ಕೆಜಿಎಫ್ ಬಾಬು ವಿರುದ್ಧ 21 FIR.. ಈ ಬಗ್ಗೆ ದಾಖಲೆ ಇವೆ: ಸಚಿವ ಎಸ್.ಟಿ.ಸೋಮಶೇಖರ್

author img

By

Published : Dec 2, 2021, 5:10 PM IST

Updated : Dec 2, 2021, 5:23 PM IST

s t somashekar alligation

ಕೆಜಿಎಫ್ ಬಾಬು ವಿರುದ್ಧ ವಿವಿಧ ಪೊಲೀಸ್ ಠಾಣೆಯಲ್ಲಿ 21 ಎಫ್​ಐಆರ್​ ದಾಖಲಾಗಿವೆ. ಈ ಬಗ್ಗೆ ದಾಖಲೆ ಇಟ್ಟುಕೊಂಡೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದೇನೆ. ಇದರಲ್ಲಿ ಯಾರ ತೇಜೋವಧೆ ಮಾಡುವ ಉದ್ದೇಶವಿಲ್ಲ ಎಂದು ಸಹಕಾರ ಸಚಿವ ಎಸ್​.ಟಿ. ಸೋಮಶೇಖರ್​ ತಿಳಿಸಿದರು.

ಶಿವಮೊಗ್ಗ: ಕೆಜಿಎಫ್ ಬಾಬು ವಿರುದ್ಧ ವಿವಿಧ ಪೊಲೀಸ್ ಠಾಣೆಯಲ್ಲಿ 21 ಎಫ್​ಐಆರ್​ ದಾಖಲಾಗಿವೆ. ಈ ಬಗ್ಗೆ ದಾಖಲೆ ಇಟ್ಟುಕೊಂಡೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದೇನೆ. ಇದರಲ್ಲಿ ಯಾರ ತೇಜೋವಧೆ ಮಾಡುವ ಉದ್ದೇಶವಿಲ್ಲ ಎಂದು ಸಹಕಾರ ಸಚಿವ ಎಸ್​.ಟಿ. ಸೋಮಶೇಖರ್​ ತಿಳಿಸಿದರು.

ಸಚಿವ ಎಸ್.ಟಿ.ಸೋಮಶೇಖರ್

ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಕುರಿತು ನಾಳೆ(ಡಿ.4ರಂದು) ದಾಖಲೆಗಳೊಂದಿಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡಸುವೆ. ನಾನು ಯಾವುದೇ ದಾಖಲಾತಿ ಇಲ್ಲದೇ ಸರ್ಕಾರದ ಸಚಿವನಾಗಿ ಮಾತನಾಡುವುದಕ್ಕೆ ಹೋಗುವುದಿಲ್ಲ. ಬಾಬು ವಿರುದ್ದ ಅವರ ಮಗಳೇ ಎಫ್​ಆರ್​ಐ ಮಾಡಿದ್ದಾರೆ ಎಂದರು.

ಉದ್ದೇಶಪೂರ್ವಕವಾಗಿ ನಾನು ಯಾರನ್ನು ತೇಜೋವಧೆ ಮಾಡುವುದಿಲ್ಲ. ಪೊಲೀಸ್ ಠಾಣೆಯಲ್ಲಿ ದಾಖಲಾದ ಕೇಸ್​ಗಳ ಆಧಾರದ ಮೇಲೆ ನಾನು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದೇನೆ. ಇಷ್ಟೊಂದು ಕೇಸ್​ ದಾಖಲಾದ ವ್ಯಕ್ತಿಗೆ ಕಾಂಗ್ರೆಸ್ ಹೇಗೆ ಟಿಕೆಟ್ ನೀಡಿತು ಎಂದು ಪ್ರಶ್ನಿಸಿದ್ದೇನೆ ಎಂದರು.

ಧ್ರುವ ನಾರಾಯಣ್ ಅವರಿಗೆ ಕೆಜಿಎಫ್ ಬಾಬು ಅವರ ಬಗ್ಗೆ ವಿಚಾರ ತಿಳಿದಿಲ್ಲ. ಬಾಬು ವಿರುದ್ಧ ದಾಖಲಾದ ಎಲ್ಲಾ ಎಫ್​ಐಆರ್​ ನನ್ನ ಮೊಬೈನಲ್ಲಿಯೇ ಇವೆ. ಅದನ್ನು ಅವರಿಗೆ ನೀಡುತ್ತೇನೆ. ನೋಡಿ ಬಳಿಕ ನನ್ನ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದರು.

ಎಸ್.ಆರ್.ವಿಶ್ವನಾಥ್​ಗೆ ರಕ್ಷಣೆ ನೀಡಬೇಕು:

ಶಾಸಕ ಎಸ್.ಆರ್.ವಿಶ್ವನಾಥ್ ಕೊಲೆಗೆ ಸಂಚು ವಿಚಾರ ಕೇಳಿ ಮನಸ್ಸಿಗೆ ತುಂಬಾ ನೋವಾಯಿತು. ಬೆಂಗಳೂರಿಗೆ ಹೋದ ನಂತರ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿ ವಿಶ್ವನಾಥ್​ಗೆ ರಕ್ಷಣೆ ನೀಡಲು ಕೋರುತ್ತೇನೆ ಎಂದರು.

ಸಂಚಿನಲ್ಲಿ ಭಾಗಿಯಾದವರನ್ನು ಬಂಧಿಸಿ, ಜನಪ್ರತಿನಿಧಿಗಳು ಮುಕ್ತವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕೆಂದು ಸಿಎಂ, ಗೃಹ ಸಚಿವರಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು ಎಂದರು.

ಇದನ್ನೂ ಓದಿ: 'ಕೈ' ಜಾರಿದ ತವರಿನಲ್ಲಿ ಪರಿಷತ್ ಮೂಲಕ ಮತ್ತೆ ಕಮಲ ಅರಳಿಸಲು ಮುಂದಾದ ಬಿಎಸ್​ವೈ

Last Updated :Dec 2, 2021, 5:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.