ಮುಳುಗಡೆಯಾದ ಸೇತುವೆ ಮೇಲೆ ಲಾರಿ ಚಾಲಕನ ದುಸ್ಸಾಹಸ: ವಾಹನ ಪಲ್ಟಿ
Updated on: Aug 6, 2022, 12:56 PM IST

ಮುಳುಗಡೆಯಾದ ಸೇತುವೆ ಮೇಲೆ ಲಾರಿ ಚಾಲಕನ ದುಸ್ಸಾಹಸ: ವಾಹನ ಪಲ್ಟಿ
Updated on: Aug 6, 2022, 12:56 PM IST
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿರಡೋಣಿ - ದೊಡ್ಡಘಟ್ಟಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದ್ದು, ರಸ್ತೆ ಸಂಚಾರ ಬಂದ್ ಆಗಿದೆ. ಆದ್ರೆ ಜಲಾವೃತವಾದ ಸೇತುವೆ ಮೇಲೆ ಲಾರಿ ಚಾಲಕ ದುಸ್ಸಾಹಸ ಮಾಡಲು ಮುಂದಾಗಿದ್ದು, ಲಾರಿ ಪಲ್ಟಿಯಾಗಿದೆ.
ದಾವಣಗೆರೆ: ಭಾರಿ ಮಳೆಯಿಂದ ಮುಳುಗಡೆಯಾದ ಸೇತುವೆ ಮೇಲೆ ಚಾಲಕನೋರ್ವ ಲಾರಿ ಚಲಾಯಿಸುವ ದುಸ್ಸಾಹಸಕ್ಕೆ ಕೈ ಹಾಕಿದ ಪರಿಣಾಮ ವಾಹನ ಪಲ್ಟಿಯಾದ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿರಡೋಣಿ - ದೊಡ್ಡಘಟ್ಟಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಬಳಿ ನಡೆದಿದೆ.
ಕಳೆದ ದಿನ ರಾತ್ರಿ ಘಟನೆ ನಡೆದಿದೆ. ಸೇತುವೆ ಜಲಾವೃತವಾದ ಹಿನ್ನೆಲೆ ಮುಂದೆ ವಾಹನ ಚಲಾಯಿಸಲು ಚಾಲಕನಿಗೆ ದಾರಿ ಕಾಣದಂತಾಗಿ, ಮರಳು ತುಂಬಿದ ಲಾರಿ ಸೇತುವೆ ಬದಿಗೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಬಸವಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೊಂದಡೆ, ಮುಳುಗಡೆಯಾದ ಸೇತುವೆ ಮೇಲೆ ಜನರು ಓಡಾಡುತ್ತಿರುವುದು ಆತಂಕ ಮೂಡಿಸಿದೆ.
ಇದನ್ನೂ ಓದಿ: ಮುಳುಗಡೆಯಾದ ಸೇತುವೆ ಮೇಲೆ ಬಸ್ ಚಲಾಯಿಸಿ ದುಸ್ಸಾಹಸ ಮೆರೆದ ಚಾಲಕ
