ಸಿನಿಮೀಯ ಸ್ಟೈಲ್​ನಲ್ಲಿ ಚೇಸಿಂಗ್​.. ಮಂಗಳೂರಲ್ಲಿ ಕಳ್ಳರ ಹಿಡಿದ ಪೊಲೀಸ್​-ವಿಡಿಯೋ

author img

By

Published : Jan 13, 2022, 3:15 PM IST

Updated : Jan 13, 2022, 3:22 PM IST

mangalore

ಕಳ್ಳನನ್ನು ಬಂಧಿಸಿ, ಆತನ ಬಳಿ ಇದ್ದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಪರಾರಿಯಾಗಿದ್ದ ಇನ್ನಿಬ್ಬರ ಸೆರೆಗೆ ಬಂಧಿತ ಕಳ್ಳನಿಂದ ಫೋನ್​ ಮಾಡಿಸಿದ್ದಾರೆ. ಹೇಳಿದ ಸ್ಥಳಕ್ಕೆ ಬಂದ ಕಳ್ಳನನ್ನು ಹಿಡಿಯಲು ಹೋದಾಗ ಆ ವ್ಯಕ್ತಿ ಪೊಲೀಸರನ್ನೇ ದೂಡಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಅವನನ್ನು ಸಿನಿಮೀಯ ಸ್ಟೈಲ್​ನಲ್ಲಿ ಬೆನ್ನಟ್ಟಿ ಹಿಡಿದಿದ್ದಾರೆ.

ಮಂಗಳೂರು: ಇಲ್ಲಿನ ನೆಹರು‌ ಮೈದಾನದ ಬಳಿ ಬಿಹಾರ ಮೂಲದ ವ್ಯಕ್ತಿಯ ಮೊಬೈಲ್ ದರೋಡೆ ಮಾಡಿ‌ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದಿದ್ದು, ಇದರ ವಿಡಿಯೋ ವೈರಲ್ ಆಗಿದೆ.

ಸಿನಿಮೀಯ ಸ್ಟೈಲ್​ನಲ್ಲಿ ಚೇಸಿಂಗ್

ಮಂಗಳೂರಿನ ಹರೀಶ್ ಪೂಜಾರಿ (32), ಅತ್ತಾವರದ ಶಮಂತ್ (20) ಬಂಧಿತರು. ಆರೋಪಿಗಳು ಬುಧವಾರ ಮಧ್ಯಾಹ್ನದ ವೇಳೆ ನೆಹರು ಮೈದಾನದ ಬಳಿ ಬಿಹಾರ ಮೂಲದ ವ್ಯಕ್ತಿಯ ಮೊಬೈಲ್ ಮತ್ತು ಇತರ ವಸ್ತುಗಳನ್ನು ದರೋಡೆ ಮಾಡಿದ್ದರು. ಈ ಸಂದರ್ಭದಲ್ಲಿ ಸಂತ್ರಸ್ತ ಕೂಗಿದಾಗ ಅಲ್ಲಿಯೇ ಇದ್ದ ಪೊಲೀಸರು ಪರಾರಿಯಾಗುತ್ತಿದ್ದ ಕಳ್ಳರನ್ನು ಬೆನ್ನಟ್ಟಿ ಓರ್ವನನ್ನು ಹಿಡಿದಿದ್ದಾರೆ.

ಬಳಿಕ ಕಳ್ಳನನ್ನು ಬಂಧಿಸಿ, ಆತನ ಬಳಿ ಇದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಪರಾರಿಯಾಗಿದ್ದ ಇನ್ನಿಬ್ಬರ ಸೆರೆಗೆ ಬಂಧಿತ ಕಳ್ಳನಿಂದ ಫೋನ್​ ಮಾಡಿಸಿದ್ದಾರೆ. ಹೇಳಿದ ಸ್ಥಳಕ್ಕೆ ಬಂದ ಕಳ್ಳನನ್ನು ಹಿಡಿಯಲು ಹೋದಾಗ ಆ ವ್ಯಕ್ತಿ ಪೊಲೀಸರನ್ನೇ ದೂಡಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಅವನ್ನೂ ಬೆನ್ನಟ್ಟಿ ಹಿಡಿದಿದ್ದಾರೆ.

ಇನ್ನೊಬ್ಬ ಆರೋಪಿ ರಾಜೇಶ್ ಎಂಬಾತ ಪರಾರಿಯಾಗಿದ್ದು, ಈತನ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ. ಈ ಕಳ್ಳರು ತಂಡ ರಚಿಸಿಕೊಂಡು ಮೊಬೈಲ್ ಮತ್ತು ಇತರ ವಸ್ತುಗಳನ್ನು ದರೋಡೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬೆಂಗಳೂರು ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸಂಚಾರಕ್ಕೆ ನಿಷೇಧ!

Last Updated :Jan 13, 2022, 3:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.