ಸ್ಥಗಿತವಾಗಿದ್ದ ಕಾರ್ಯಗಳೆಲ್ಲ ಈಗಷ್ಟೇ ಚೇತರಿಕೆ ಕಾಣುತ್ತಿವೆ.. ಭಾರತ್ ಬಂದ್ ಸೂಕ್ತವಲ್ಲ.. ಸಿಎಂ ಬೊಮ್ಮಾಯಿ

author img

By

Published : Sep 25, 2021, 6:56 PM IST

CM Basavaraj Bommai

ಪ್ರಧಾನಮಂತ್ರಿಗಳು ದೂರದೃಷ್ಟಿ ಇಟ್ಟುಕೊಂಡು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದ್ದಾರೆ. ಇದು ಅತ್ಯಂತ ಚರ್ಚಿತ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು, ಶ್ರೇಷ್ಠ ತಜ್ಞರ ಜತೆಗೆ ಚರ್ಚೆ ಮಾಡಿ ಮುಂದಿನ ಪೀಳಿಗೆಗೆ ಯಾವ ರೀತಿಯ ಶಿಕ್ಷಣ ಇರಬೇಕು ಎನ್ನುವುದರ ಕುರಿತು ಇದು ದಿಟ್ಟ ಪ್ರಯತ್ನವಾಗಿದೆ. ಬದಲಾವಣೆ ಬಂದಾಗ ಹೀಗೆಲ್ಲ ವಿರೋಧ ವ್ಯಕ್ತವಾಗುವುದು ಸಹಜ..

ಹುಬ್ಬಳ್ಳಿ : ಕೋವಿಡ್ ಕಾರಣದಿಂದಾಗಿ ಕಳೆದ ಒಂದೂವರೆ ವರ್ಷದಿಂದ ಕೆಲಸಗಳೆಲ್ಲವೂ ಸ್ಥಗಿತವಾಗಿದ್ದವು. ಈಗಷ್ಟೇ ಪುನಾರಂಭವಾಗಿ ಚೇತರಿಕೆ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತ್ ಬಂದ್​​ಗೆ ಕರೆ ನೀಡಿರುವುದು ಸೂಕ್ತವಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಭಾರತ್ ಬಂದ್​​ಗೆ ಕರೆ ನೀಡಿರುವುದರ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿರುವುದು..

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಈಗಾಗಲೇ ನಾನು ಅಧಿವೇಶನದಲ್ಲಿ ಶಾಸಕ ಬಸನಗೌಡ ಯತ್ನಾಳ್​​ ಇದ್ದಾಗಲೇ ಉತ್ತರ ನೀಡಿದ್ದೇನೆ. ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದರು.

ಪ್ರಧಾನಮಂತ್ರಿಗಳು ದೂರದೃಷ್ಟಿ ಇಟ್ಟುಕೊಂಡು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದ್ದಾರೆ. ಇದು ಅತ್ಯಂತ ಚರ್ಚಿತ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು, ಶ್ರೇಷ್ಠ ತಜ್ಞರ ಜತೆಗೆ ಚರ್ಚೆ ಮಾಡಿ ಮುಂದಿನ ಪೀಳಿಗೆಗೆ ಯಾವ ರೀತಿಯ ಶಿಕ್ಷಣ ಇರಬೇಕು ಎನ್ನುವುದರ ಕುರಿತು ಇದು ದಿಟ್ಟ ಪ್ರಯತ್ನವಾಗಿದೆ. ಬದಲಾವಣೆ ಬಂದಾಗ ಹೀಗೆಲ್ಲ ವಿರೋಧ ವ್ಯಕ್ತವಾಗುವುದು ಸಹಜ. ಭಾರತೀಯರಿಗಾಗಿ, ಭಾರತೀಯರಿಗೊಸ್ಕರ ಈ ಯೋಜನೆ ಜಾರಿಗೆ ತಂದಿದ್ದೇವೆ ಎಂದರು.

ಇದನ್ನೂ ಓದಿ: ಫ್ಲೈಓವರ್ ನಿರ್ಮಾಣಕ್ಕೆ ಅಪಸ್ವರ, ಶಾಸಕ ಬೆಲ್ಲದ್ ಹಾಗೂ ತಜ್ಞರ ನೇತೃತ್ವದಲ್ಲಿ ಸಮಿತಿ ರಚನೆ - ಪ್ರಲ್ಹಾದ್ ಜೋಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.