ಸಿದ್ದರಾಮೋತ್ಸವಕ್ಕೆ ಬಂದಿದ್ದ ಕಾರ್ಯಕರ್ತ ಅಪಘಾತದಲ್ಲಿ ಸಾವು: 5 ಲಕ್ಷ ಪರಿಹಾರ ಘೋಷಿಸಿದ ಜಮೀರ್

author img

By

Published : Aug 6, 2022, 10:48 AM IST

Etv Bharat,ಅಪಘಾತದಲ್ಲಿ ಮೃತರ ಕುಟುಂಬಕ್ಕೆ ಜಮೀರ್ ಪರಿಹಾರ,jammer help

ಸಿದ್ದರಾಮೋತ್ಸವ ಕಾರ್ಯಕ್ರಮದಿಂದ ತೆರಳುವಾಗ ಅಪಘಾತ. ಮೃತ ಕಾಂಗ್ರೆಸ್ ಕಾರ್ಯಕರ್ತನಿಗೆ ಜಮೀರ್ ಅಹಮ್ಮದ್ 5 ಲಕ್ಷ ರೂ ಪರಿಹಾರ ಘೋಷಣೆ.

ಮೈಸೂರು: ಸಿದ್ದರಾಮೋತ್ಸವ ಕಾರ್ಯಕ್ರಮ ಮುಗಿಸಿ ವಾಪಸ್ ಊರಿಗೆ ಹೋಗುವ ವೇಳೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಶಾಸಕ ಜಮೀರ್ ಅಹಮ್ಮದ್ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ದಾವಣಗೆರೆಯಿಂದ ಹಿಂದಿರುಗುವ ವೇಳೆ ಪಿರಿಯಾಪಟ್ಟಣ ತಾಲೂಕಿನ ಹಲಗನಹಳ್ಳಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ಫಸಿ ಉದ್ದಿನ್(51) ಅಪಘಾತದಲ್ಲಿ ಮೃತಪಟ್ಟಿದ್ದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಾ. ಬಿಜೆ ವಿಜಯ್ ಕುಮಾರ್ ಅವರು ಮೃತ ಬಡಕುಟುಂಬದ ಪರಿಸ್ಥಿತಿಯನ್ನು ಜಮೀರ್ ಅಹಮ್ಮದ್ ಅವರಿಗೆ ಕರೆ ಮಾಡಿ ವಿವರಿಸಿದ್ದರು. ಆ ಬಳಿಕ ಜಮೀರ್ ಪರಿಹಾರ ಘೋಷಿಸಿದ್ದಾರೆ. ಆಗಸ್ಟ್ 17 ರಂದು ಹಲಗನಹಳ್ಳಿ ಮೃತರ ಕುಟುಂಬಕ್ಕೆ ಜಮೀರ್ ಭೇಟಿ ನೀಡಿ, ಐದು ಲಕ್ಷ ಪರಿಹಾರದ ಚೆಕ್ ವಿತರಿಸಲಿದ್ದಾರೆ. ಹಾಗೆಯೇ ಭವಿಷ್ಯದಲ್ಲಿ ಕುಟುಂಬಕ್ಕೆ ಸ್ಪಂದಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆ.7 ರಂದು ಮೃತರ ಮನೆಗೆ ಖುದ್ದು ಭೇಟಿ ಮಾಡಿ ಸಾಂತ್ವನ ಹೇಳಲಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತ ಫಸಿ ಉದ್ದಿನ್
ಕಾಂಗ್ರೆಸ್ ಕಾರ್ಯಕರ್ತ ಫಸಿ ಉದ್ದಿನ್

ಸಿದ್ದರಾಮೋತ್ಸವಕ್ಕೆ ಬಂದಿದ್ದ ಕಾರ್ಯಕರ್ತ ಅಪಘಾತದಲ್ಲಿ ಸಾವು: ಸಿದ್ದರಾಮಯ್ಯ ಅವರ 75ನೇ ಜನ್ಮ ದಿನ ಆಚರಿಸಲು ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದ ಅದ್ದೂರಿ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಜನ ಆಗಮಿಸಿ ಯಶಸ್ವಿಗೊಳಿಸಿದ್ದಾರೆ. ಈ ಕಾರ್ಯಕ್ರಮ ಮುಗಿಸಿ ತೆರಳುವಾಗ ಅಪಘಾತ ಸಂಭವಿಸಿ ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟಿದ್ದರು.

(ಇದನ್ನೂ ಓದಿ: ಸಿದ್ದರಾಮೋತ್ಸವಕ್ಕೆ ತೆರಳುತ್ತಿದ್ದ ವಾಹನ ಅಪಘಾತ: ಒಬ್ಬನ ಸಾವು, 12 ಮಂದಿಗೆ ಗಾಯ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.