ಭಾರತ್ ಬಂದ್ : ಹಸಿರು ಪಟ್ಟಿ ಧರಿಸಿ ಖಾಸಗಿ ಶಾಲಾ ಸಂಘಟನೆಗಳಿಂದ ನೈತಿಕ ಬೆಂಬಲ

author img

By

Published : Sep 25, 2021, 8:07 PM IST

Bangalore

ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲೆಗಳನ್ನ ಬಂದ್ ಮಾಡಲು ಆಗುವುದಿಲ್ಲ. ಹಸಿರು ಬಟ್ಟೆ ಅಥವಾ ಹಸಿರು ಪಟ್ಟಿಯನ್ನು ಧರಿಸಿ ಈ ಮೂಲಕ ಭಾರತ್ ಬಂದ್​​ಗೆ ನೈತಿಕ ಬೆಂಬಲ ಸೂಚಿಸಲಾಗುವುದು ಎಂದು ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ತಿಳಿಸಿದ್ದಾರೆ..

ಬೆಂಗಳೂರು : ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಸೆ.27ರಂದು ಭಾರತ್ ಬಂದ್‌ಗೆ ಕರೆ ನೀಡಿವೆ.‌ ಈ ಹಿನ್ನೆಲೆಯಲ್ಲಿ ಖಾಸಗಿ ಶಾಲಾ ಸಂಘಟನೆಗಳು ಬಂದ್​​ಗೆ ನೈತಿಕ ಬೆಂಬಲವಷ್ಟೇ ನೀಡಲು ತೀರ್ಮಾನಿಸಿವೆ.

ಭಾರತ್ ಬಂದ್ : ಹೀಗಿದೆ ಖಾಸಗಿ ಶಾಲಾ ಸಂಘಟನೆ ಸದ್ಯಸರ ಅಭಿಪ್ರಾಯ

ಆ ದಿನದಂದು ಶಾಲಾ-ಕಾಲೇಜುಗಳನ್ನ ಮುಚ್ಚುವುದಿಲ್ಲ.‌ ಕೋವಿಡ್‌ನಿಂದಾಗಿ ಈಗಷ್ಟೇ ಶಾಲಾ-ಕಾಲೇಜು ಆರಂಭವಾಗಿವೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲೆಗಳನ್ನ ಬಂದ್ ಮಾಡಲು ಆಗುವುದಿಲ್ಲ. ಹಸಿರು ಬಟ್ಟೆ ಅಥವಾ ಹಸಿರು ಪಟ್ಟಿಯನ್ನು ಧರಿಸಿ ಈ ಮೂಲಕ ಭಾರತ್ ಬಂದ್​​ಗೆ ನೈತಿಕ ಬೆಂಬಲ ಸೂಚಿಸಲಾಗುವುದು ಎಂದು ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ತಿಳಿಸಿದ್ದಾರೆ.

ರೂಪ್ಸಾ ಬಣದ ಸದಸ್ಯರು ಕೂಡ ರೈತರಿಗೆ ನೈತಿಕ ಬೆಂಬಲ ನೀಡುತ್ತೇವೆಯೇ ವಿನಃ ಶಾಲೆಗಳನ್ನ ಬಂದ್ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಸದ್ಯ ತರಗತಿ ನಡೆಯುತ್ತಿರುವುದೇ 4-5 ದಿನ. ಈ ಮಧ್ಯೆ ಬಂದ್ ಅಂದರೆ ವಿದ್ಯಾರ್ಥಿಗಳ ಓದಿಗೆ ಕಷ್ಟವಾಗಲಿದೆ ಎಂದು ಹಾಲನೂರು ಎಸ್ ಲೇಪಾಕ್ಷಿ ತಿಳಿಸಿದರು.

ಇನ್ನು, ರೈತರು ಈಗಾಗಲೇ ಹಲವು ಬಾರಿ ಹೋರಾಟ ನಡೆಸಿದ್ದರು. ಕೇಂದ್ರ ಸರ್ಕಾರ ಯಾವುದಕ್ಕೂ ಕ್ಯಾರೇ ಎಂದಿಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಸಮಸ್ಯೆ ಬಗೆಹರಿಸಬೇಕು. ಆದರೆ, ನಿರಂಕುಶ ಪ್ರಭುತ್ವ ಅನುಸರಿಸುತ್ತಿದ್ದಾರೆ ಎಂದು ಲೋಕೇಶ್ ತಾಳಿಕಟ್ಟೆ ಹೇಳಿದರು.

ಇದನ್ನೂ ಓದಿ : ಸೋಮವಾರದಂದು ಸರ್ಕಾರಿ ಬಸ್​ಗಳು ಎಂದಿನಂತೆ ಸಂಚಾರ : ಸಾರಿಗೆ ಸಚಿವ ಶ್ರೀರಾಮುಲು ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.