ಮೆಕ್ಕೆಜೋಳ ಖರೀದಿದಾರರಿಂದ ವಂಚನೆ: ರೈತರಿಗೆ ಹಣ ವಾಪಸ್ ಕೊಡಿಸಿದ ಎಸ್​ಪಿ ರಿಷ್ಯಂತ್

author img

By

Published : Jan 13, 2022, 8:07 PM IST

davanagere

ಜಿಲ್ಲೆಯಾದ್ಯಂತ ಮೆಕ್ಕೆಜೋಳ ನೀಡಿ ಮೋಸಕ್ಕೊಳಗಾದ ರೈತರಿಗೆ 2 ಕೋಟಿ 68 ಲಕ್ಷ ಹಣ ರೈತರಿಗೆ ವಾಪಸ್ ಕೊಡಿಸಿದರು. ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಸ್ತುವಾರಿ ಸಚಿವರಾದ ಭೈರತಿ ಬಸವರಾಜ್ ಅವರ ಸಮ್ಮುಖದಲ್ಲಿ ಹಣವನ್ನು ರೈತರಿಗೆ ಹಿಂದಿರುಗಿಸಲಾಯಿತು.

ದಾವಣಗೆರೆ: ಮೆಕ್ಕೆಜೋಳ ಖರೀದಿದಾರರಿಂದ ಮೋಸಕ್ಕೊಳಗಾದ ರೈತರಿಗೆ ಎಸ್​ಪಿ ಸಿ.ಬಿ.ರಿಷ್ಯಂತ್ ಅವರು ಹಣ ವಾಪಸ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಿಲ್ಲೆಯಾದ್ಯಂತ ಮೆಕ್ಕೆಜೋಳ ನೀಡಿ ಕೈಸುಟ್ಟುಕೊಂಡಿದ್ದ ರೈತರಿಗೆ 2 ಕೋಟಿ 68 ಲಕ್ಷ ಹಣವನ್ನು ಅವರು ಮತ್ತೆ ಕೊಡಿಸಿದ್ದಾರೆ. ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಸಮ್ಮುಖದಲ್ಲಿ ರೈತರಿಗೆ ಹಣ ಹಿಂದಿರುಗಿಸಲಾಯಿತು.


ಇಷ್ಟೊಂದು ಹಣ ವಾಪಸ್‌ ನೀಡುತ್ತಿರುವುದು ಸಾಮಾನ್ಯ ಸಂಗತಿಯಲ್ಲ ಎಂದು ಸಚಿವ ಭೈರತಿ ಬಸವರಾಜ್ ಎಸ್​ಪಿ ಸಿಬಿ ರಿಷ್ಯಂತ್ ಅವರನ್ನು ಹೊಗಳಿದರು.

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕು ಗಡಿಗುಡಾಳು ಗ್ರಾಮದ ವರ್ತಕ ಶಿವಲಿಂಗಯ್ಯ ಎಂಬುವರು ಮೆಕ್ಕೆಜೋಳ ಖರೀದಿ ವೇಳೆ ರೈತರಿಗೆ ವಂಚಿಸಿದ್ದರು. ಬೆಳೆ ಖರೀದಿಸಿ ಹಣ ನೀಡದೆ ತಲೆಮರೆಸಿಕೊಂಡಿದ್ದರು. ಈ ಸಂಬಂಧ ರೈತರು ಎಸ್​ಪಿ ಸಿಬಿ ರಿಷ್ಯಂತ್ ಅವರ ಬಳಿ ದೂರು ನೀಡಿದ್ದರು.

ಬಳಿಕ ಎಸ್​ಪಿ ಆಯಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಸೂಚಿಸಿದ್ದರು. ತನಿಖೆ ನಡೆಸಿದ ಪೊಲೀಸ್ ಇಲಾಖೆ ರೈತರ ಹಣ ವಾಪಸ್ ಕೊಡಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: ಯಾರು ಯಾರನ್ನೂ ಮುಗಿಸಲು ಸಾಧ್ಯವಿಲ್ಲ, ಅದು ಭಗವಂತನ ಆಟ ಎಂದ ದೇವೇಗೌಡ್ರು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.