ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಮೇಲೆ ವಾಹನ ಓಡಾಟ: ನಜ್ಜುಗುಜ್ಜಾದ ಶವ
Updated on: Nov 29, 2021, 11:11 AM IST

ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಮೇಲೆ ವಾಹನ ಓಡಾಟ: ನಜ್ಜುಗುಜ್ಜಾದ ಶವ
Updated on: Nov 29, 2021, 11:11 AM IST
ಅಪಘಾತದಲ್ಲಿ ಮೃತಪಟ್ಟ ದಾರಿಹೋಕನ ಮೇಲೆ ವಾಹನಗಳು ಓಡಾಡಿದ ಪರಿಣಾಮ ಶವ ಗುರುತು ಸಿಗದ ರೀತಿಯಲ್ಲಿ ರಸ್ತೆಗೆ ಡಾಂಬಾರು ಮೆತ್ತಿದಂತಾದ ಘಟನೆ ನೆಲಮಂಗಲ ತಾಲೂಕಿನ ಬೆಂಗಳೂರು- ತುಮಕೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ.
ನೆಲಮಂಗಲ : ರಾತ್ರಿ ವೇಳೆ ನಡೆದ ಅಪಘಾತದಲ್ಲಿ ಮೃತಪಟ್ಟ ದಾರಿಹೋಕನ ಮೇಲೆ ಬೆಳಗಿನ ವರೆಗೂ ವಾಹನಗಳು ಓಡಾಡಿದ ಪರಿಣಾಮ ಶವ ಗುರುತು ಸಿಗದ ರೀತಿಯಲ್ಲಿ ರಸ್ತೆಗೆ ಡಾಂಬಾರು ಮೆತ್ತಿದಂತಾದ ಘಟನೆ ತಾಲೂಕಿನ ಬೆಂಗಳೂರು- ತುಮಕೂರು ರಾಷ್ಟ್ರೀಯ ಹೆದ್ದಾರಿ 4ರ ರಾಯರಪಾಳ್ಯ ಬಳಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಮೇಲೆ ಹರಿದ ವಾಹನ: ಶನಿವಾರ ರಾತ್ರಿ ವೇಳೆ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಶವದ ಮೇಲೆ ರಾತ್ರಿ ಪೂರ್ತಿ ವಾಹನಗಳ ಓಡಾಟ ಮಾಡಿವೆ. ಇದರ ಪರಿಣಾಮ ರಸ್ತೆಯಲ್ಲಿ ಕಿಲೋಮೀಟರ್ ಉದ್ದಕ್ಕೆ ಚೆಲ್ಲಾಪಿಲ್ಲಿಯಾಗಿ ಮೃತ ದೇಹದ ತುಂಡುಗಳು ಬಿದ್ದಿವೆ. ಕಬ್ಬಿಣದ ಸಲಾಕೆಗಳನ್ನ ಬಳಸಿ ಮೃತನ ಮಾಂಸದ ಮುದ್ದೆಯನ್ನ ಆ್ಯಂಬುಲೆನ್ಸ್ ಸಿಬ್ಬಂದಿ ತೆಗೆಯಬೇಕಾಯಿತು.
ಮೃತ ವ್ಯಕ್ತಿಯ ಗುರುತು ಪತ್ತೆಯಾಗದ ಹಿನ್ನೆಲೆ ಚೂರು ಚೂರಾದ ಮಾಂಸದ ತುಂಡುಗಳನ್ನ ಸಂಗ್ರಹಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
