗೆ ವಿಶೇಷ ಗಮನ ನೀಡುತ್ತಾರೆ. ಅದ್ಭುತವಾದ ಸಾಹಿತ್ಯವು ಕಣ್ಣಿಗೆ ಕಟ್ಟುವಂತೆ ಇರುತ್ತದೆ. ಆದರೆ ಸದ್ಯ ಲೀಕ್ ಆದ 'ಗೇಮ್ ಚೇಂಜರ್'ನ ಸಾಹಿತ್ಯ ಚೆನ್ನಾಗಿಲ್ಲ ಎಂಬ ಕಮೆಂಟ್ಗಳು ಬರುತ್ತಿವೆ. ತಮನ್ ಬೀಟ್ ಕೂಡ ಚೆನ್ನಾಗಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಹಾಡಿನಲ್ಲಿ ಚಿತ್ರತಂಡ ಏನಾದರೂ ಬದಲಾವಣೆ ಮಾಡುತ್ತಾರೆಯೇ? ಎಂದು ಕಾದು ನೋಡಬೇಕಿದೆ.
ಚಿತ್ರತಂಡ ಹೀಗಿದೆ.. 'ಗೇಮ್ ಚೇಂಜರ್' ಸಿನಿಮಾವನ್ನು ಖ್ಯಾತ ನಿರ್ಮಾಪಕ ದಿಲ್ ರಾಜು ಅದ್ಧೂರಿ ಬಜೆಟ್ನಲ್ಲಿ ನಿರ್ಮಿಸುತ್ತಿದ್ದಾರೆ. ಆಕ್ಷನ್ ಎಂಟರ್ಟೈನ್ಮೆಂಟ್ ಚಿತ್ರವಾಗಿ ಇದು ತಯಾರಾಗುತ್ತಿದೆ. ಸಿನಿಮಾದಲ್ಲಿ ರಾಮ್ಚರಣ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಮ್ಚರಣ್ಗೆ ನಾಯಕಿಯಾಗಿ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ತಮನ್ ಸಂಗೀತಾ ಸಂಯೋಜನೆ ಇರಲಿದೆ. ಹಿರಿಯ ನಟ ಎಸ್.ಜೆ ಸೂರ್ಯ, ಅಂಜಲಿ, ಶ್ರೀಕಾಂತ್, ಸುನೀಲ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮುಂದಿನ ವರ್ಷ ಆಗಸ್ಟ್ ನಂತರ ಈ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ.
