120 ವಂಚಕ ಆ್ಯಪ್ಗಳನ್ನು ಪ್ಲೇಸ್ಟೋರ್ನಿಂದ ತೆಗೆಯುವಂತೆ ಪೊಲೀಸರ ಮನವಿ

120 ವಂಚಕ ಆ್ಯಪ್ಗಳನ್ನು ಪ್ಲೇಸ್ಟೋರ್ನಿಂದ ತೆಗೆಯುವಂತೆ ಪೊಲೀಸರ ಮನವಿ
120 ಲೋನ್ ಆ್ಯಪ್ಗಳನ್ನು ಪ್ಲೇಸ್ಟೋರಿನಿಂದ ಕಿತ್ತೆಸೆಯುವಂತೆ ದಕ್ಷಿಣ ವಿಭಾಗದ ಸಿಇಎನ್ ಪೊಲೀಸರು ಪತ್ರ ರವಾನಿಸಿದ್ದಾರೆ. ತ್ವರಿತ ಲೋನ್ ಹೆಸರಲ್ಲಿ ಗ್ರಾಹಕರ ಕಾಂಟ್ಯಾಕ್ಟ್, ಫೋಟೋಸ್ ಪಡೆಯುತ್ತಿದ್ದ ಆ್ಯಪ್ ಗಳು ಹೆಚ್ಚಿನ ಹಣಕ್ಕೆ ಬೇಡಿಕೆ ಇಡುತ್ತಿದ್ದವು. ಹಣ ಪಾವತಿಸದಿದ್ದರೆ ಗ್ರಾಹಕರ ಕಾಂಟ್ಯಾಕ್ಟ್ ನಲ್ಲಿರುವ ವ್ಯಕ್ತಿಗಳಿಗೆ ಕರೆ ಮಾಡಿ ಅಸಭ್ಯವಾಗಿ ಮಾತನಾಡುವುದಲ್ಲದೇ, ಅಶ್ಲೀಲ ಫೋಟೋ, ವಿಡಿಯೋಗಳನ್ನ ರವಾನಿಸುವ ಮೂಲಕ ಕಿರುಕುಳ ನೀಡುತ್ತಿವೆ ಎಂದು ಹೇಳಲಾಗಿದೆ.
ಬೆಂಗಳೂರು: ಆನ್ಲೈನ್ನಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡುವುದಾಗಿ ವಂಚಿಸುತ್ತಿರುವ ಪ್ರಕರಣಗಳ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದ್ದು, ಇವುಗಳ ವಿರುದ್ಧ ಅನೇಕ ಜನರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮೊದಲಿಗೆ ಕಡಿಮೆ ಬಡ್ಡಿಗೆ ಸಾಲ ನೀಡುವುದಾಗಿ ಆಸೆ ಒಡ್ಡುವುದು ನಂತರ ಅದಕ್ಕೆ ಹೆಚ್ಚಿನ ದರದಲ್ಲಿ ಬಡ್ಡಿ ಪಡೆಯುವುದು, ಕಟ್ಟದೇ ಹೋದರೆ ಬೆದರಿಕೆ ಹಾಕುವುದು. ಇದರಿಂದ ಆತ್ಮಹತ್ಯೆ ಮಾಡಿಕೊಂಡಿರುವಂತಹ ಪ್ರಕರಣಗಳೂ ಬೆಳಕಿಗೆ ಬಂದಿವೆ.
ಇದೀಗ ಇಂತಹ 120 ವಂಚಕ ಆ್ಯಪ್ಗಳನ್ನ ಕಿತ್ತೆಸೆಯುವಂತೆ ಗೂಗಲ್ ಪ್ಲೇ ಸ್ಟೋರ್ಗೆ ದಕ್ಷಿಣ ವಿಭಾಗದ ಸಿಇಎನ್ ಪೊಲೀಸರು ಪತ್ರ ರವಾನಿಸಿದ್ದಾರೆ. ತ್ವರಿತ ಲೋನ್ ಹೆಸರಲ್ಲಿ ಗ್ರಾಹಕರ ಕಾಂಟ್ಯಾಕ್ಟ್, ಫೋಟೋಸ್ ಪಡೆಯುತ್ತಿದ್ದ ಆ್ಯಪ್ಗಳು ಹೆಚ್ಚಿನ ಹಣಕ್ಕೆ ಬೇಡಿಕೆ ಇಡುತ್ತಿದ್ದವು. ಹಣ ಪಾವತಿಸದಿದ್ದರೆ ಗ್ರಾಹಕರ ಕಾಂಟ್ಯಾಕ್ಟ್ ನಲ್ಲಿರುವ ವ್ಯಕ್ತಿಗಳಿಗೆ ಕರೆ ಮಾಡಿ ಅಸಭ್ಯವಾಗಿ ಮಾತನಾಡುವುದಲ್ಲದೇ, ಅಶ್ಲೀಲ ಫೋಟೋ, ವಿಡಿಯೋಗಳನ್ನ ರವಾನಿಸುವ ಮೂಲಕ ಕಿರುಕುಳ ನೀಡುತ್ತಿದ್ದವು.
ಲಾಕ್ ಡೌನ್ ಸಂದರ್ಭದಲ್ಲಿ ಲೋನ್ ಆ್ಯಪ್ ಗಳಿಂದ ಸಾಕಷ್ಟು ಜನ ತೊಂದರೆ ಅನುಭವಿಸಿದ್ದು ಆತ್ಮಹತ್ಯೆಗೆ ಶರಣಾದಂತಹ ಘಟನೆಗಳು ಸಹ ವರದಿಯಾಗಿದ್ದವು.
ಇದನ್ನೂ ಓದಿ:ನಿಮ್ಮ ವಯಸ್ಸು ನಮೂದಿಸಲು ಎರಡು ಆಯ್ಕೆ ನೀಡಿದ ಇನ್ಸ್ಟಾಗ್ರಾಮ್!
