ಅಕ್ರಮ ಆಸ್ತಿ ಗಳಿಕೆ: ರುದ್ರೇಶಪ್ಪಗೆ ಡಿಸೆಂಬರ್ 7ರ ತನಕ ನ್ಯಾಯಾಂಗ ಬಂಧನ

author img

By

Published : Nov 25, 2021, 10:56 PM IST

judicial-custody-of-rudreshappa

ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಗದಗ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪನವರ ಮನೆ, ಕಚೇರಿ ಮೇಲೆ ಎಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗಾಗಿ ಅವರನ್ನು ಡಿಸೆಂಬರ್​ 7ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಶಿವಮೊಗ್ಗ: ಎಸಿಬಿ ದಾಳಿಗೆ ಒಳಗಾಗಿದ್ದ ಗದಗ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪನವರಿಗೆ ಡಿಸೆಂಬರ್​ 7ರ ತನಕ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಅಕ್ರಮ ಆಸ್ತಿಗಳಿಕೆ ಸಂಬಂಧಪಟ್ಟಂತೆ ನಿನ್ನೆ ರುದ್ರೇಶಪ್ಪನವರ ಗದಗ ಜಿಲ್ಲೆಯ ಬಾಡಿಗೆ ಮನೆ ಹಾಗೂ ಕಚೇರಿ‌ ಸೇರಿದಂತೆ ಶಿವಮೊಗ್ಗದ ಎರಡು ಮನೆಗಳ ಮೇಲೆ ದಾಳಿ ನಡೆಸಲಾಗಿತ್ತು. ಈ ದಾಳಿಯ ವೇಳೆ ರುದ್ರೇಶಪ್ಪನವರ ಚಾಲುಕ್ಯ ನಗರದ ಮನೆಯಲ್ಲಿ 9.5 ಕೆ.ಜಿ ಬಂಗಾರ, 3 ಕೆ.ಜಿ ಬೆಳ್ಳಿ, 15 ಲಕ್ಷ ರೂ ಹಣ, 4 ಸೈಟು, 2 ಕಾರು, ಎರಡು ಮನೆಗಳು ಇರುವುದು ಪತ್ತೆಯಾಗಿತ್ತು‌.

ರುದ್ರೇಶಪ್ಪನಿಗೆ ಡಿಸಂಬರ್ 7ರ ತನಕ ನ್ಯಾಯಾಂಗ ಬಂಧನ

ಇಂದು ಎಸ್​ಬಿಐ ಬ್ಯಾಂಕ್ ಲಾಕರ್ ತೆರೆದಾಗ ಖಾಲಿ ಇರುವುದನ್ನು ಕಂಡು ಅಧಿಕಾರಿಗಳು ದಂಗಾಗಿದ್ದರು. ಬ್ಯಾಂಕ್ ಲಾಕರ್ ತೆರೆದ ನಂತರ ಎಸಿಬಿ ಪೊಲೀಸರು ರುದ್ರೇಶಪ್ಪನನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಇಂದು ರಾತ್ರಿ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ್ದಾರೆ. ಇನ್ನೂ ಹೆಚ್ಚಿನ ವಿಚಾರಣೆಗೆ ಅವಕಾಶ ಕಲ್ಪಿಸಬೇಕೆಂದು ವಿನಂತಿಯ ಮೇರೆಗೆ ನ್ಯಾಯಾಧೀಶರು ಡಿಸಂಬರ್ 7ರ ತನಕ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.