ನಾನು ಓಡಿಹೋಗಿ ಮದುವೆಯಾಗಲ್ಲ: ನಟಿ ಪ್ರೇಮಾ ಗರಂ
Updated on: Jan 24, 2023, 3:37 PM IST

ನಾನು ಓಡಿಹೋಗಿ ಮದುವೆಯಾಗಲ್ಲ: ನಟಿ ಪ್ರೇಮಾ ಗರಂ
Updated on: Jan 24, 2023, 3:37 PM IST
ಪ್ರೇಮಾ ಎರಡನೇ ಮದುವೆ ಆಗಲಿದ್ದಾರೆ ಎಂಬ ವದಂತಿ ಬಗ್ಗೆ ಸ್ವತಃ ನಟಿ ಮೌನ ಮುರಿದಿದ್ದಾರೆ.
90ರ ದಶಕದಲ್ಲಿ ಕನ್ನಡ ಸಿನಿಮಾ ರಂಗದಲ್ಲಿ ಮಿಂಚಿದ ನಟಿಯರ ಸಾಲಿನಲ್ಲಿ ನಟಿ ಪ್ರೇಮಾ ಕೂಡ ಒಬ್ಬರು. ಆ ಕಾಲದಲ್ಲಿ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡುವ ಮೂಲಕ ಪ್ರೇಮಾ ಅವರು ಬಹು ಬೇಡಿಕೆ ನಟಿಯಾಗಿ ಬೆಳ್ಳಿ ತೆರೆಯಲ್ಲಿ ಹೆಸರು ಮಾಡಿದ್ದರು. ಆದರೆ ಬಹು ಬೇಡಿಕೆ ಇದ್ದ ಸಮಯದಲ್ಲೇ ಪ್ರೇಮಾ ಅವರು ಮದುವೆ ಆಗಿ ಚಿತ್ರರಂಗದಿಂದ ದೂರು ಸರಿದರು. ಆದರೆ ಅವರ ವೈವಾಹಿಕ ಜೀವನದಲ್ಲಿ ಅಸಮಧಾನ ಉಂಟಾಗಿ 2016ರಲ್ಲಿ ತಮ್ಮ 10 ವರ್ಷಗಳ ದಾಂಪತ್ಯಕ್ಕೆ ವಿದಾಯ ಹೇಳಿದ್ದರು. ಇದಾದ ಬಳಿಕ ಪ್ರೇಮಾ ಅವರು ಎರಡನೇ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಆಗಾಗ ಕೇಳಿ ಬರುತ್ತಲೇ ಇದೆ.
ಪ್ರೇಮಾ 2ನೇ ಮದುವೆ ವದಂತಿ: ಕೆಲ ದಿನಗಳ ಹಿಂದೆ ನಟಿ ಪ್ರೇಮಾ 2ನೇ ಮದುವೆಗೆ ರೆಡಿಯಾಗಿದ್ದಾರೆ ಅನ್ನೋ ಸುದ್ದಿ ಜೋರಾಗಿ ಕೇಳಿ ಬಂದಿತ್ತು. ಅಷ್ಟೇ ಅಲ್ಲ, ಮದುವೆಗೆ ಅಪ್ಪಣೆ ಕೋರಿ ನಟಿ ಪ್ರೇಮಾ ಕೊರಗಜ್ಜನ ಮೊರೆ ಹೋಗಿದ್ದಾರೆ ಎಂಬ ಸುದ್ದಿ ಆಗಿತ್ತು. ಉಡುಪಿ ಜಿಲ್ಲೆಯ ಕಾಪು ಕೊರಗಜ್ಜ ಸನ್ನಿಧಿ ಇದಾಗಿದ್ದು, ನಟಿ ಪ್ರೇಮಾ ಅವರ ಜೊತೆ ತಮ್ಮ ಅಯ್ಯಪ್ಪ ಪತ್ನಿ ನಟಿ ಅನು ಅಯ್ಯಪ್ಪ ಕೂಡ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ಎರಡನೇ ಮದುವೆ ಬಗೆಗಿನ ವದಂತಿ ಬಗ್ಗೆ ನಟಿ ಪ್ರೇಮಾ ಮೌನ ಮುರಿದಿದ್ದಾರೆ.
ಕೆಲ ಮಾಧ್ಯಮದವರ ಬಗ್ಗೆ ಅಸಮಾಧಾನ: ಬೆಂಗಳೂರಿನಲ್ಲಿ ಮಾತನಾಡಿರೋ ನಟಿ ಪ್ರೇಮಾ, ನಾನು ಸದ್ಯಕ್ಕೆ ಎರಡನೇ ಮದುವೆ ಆಗುವ ಬಗ್ಗೆ ಯೋಚನೆ ಮಾಡಿಲ್ಲ. ದೇವಸ್ಥಾನಕ್ಕೂ ಹೋಗೋದು ತಪ್ಪು ಎಂದರೆ ಏನು ಮಾಡೋದು. ಬಹಳ ದಿನ ಆಗಿತ್ತು ಅಂತ ಕೊರಗಜ್ಜನ ದೇವಾಲಯಕ್ಕೆ ಹೋಗಿದ್ದೆ. ಅಲ್ಲಿ ನಾನು ನನ್ನ ಮದುವೆ ಬಗ್ಗೆ ಪ್ರಸ್ತಾಪವನ್ನು ಮಾಡಿಲ್ಲ. ನಾನು ಚಿತ್ರರಂಗದಲ್ಲಿ ಸಾಧಿಸಬೇಕಾದದ್ದು ಸಾಕಷ್ಟು ಇದೆ.
ನಾನು ಮದುವೆ ಆದರೆ ನನ್ನ ಕುಟುಂಬ, ಅಭಿಮಾನಿಗಳ ಗಮನಕ್ಕೆ ತರುತ್ತೇನೆ. ನಾನು ಓಡಿಹೋಗಿ ಮದುವೆ ಆಗಲ್ಲ ಎಂದು ಕೆಲ ಮಾಧ್ಯಮದವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮಾಧ್ಯಮಗಳು ಸಮಾಜಕ್ಕೆ ಒಳ್ಳೆಯ ಸಂದೇಶ ಕೋಡಬೇಕು. ನಾನು ಕೊರಗಜ್ಜ ದೇವಸ್ಥಾನದಲ್ಲಿ ಮದುವೆ ಬಗ್ಗೆ ಮಾತನಾಡಿಲ್ಲ. ಏಕೆ ಹೀಗೆ ಸುಳ್ಳು ಸುದ್ದಿಗಳನ್ನು ಹಾಕುತ್ತೀರಾ ಎಂದು ಪ್ರೇಮಾ ಅವರು ಗಾಸಿಪ್ ಹಬ್ಬಿಸಿದವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: "ನನ್ನ ಉಸಿರಾಟದಲ್ಲೂ ತಪ್ಪು ಕಂಡು ಹಿಡಿಯುವ ಜನರು..": ಟ್ರೋಲಿಗರ ವಿರುದ್ಧ ರಶ್ಮಿಕಾ ಬೇಸರ
ನಟಿ ಪ್ರೇಮಾ ದಾಂಪತ್ಯದಲ್ಲಿ ಬಿರುಕು: 2016ರಲ್ಲಿ ಪ್ರೇಮಾ ತಮ್ಮ 10 ವರ್ಷದ ದಾಂಪತ್ಯಕ್ಕೆ ವಿದಾಯ ಹೇಳಿದ್ರು. ಪರಸ್ಪರ ಒಪ್ಪಿಗೆ ಮೇರೆಗೆ ಪ್ರೇಮಾ ದಂಪತಿ ಬೆಂಗಳೂರಿನ ಕೌಟಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಪಡೆದರು.
ನಟಿ ಪ್ರೇಮಾ ವೃತ್ತಿಜೀವನ: ಇನ್ನೂ ವೃತ್ತಿಜೀವನ ನೋಡೋದಾದ್ರೆ, 1995ರಲ್ಲಿ ನಟ ಶಿವ ರಾಜ್ಕುಮಾರ್ ಅವರ ಸವ್ಯಸಾಚಿ ಮತ್ತು ರಾಘವೇಂದ್ರ ರಾಜ್ಕುಮಾರ್ ಅವರ ಆಟ ಹುಡುಗಾಟ ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಚಂದ್ರಮುಖಿ ಪ್ರಾಣಸಖಿ, ಚಂದ್ರೋದಯ, ಕನಸುಗಾರ, ನಾನು ನನ್ನ ಹೆಂಡ್ತೀರು, ಯಜಮಾನ, ಆಪ್ತಮಿತ್ರ ಸೇರಿದಂತೆ ಮುಂತಾದ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಪ್ರೇಮಾ ನಟಿಸಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಇದನ್ನೂ ಓದಿ: ಮತ್ತೆ ಖಾಕಿ ತೊಟ್ಟ ಆ್ಯಕ್ಷನ್ ಕ್ವೀನ್ ಮಾಲಾಶ್ರೀ.. ಕೆಂಡದ ಸೆರಗು ಟೀಸರ್ ಬಿಡುಗಡೆ
