ಚಲಿಸುತ್ತಿದ್ದ ಬಸ್​ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ.. ತಪ್ಪಿಸಿಕೊಳ್ಳಲು ಬಸ್​ನಿಂದ ಜಿಗಿದ ಮಹಿಳೆ

author img

By

Published : Jan 25, 2023, 8:43 PM IST

attempt-to-rape-with-darjeeling-woman-in-running-bus-in-purnea

ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಗಳಿಂದ ತಪ್ಪಿಸಿಕೊಳ್ಳಲು ಚಲಿಸುತ್ತಿದ್ದ ಬಸ್​ನಿಂದ ಜಿಗಿದು ಮಹಿಳೆ - ಮಹಿಳೆಯ ಸಹಾಯಕ್ಕೆ ಬಾರದ ಬಸ್​ನ ಚಾಲಕ ಮತ್ತು ಕಂಡಕ್ಟರ್ - ಉತ್ತರ ಪ್ರದೇಶದಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ.

ಪೂರ್ಣಿಯಾ (ಬಿಹಾರ) : ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಎರಡು ಅಮಾನವೀಯ ಮತ್ತು ಹೇಯ ಕೃತ್ಯಗಳು ಮಹಿಳೆಯರ ಮೇಲೆ ನಡೆದಿವೆ. ಪಶ್ಚಿಮ ಬಂಗಳಾದ ಡಾರ್ಜಿಲಿಂಗ್​ ಮೂಲದ 35 ವರ್ಷದ ಮಹಿಳೆಯ ಮೇಲೆ ಚಲಿಸುತ್ತಿದ್ದ ಪೂರ್ಣಿಯಾ ಜಿಲ್ಲೆಯಲ್ಲಿ ಬಸ್​ನಲ್ಲಿ ಐವರು ಆರೋಪಿಗಳು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಅವರಿಂದ ತಪ್ಪಿಸಿಕೊಳ್ಳಲು ಚಲಿಸುತ್ತಿದ್ದ ಬಸ್​ನಿಂದ ಮಹಿಳೆ ಜಿಗಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಿಹಾರದ ಪೂರ್ಣಿಯ ಎಂಬಲ್ಲಿ ನಡೆದಿದೆ. ಸದ್ಯ ಸಂತ್ರಸ್ತೆಯ ಸ್ಥಿತಿ ಗಂಭೀರವಾಗಿದ್ದು, ಪೂರ್ಣಿಯಾದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸ್​ ಮೂಲಗಳ ಪ್ರಕಾರ ಐವರು ಆರೋಪಿಗಳು ಮಹಿಳೆಯ ಅತ್ಯಾಚಾರಕ್ಕೆ ಯತ್ನಿಸುತ್ತಿದ್ದಾಗ ಬಸ್ಸಿನ ಚಾಲಕ ಮತ್ತು ಕಂಡಕ್ಟರ್​ ಕಣ್ಣು ಮುಚ್ಚಿ ಕುಳಿತ್ತಿದ್ದಳು ಎಂದು ಸಂತ್ರಸ್ತೆ ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ. ''ನಾನು ಬಸ್​ ಹತ್ತಿದಾಗ ತುಂಬ ಜನ ಪ್ರಯಾಣಿಕರಿದ್ದರು, ಆದರೆ ಸಮಯ ಕಳೆದಂತೆ ಬಸ್​ನಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಯಿತು, ಸ್ವಲ್ಪ ದೂರ ಪ್ರಯಾಣಿಸಿದ ಬಳಿಕ ಇಡೀ ಬಸ್​​ನಲ್ಲಿ ಬೇರೆ ಯಾರು ಪ್ರಯಾಣಿಕರು ಇರಲಿಲ್ಲ ಕೇವಲ ನಾನು ಮತ್ತು ಆ ಐವರು ಪುರುಷರು, ಮೊದಲಿಗೆ ನನ್ನನ್ನು ಕೆಟ್ಟ ದೃಷ್ಠಿಯಿಂದ ನೋಡಿದರು, ನಂತರ ಅಶ್ಲೀಲ ಸನ್ನೆಗಳನ್ನು ಮಾಡಲು ಪ್ರಾರಂಭಿಸಿದರು, ಆ ಐವರು ಜನ ಹತ್ತಿರ ಬಂದು ನನ್ನನ್ನು ಸುತ್ತುವರೆದು ಅತ್ಯಾಚಾರ ಮಾಡಲು ಯತ್ನಿಸಿದರು. ಚಾಲಕ ಮತ್ತು ಕಂಡಕ್ಟರ್​ಗೆ ಸಹಾಯ ಮಾಡಿ ಎಂದು ಕೇಳಿಕೊಂಡರು ಅವರು ನನ್ನ ಕಡೆ ಗಮನ ಹರಿಸಲಿಲ್ಲ ಮತ್ತು ಸಹಾಯಕ್ಕೂ ಬರಲಿಲ್ಲ'' ಎಂದು ಸಂತ್ರಸ್ತೆ ಹೇಳಿದ್ದಾರೆ.

ಇದನ್ನೂ ಓದಿ : ಅತಿ ವೇಗದಿಂದ ಬಂದ ಟಿಪ್ಪರ್​, ರಸ್ತೆ ಪಕ್ಕದಲ್ಲಿ ಮೇಯುತ್ತಿದ್ದ 30ಕುರಿಗಳು ಸಾವು

ಸಂತ್ರಸ್ತೆಯು ಬೇರೆ ದಾರಿ ಇಲ್ಲದೆ ಚಲಿಸುತ್ತಿದ್ದ ಬಸ್​ನಿಂದ ಜಿಗಿದು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಮಹಿಳೆಯೊಬ್ಬಳು ಚಲಿಸುವ ಬಸ್​ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ ಎಂದು ಸ್ಥಳೀಯರು ಪೊಲೀಸ್​ ಗಸ್ತು ತಂಡಕ್ಕೆ ಮಾಹಿತಿ ಕೊಟ್ಟಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಸಂತ್ರಸ್ತೆಯು ತಡರಾತ್ರಿ ಪ್ರಯಾಣಿಸಿದ್ದ ಬಸ್​ ಪತ್ತೆ ಹಚ್ಚಿದ್ದು, ಶೀಘ್ರವೇ ಆರೋಪಿಗಳನ್ನು ಸೆರೆ ಹಿಡಿಯುವುದಾಗಿ ತಿಳಿಸಿದ್ದಾರೆ.

ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ : ಎಸಿ ಫಸ್ಟ್​ ಕೋಚ್​ನಲ್ಲಿ ಟಿಕೆಟ್​ ಕೊಡಿಸುವುದಾಗಿ ನಂಬಿಸಿ ಚಲಿಸುತ್ತಿದ್ದ ರೈಲಿನಲ್ಲಿ ಟಿಟಿ ಮತ್ತು ಇನ್ನೋರ್ವ ವ್ಯಕ್ತಿ ಸೇರಿ 33 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಸಂಭಾಲ್​ನಲ್ಲಿ ನಡೆದಿದೆ. ಈ ಬಗ್ಗೆ ಸಂತ್ರಸ್ತ ಮಹಿಳೆಯು ರೈಲ್ವೆ ಪೊಲೀಸರಿಗೆ ಶನಿವಾರ ದೂರು ನೀಡಿದ್ದರು.

ಮಹಿಳೆಯ ದೂರಿನನ್ವಯ ತನಿಖೆ ಆರಂಭಿಸಿದ ರೈಲ್ವೆ ಪೊಲೀಸರು ರೈಲ್ವೆ ಟಿಕೆಟ್​ ಪರೀಕ್ಷಕ ಗೋಪಿ ಎಂಬ ಆರೋಪಿಯನ್ನ ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ತಲೆ ಮರೆಸಿಕೊಂಡಿದ್ದಾರೆ ಎಂದು ರೈಲ್ವೆ ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದರು.

ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ: ಇಬ್ಬರು ಆರೋಪಿಗಳ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.