ಇಂದು ರಾಷ್ಟ್ರೀಯ ಸಿನಿಮಾ ದಿನ: ಮಲ್ಟಿಪ್ಲೆಕ್ಸ್​ಗಳಲ್ಲಿ ಕೇವಲ ₹75ಕ್ಕೆ ನಿಮ್ಮಿಷ್ಟದ ಸಿನಿಮಾ ನೋಡಿ!​

author img

By

Published : Sep 23, 2022, 8:23 AM IST

national cinema day  multiplex association of India  multiplex ticket rate down  75 rupees ticket in multiplex  ರಾಷ್ಟ್ರೀಯ ಸಿನಿಮಾ ದಿನ  ಪ್ರೇಕ್ಷಕರಿಗೆ ಬಂಪರ್​ ಆಫರ್  ತಿ ಟಿಕೆಟ್​ಗೆ ದುಬಾರಿ ಬೆಲೆ  ಮಲ್ಟಿಪ್ಲೆಕ್ಸ್​ ಅಸೋಸಿಯೇಷನ್​ ಆಫ್​ ಇಂಡಿಯಾ  ಸಿನಿಮಾ ನೋಡುವ ಟ್ರೆಂಡ್​ ಕಮ್ಮಿ  ಮಲ್ಟಿಪ್ಲೆಕ್ಸ್​ಗಳಲ್ಲಿ ಬಂಪರ್​ ಆಫರ್​

ಸೆಪ್ಟೆಂಬರ್ 16 ರಂದು ಆಚರಿಸಲು ಆಯೋಜಿಸಲಾಗಿದ್ದ ರಾಷ್ಟ್ರೀಯ ಸಿನಿಮಾ ದಿನವನ್ನು ಸೆಪ್ಟೆಂಬರ್ 23ರಂದು ನಡೆಸಲಾಗುವುದು ಎಂದು ಎಂಎಐ ತಿಳಿಸಿತ್ತು. ಅದರಂತೆ ಇಂದು ರಾಷ್ಟ್ರೀಯ ಸಿನಿಮಾ ದಿನ ಆಚರಿಸಲಾಗುತ್ತಿದ್ದು, ಪ್ರೇಕ್ಷಕರಿಗೆ ಮಲ್ಟಿಪ್ಲೆಕ್ಸ್​​ ಅಸೋಶಿಯೇಷನ್​ ಆಫ್ ಇಂಡಿಯಾ(ಎಂಎಐ) ಬಂಪರ್​ ಆಫರ್ ನೀಡಿದೆ.​

ಮಲ್ಟಿಪ್ಲೆಕ್ಸ್​ಗಳಲ್ಲಿ ಸಿನಿಮಾ ನೋಡಬೇಕು ಎಂದರೆ ಪ್ರೇಕ್ಷಕರು ಪ್ರತಿ ಟಿಕೆಟ್​ಗೆ ದುಬಾರಿ ಬೆಲೆ ತೆರಬೇಕಾಗುತ್ತದೆ. ಹೈ-ಬಜೆಟ್​ ಸಿನಿಮಾಗಳ ಟಿಕೆಟ್​ ಬೆಲೆ ಸಾವಿರ ರೂಪಾಯಿ ದಾಟಿದ ಉದಾಹರಣೆಯೂ ಸಾಕಷ್ಟಿದೆ. ಇದರಿಂದ ಬಡವರಿಗೆ ಮತ್ತು ಮಧ್ಯಮವರ್ಗದ ಸಿನಿಪ್ರಿಯರು ಮಲ್ಟಿಪ್ಲೆಕ್ಸ್​​​​ಗಳಲ್ಲಿ ಸಿನಿಮಾ ನೋಡುವುದು ದೂರದ ಮಾತು. ಆದರೆ, ಇಂದು ಅವರಿಗೋಸ್ಕರ ಬಂಪರ್​ ಆಫರ್ ನೀಡಲಾಗಿದೆ.

ಇಂದು ಮಲ್ಟಿಪ್ಲೆಕ್ಸ್​ಗಳಲ್ಲಿ ಸಿನಿಮಾ ನೋಡಿದರೆ ಪ್ರತಿ ಟಿಕೆಟ್​ ಬೆಲೆ ಕೇವಲ 75 ರೂಪಾಯಿ ಇರಲಿದೆ. ಸೆ.23ರಂದು (ಇಂದು) ‘ರಾಷ್ಟ್ರೀಯ ಸಿನಿಮಾ ದಿನ‘ ಆಚರಿಸಲಾಗುತ್ತಿದ್ದು, ಈ ಪ್ರಯುಕ್ತ ಕೇವಲ 75 ರೂಪಾಯಿಗೆ ಟಿಕೆಟ್​ ಮಾರಾಟ ಮಾಡಲು ಎಂಎಐ ನಿರ್ಧರಿಸಿದೆ.

‘ಮಲ್ಟಿಪ್ಲೆಕ್ಸ್​ ಅಸೋಸಿಯೇಷನ್​ ಆಫ್​ ಇಂಡಿಯಾ’ ವತಿಯಿಂದ ಈ ಭರ್ಜರಿ ಆಫರ್ ಅನ್ನು ಪ್ರೇಕ್ಷಕರಿಗೆ​ ನೀಡಲಾಗುತ್ತಿದೆ. ಈ ಕುರಿತು ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ಪಿವಿಆರ್​, ಐನಾಕ್ಸ್​, ಸಿನಿಪೊಲಿಸ್​ ಸೇರಿದಂತೆ ಹಲವು ಮಲ್ಟಿಪ್ಲೆಕ್ಸ್​ ಕಂಪನಿಗಳು ಕೈ ಜೋಡಿಸಿವೆ. ದೇಶಾದ್ಯಂತ ಇರುವ ಅಂದಾಜು 4 ಸಾವಿರ ಸ್ಕ್ರೀನ್​ಗಳಲ್ಲಿ ಈ ಆಫರ್​ ನೀಡಲಾಗುತ್ತಿದೆ. ಈ ಸುದ್ದಿ ಕೇಳಿ ಸಿನಿಪ್ರಿಯರು ಖುಷಿಪಟ್ಟಿದ್ದಾರೆ.

ಕೊರೊನಾ ನಂತರ ಜನರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವ ಟ್ರೆಂಡ್​ ಕಮ್ಮಿ ಆಗಿದೆ. ಕೆಲವೇ ಕೆಲವು ಚಿತ್ರಗಳಿಗೆ ಮಾತ್ರ ಜನರಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಉಳಿದಂತೆ ಅನೇಕ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಸೊರಗಿವೆ. ಕೊವಿಡ್​ ನಂತರದ ಈ ಕಾಲಘಟ್ಟದಲ್ಲಿ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರದತ್ತ ಸೆಳೆಯಲು ಈ ರೀತಿ ಆಫರ್​ ನೀಡಲಾಗುತ್ತಿದೆ. ಇಂದು ಇಡೀ ದೇಶಾದ್ಯಂತ ಇರುವ ಮಲ್ಟಿಪ್ಲೆಕ್ಸ್​ನಲ್ಲಿ ‘ರಾಷ್ಟ್ರೀಯ ಸಿನಿಮಾ ದಿನ’ವನ್ನು ಆಚರಿಸಲಾಗುತ್ತಿದೆ.

‘ಬ್ರಹ್ಮಾಸ್ತ್ರ’ ಮತ್ತು ಕನ್ನಡದ ‘ಮಾನ್ಸೂನ್​ ರಾಗ’ ಚಿತ್ರ ಸೇರಿದಂತೆ ಹಲವು ಸಿನಿಮಾಗಳು ಮಲ್ಟಿಪ್ಲೆಕ್ಸ್​ನಲ್ಲಿ ಪ್ರದರ್ಶನ ಕಾಣುತ್ತಿವೆ. ಆ ಎಲ್ಲ ಸಿನಿಮಾಗಳ ಬೆಲೆ ಇಂದು ಮಲ್ಟಿಪ್ಲೆಕ್ಸ್​ಗಳಲ್ಲಿ ಕೇವಲ 75 ರೂಪಾಯಿ ನೀಡಿ ವೀಕ್ಷಿಸಬಹುದಾಗಿದೆ. ಆನ್​ಲೈನ್​ ಆ್ಯಪ್​ಗಳ ಮೂಲಕ ಟಿಕೆಟ್​ ಬುಕ್​ ಮಾಡಿದರೆ ಹೆಚ್ಚುವರಿ ಶುಲ್ಕ ಆಗಲಿದೆ.

ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (MAI) ಸೆಪ್ಟೆಂಬರ್ 16 ರಂದು ಆಚರಿಸಲು ಯೋಜಿಸಲಾಗಿದ್ದ ರಾಷ್ಟ್ರೀಯ ಸಿನಿಮಾ ದಿನವನ್ನು ಸೆಪ್ಟೆಂಬರ್ 23ರಂದು ನಡೆಸಲಾಗುವುದು ಎಂದು ತಿಳಿಸಿತ್ತು. ಸೆ.16ಕ್ಕೆ ರಾಷ್ಟ್ರೀಯ ಸಿನಿಮಾ ದಿನ ಆಚರಿಸಲು ಎಂಎಐ ನಿರ್ಧರಿಸಿತ್ತು. ಅಂದು ಚಲನಚಿತ್ರ ಟಿಕೆಟ್‌ಗಳ ಬೆಲೆ ಕೇವಲ 75 ರೂಪಾಯಿ ಇರಲಿದೆ ಎಂದು ಬಂಪರ್​ ಆಫರ್​ ಘೋಷಿಸಿತ್ತು. ಆದರೆ, ಇದೀಗ ಕಾರ್ಯಕ್ರಮವನ್ನು ಸೆ.23ಕ್ಕೆ ಮುಂದೂಡಲಾಗಿದ್ದು, ಈ ದಿನ ಚಲನಚಿತ್ರ ಟಿಕೆಟ್‌ಗಳ ಬೆಲೆ ಕೇವಲ 75 ರೂಪಾಯಿ ಇರಲಿದೆ.

ಓದಿ: ಸೆ.23ಕ್ಕೆ ರಾಷ್ಟ್ರೀಯ ಸಿನಿಮಾ ದಿನಾಚರಣೆ ಮುಂದೂಡಿಕೆ

ಇನ್ನೂ ತೆಲಂಗಾಣ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಈ ಆಫರ್​ ಇರುವುದಿಲ್ಲ. ಇದಕ್ಕೆ ಕಾರಣ ಸಿನಿಮಾ ಟಿಕೆಟ್​​​ಗಳ ಮೇಲೆ ಅಲ್ಲಿನ ಸರ್ಕಾರ ನಿಯಂತ್ರಣ ಹೊಂದಿರುವುದು ಇದಕ್ಕೆ ಕಾರಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.